ಮೂಗಬಸವೇಶ್ವರ ರಥೋತ್ಸವ ರದ್ಧು; ಭಕ್ತಾದಿಗಳ ದರ್ಶನಕ್ಕೆ ಸೀಮಿತ
ಹೊಸಪೇಟೆ: ಕೊಟ್ಟೂರು ತಾಲ್ಲೂಕಿನ ಶ್ರೀ ಮೂಗಬಸವೇಶ್ವರ ದೇವಸ್ಥಾನದಲ್ಲಿ ಸೆ.11ರಿಂದ ನಡೆಯುವ ಜಾತ್ರಾ ಮಹೊತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಜಿಲ್ಲಾ ದಂಡಾಧಿಕಾರಿ ದಿವಾಕರ ಎಂ.ಎಸ್. ಅವರು ಆದೇಶ ಹೊರಡಿಸಿದ್ದಾರೆ.
ಕೊಟ್ಟೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಚಿರಿಬಿ ಮತ್ತು ರಾಂಪುರ ಗ್ರಾಮಗಳಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ಗ್ರಾಮಕ್ಕೆ ಹೊಂದಿಕೊAಡಿರುವ ಮೂಗಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೆ.11ರಂದು ನಡೆಯಲಿರುವ ರಥೋತ್ಸವ ಸೆ.12 ಮತ್ತು 13ರಂದು ನಡೆಯುವ ಕುಸ್ತಿ ಪಂದ್ಯಾವಳಿ ಮತ್ತು ಇನ್ನಿತರೆ ಪಲ್ಲಕ್ಕಿ ಉತ್ಸವ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಕೇವಲ ಭಕ್ತಾದಿಗಳಿಗೆ ದರ್ಶನ ವ್ಯವಸ್ಥೆ, ಹಣ್ಣು ಕಾಯಿ ಕೈಗೊಳ್ಳಲು ಮಾತ್ರ ಅವಕಾಶ ಕಲ್ಪಿಸಿ ಆದೇಶಿಸಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.