LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೂಗರ ಭಾಷೆ ಗೇಲಿ ಮಾಡಿ ಅಪಹಾಸ್ಯ- ರೇಡಿಯೊ ಜಾಕಿ ಸೇರಿದಂತೆ ಇಬ್ಬರ ಬಂಧನ

ಬೆಂಗಳೂರು:  ಪ್ರಚಾರದ ಗೀಳಿಗೆ ಬಿದ್ದು ಮೂಕ ಸನ್ನೆ ಮೂಲಕ ಮಾತು ಬಾರದವರಿಗೆ ಅವಮಾನ ಮಾಡಿದ ರೇಡಿಯೋ ಜಾಕಿ ಸೇರಿ ಇಬ್ಬರನ್ನು ಸಿಸಿಬಿ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರೋಹನ್ ಕಾರಿಯಪ್ಪ ಮತ್ತು ಶರವಣ ಭಟ್ಟಾಚಾರ್ಯ ಎಂದು ಗುರುತಿಸಲಾಗಿದೆ. ಆರೋಪಿಗಳು ಕಿವುಡ ಮತ್ತು ಮೂಗರ ಭಾಷೆಯನ್ನು ಅಶ್ಲೀಲ ಮೂಕ ಸನ್ನೆ ಮೂಲಕ ಅವಮಾನ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ರೋಹನ್ ಕಾರಿಯಪ್ಪ ರೇಡಿಯೊ ಜಾಕಿಯಾಗಿ ಕೆಲಸ ಮಾಡುತ್ತಿದ್ದ. ಮತ್ತೋರ್ವ ಆರೋಪಿ ಶರವಣ ಯಾವ ಕೆಲಸ ಮಾಡದೇ ಮನೆಯಲ್ಲೇ ಇದ್ದ. ವಿದ್ಯಾವಂತ ಯುವ ರಾಜಕಾರಣಿಗಳನ್ನ ಅಣಕಿಸೋ ಭರದಲ್ಲಿ ಮಾತು ಬಾರದ ಮೂಗರು ಬಳಸೋ ಸನ್ನೆಯ ಮೂಲಕ ಅಶ್ಲೀಲವಾಗಿ ಅವಹೇಳನ ಮಾಡಿ ರೀಲ್ಸ್ ಮಾಡಿದ್ದರು.

ರೋಹನ್ ಹಿಂದಿಯಲ್ಲಿ ರಾಜಕೀಯದ ಬಗ್ಗೆ ಮಾತನಾಡಿದ್ರೆ, ಶರವಣ ಅದನ್ನು ಮೂಕ ಸನ್ನೆಯಲ್ಲಿ ಅವಹೇಳನ ಮಾಡಿದ್ದ. ಆರೋಪಿ ಶರವಣ ಮೂಕ ಸನ್ನೆಯನ್ನು ಕಲಿತವನಾಗಿದ್ದು, ತಾನು ಮಾಡ್ತಿರೋದು ತಪ್ಪು ಎಂದು ಗೊತ್ತಿದ್ದು ಸಹ ವೀಡಿಯೋ ಮಾಡಿದ್ದ ಎಂದು ತಿಳಿದು ಬಂದಿದೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಹಲವು ಸಂಘಟಗಳು ದೆಹಲಿಯಲ್ಲಿ ದೂರು ದಾಖಲಿಸಿದ್ದವು. ಬಳಿಕ ಬೆಂಗಳೂರಿನವರು ಎಂದು ಗೊತ್ತಾಗಿ ಕಮಿಷನರ್‌ಗೆ ದೂರು ನೀಡಲಾಗಿತ್ತು. ನಂತರ ಈ ಬಗ್ಗೆ ಸಿಸಿಬಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಲಾಗಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೀರೇಂದ್ರ ಹೆಗ್ಗಡೆ ಸಹೋದರನ 7.59 ಎಕರೆ ಭೂ ಮಂಜೂರಾತಿ ರದ್ದುಗೊಳಿಸಿದ ಕೋರ್ಟ್ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್ ರಿಲೀಫ್ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ - ಮುಡಾ ಕೇಸ್‌ ಸಿಬಿಐಗೆ ವಹಿಸಲು ಹೈಕೋರ್ಟ್‌ ನಕಾರವೈದ್ಯನಿಗೆ ಸಾವು ತಂದ ಗೂಗಲ್‌ ಮ್ಯಾಪ್‌'ಕಾಂಗ್ರೆಸ್‌ನಿಂದ ಸಬ್ಕಾ ಸಾಥ್, ಸಬ್ಕಾ ವಿಕಾಸ್ ಸಾಧ್ಯವಿಲ್ಲ' : ಪ್ರಧಾನಿ ಮೋದಿಇಂದು ಹಾಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿಎಸ್‌ವೈ ಭವಿಷ್ಯ ನಿರ್ಧಾರ..!!ಬಾಲ್ಯದಲ್ಲಿ ದೃಷ್ಟಿ ಕಳೆದುಕೊಂಡ ಅಂಕುರ್ಜೀತ್ ಸಿಂಗ್ ಐಎಎಸ್ ಹಾದಿಯ ಯಶಸ್ಸಿನ ಕಥನಶೀತ, ಕೆಮ್ಮಿಗೆ ವೀಳ್ಯದೆಲೆ ಮನೆಮದ್ದು | ವೀಳ್ಯದೆಲೆಯ ಆರೋಗ್ಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿಇಷ್ಟ ಪಡುವ ವ್ಯಕ್ತಿಯನ್ನು ತುಳಸಿ ಎಲೆಯಿಂದ ವಶೀಕರಣ ಮಾಡಿಕೊಳ್ಳಬಹುದು....!ವಚನ— ಅರಿವಿನ ಮಾರಿತಂದೆ