LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೂರು ಕ್ಷೇತ್ರಗಳ ಬೈಎಲೆಕ್ಷನ್: ಅಭ್ಯರ್ಥಿಗಳ ಆಯ್ಕೆಗೆ ತಂಡ ರಚಿಸಿದ ಬಿಜೆಪಿ

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಪಕ್ಷದಿಂದ ಮೂರು ತಂಡಗಳನ್ನು ರಚನೆ ಮಾಡಲಾಗಿದೆ.

ಚನ್ನಪಟ್ಟಣ ಕ್ಷೇತ್ರಕ್ಕೆ ಡಾ.ಸಿ.ಎನ್.ಅಶ್ವತ್‌ನಾರಾಯಣ, ಸಂಡೂರಿಗೆ ಸಿ ಟಿ ರವಿ, ಶಿಗ್ಗಾವಿಗೆ ಆರ್ ಅಶೋಕ್ ನೇತೃತ್ವದ ತಂಡವನ್ನು ರಚಿಸಲಾಗಿದೆ. ಬೈ ಎಲೆಕ್ಷನ್ ನಡೆಯುವ ಮೂರು ಕ್ಷೇತ್ರಗಳಿಗೆ ತೆರಳಿ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸುವಂತೆ ಸೂಚಿಸಲಾಗಿದೆ. ಬಳಿಕ ವರದಿಯನ್ನು ಹೈಕಮಾಂಡ್‌ಗೆ ಕಳಿಸಲು ಬಿಜೆಪಿ ನಿರ್ಧರಿಸಿದೆ

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಹಿನ್ನೆಲೆಯಲ್ಲಿ ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ.

ಚನ್ನಪಟ್ಟಣದಿಂದ ಜೆಡಿಎಸ್ ಶಾಸಕರಾಗಿದ್ದ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭೆಯಿಂದ ಗೆಲುವು ಸಾಧಿಸಿ ಕೇಂದ್ರ ಸಚಿವರಾಗಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರಿಂದ ತೆರವಾದ ಶಾಸಕ ಸ್ಥಾನಕ್ಕಾಗಿ ಬೈಎಲೆಕ್ಷನ್ ನಡೆಯಲಿದೆ. ಇನ್ನು ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಇ ತುಕಾರಾಂ ಅವರು ಬಳ್ಳಾರಿ ಕ್ಷೇತ್ರದಿಂದ ಗೆದ್ದಿದ್ದರಿಂದ ಸಂಡೂರು ಕ್ಷೇತ್ರಕ್ಕೆ ಬೈಎಲೆಕ್ಷನ್ ನಡೆಯಲಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಲೈಂಗಿಕತೆ ಬಗ್ಗೆ ರಣವೀರ್ ಆಕ್ಷೇಪಾರ್ಹ ಹೇಳಿಕೆ: ತನಿಖೆಗೆ ಮಹಾರಾಷ್ಟ್ರ ಆದೇಶಮಹಿಳೆಯರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ಗೃಹ ಲಕ್ಷ್ಮೀ ಹಣ: ಲಕ್ಷ್ಮೀ ಹೆಬ್ಬಾಳ್ಕರ್‌ನಟ ಡಾಲಿ ಧನಂಜಯ್, ಡಾಕ್ಟರ್ ಧನ್ಯತಾ ಅದ್ದೂರಿ ಹಳದಿ ಶಾಸ್ತ್ರಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕನ ಬರ್ಬರ ಕೊಲೆ; ಆರೋಪಿ ಆಟೋ ಚಾಲಕ ಅರೆಸ್ಟ್'ರಾಜ್ಯ ಸರ್ಕಾರದಿಂದ ವಿವಿಗಳನ್ನು ಮುಚ್ಚುವ ಹೊಸ ಭಾಗ್ಯ'- ಅಶೋಕ್ವಾಟೆಹೊಳೆ ಜಲಪಾತಕ್ಕೆ ಕಾಲುಜಾರಿ ಬಿದ್ದು ಇಬ್ಬರು ಯುವಕರು ಮೃತ್ಯುಈ ತಿಂಗಳ 24 ರಂದು ಪಿಎಂ ಕಿಸಾನ್‌ ಹಣ ರೈತರ ಖಾತೆಗೆ ವರ್ಗಾವಣೆ ಸಾಧ್ಯತೆ..!ಶನಿವಾರ ಭರ್ಜರಿ ಇಳಿಕೆ ಕಂಡ ಚಿನ್ನ: ಆಭರಣ ಪ್ರಿಯರು ಫುಲ್‌ ಖುಷ್‌ನಟ ದರ್ಶನ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ : ನಾಳೆ 'ಡೆವಿಲ್‌' ಚಿತ್ರದ ಟೀಸರ್‌ ರಿಲೀಸ್‌WPL 2025: RCBಗೆ ಭಾರಿ ಆಘಾತ; ಸ್ಟಾರ್ ಸ್ಪಿನ್ನರ್ ಶ್ರೇಯಾಂಕ ಸರಣಿಯಿಂದಲೇ ಔಟ್