LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಮುಸ್ಲಿಮರಿಗೆ ಮೀಸಲಾತಿ ನೀಡಿದ್ದು ದೇವೇಗೌಡರಲ್ಲ, ವೀರಪ್ಪ ಮೊಯ್ಲಿ ಕೊಟ್ಟಿದ್ದು'- ಜಮೀರ್ ಅಹ್ಮದ್

ರಾಮನಗರ : ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಹೆಚ್.ಡಿ.ದೇವೇಗೌಡರಲ್ಲ. ಅದನ್ನ ವೀರಪ್ಪ ಮೊಯ್ಲಿ ಕೊಟ್ಟಿದ್ದು ಅವರು ಜನರನ್ನು ದಾರಿ ತಪ್ಪಿಸುವುದು ಬೇಡ ಎಂದು ಸಚಿವ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ.

ಶನಿವಾರ ಚನ್ನಪಟ್ಟಣ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ಮನವಿ ಮಾಡ್ತೇನೆ. ಜನರನ್ನು ದಾರಿತಪ್ಪಿಸೋದು ಬೇಡ. 1994 ರಲ್ಲಿ ವೀರಪ್ಪ ಮೊಯ್ಲಿ ಕೊಟ್ಟಿದ್ದು. ಹಿಂದುಳಿದ ವರ್ಗಗಳ ಆಯೋಗಕ್ಕೆ ಮೀಸಲಾತಿ ಕುರಿತು ವರದಿ ಕಳುಹಿಸಿದ್ರು. ಆಗ ಸರ್ಕಾರ ಹೋಯ್ತು. ಸರ್ಕಾರ ಹೋದ ಮೇಲೆ ದೇವೇಗೌಡರು ಬಂದ್ರು. ವೀರಪ್ಪ ಮೊಯ್ಲಿ 6% ಗೆ ರೆಕ್ಮೆಂಡ್ ಮಾಡಿದ್ದರು. ಆದ್ರೆ ದೇವೇಗೌಡರು ಕೊಟ್ಟಿದ್ದು ಕೇವಲ 4%. ನಮಗೆ ದೇವೇಗೌಡರು ಮೋಸ ಮಾಡಿದ್ದಾರೆ. 6% ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದಿದ್ದಾರೆ.

ಜನರ ಜೋಶ್ ನೋಡಿದ್ದೇನೆ. ನಾನು ಕೂಡ ಇದನ್ನ ನಿರೀಕ್ಷೆ ಇಟ್ಟಿರಲಿಲ್ಲ. 25ರಿಂದ 30 ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ತಾರೆ ಅನ್ನೊ ವಿಶ್ವಾಸ ಇದೆ. ನಿಖಿಲ್ ಎನ್‌ಡಿಎ ಅಭ್ಯರ್ಥಿ, ಕುಮಾರಸ್ವಾಮಿಗೆ ಮುಸ್ಲಿಂ ವೋಟ್ ಬೇಕಿಲ್ಲ. ಅಲ್ಪಸಂಖ್ಯಾತರ ವೋಟ್ ಬೇಕಿಲ್ಲ ಅಂತಾ ಅವರು ಮಾತಾಡಿರೋ ವೀಡಿಯೋ ಇದೆ. ಯಾವ ಮುಖ ಇಟ್ಕೊಂಡು ಮುಸಲ್ಮಾನರ ವೋಟ್ ಕೇಳ್ತಾರೆ? ಎಂದು ಪ್ರಶ್ನಿಸಿದ್ದಾರೆ.

ಯತ್ನಾಳ್ ಹೇಳ್ತಾರೆ ಮುಸಲ್ಮಾನರು, ಗಡ್ಡ ಬಿಟ್ಟವರು, ಟೋಪಿ ಹಾಕಿದವ್ರು ನಮ್ಮ ಹತ್ತಿರ ಬರೋದು ಬೇಡ ಅಂತಾ. ಅವರನ್ನ ಒಪ್ಪಿಸೋಕೆ ಹೇಳಿ ಬಿಜೆಪಿ ಅವ್ರು ಮುಸಲ್ಮಾನರ ಪರವಾಗಿದ್ದೆವು ಅಂತಾ ಒಪ್ಪಿಸಲು ಹೇಳಿ. ಆಗ ಮುಸಲ್ಮಾನರು ಅವರ ಪಕ್ಷಕ್ಕೆ ವೋಟ್ ಹಾಕಲು ಚಿಂತನೆ ಮಾಡ್ತಾರೆ ಎಂದು ತಿಳಿಸಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: “ಸುಳ್ಳು ಹೇಳುವಂತೆ ನನ್ನನ್ನು ಬಲವಂತಪಡಿಸಿದ್ದರು” – ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹಸದನದಲ್ಲೂ ‌ಸುದ್ದಿಯಾದ ಧರ್ಮಸ್ಥಳ ಪ್ರಕರಣ: ಗೃಹ ಸಚಿವರು ಹೇಳಿದ್ದೇನು ಗೊತ್ತಾ?'ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತ'- ಪರಮೇಶ್ವರ್'ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ'- ಮುನಿಯಪ್ಪಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆ ವಿಧಿಸುವಂತಿಲ್ಲ, ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ!!540 ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಪ್ರಗತಿ: ಈಶ್ವರ ಖಂಡ್ರೆ.!