LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೆಕ್ಸಿಕೊದಲ್ಲಿ ಬಸ್ ಕಂದಕಕ್ಕೆ ಉರುಳಿದ ಭಾರತೀಯರೂ ಸೇರಿ 18 ಮಂದಿ ಮೃತ್ಯು

ಮೆಕ್ಸಿಕೊ: ಮೆಕ್ಸಿಕೊದ ನಯಾರಿತ್ ರಾಜ್ಯದಲ್ಲಿ ವಿದೇಶಿಗರನ್ನು ಮತ್ತು ಸ್ಥಳೀಯರನ್ನು ಹೊತ್ತೊಯ್ಯುತ್ತಿದ್ದ ಬಸ್ 164 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಭಾರತೀಯ ವಲಸಿಗರು ಸೇರಿ ಕನಿಷ್ಠ 18 ಮಂದಿ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಉತ್ತರ ಗಡಿ ಪಟ್ಟಣವಾದ ಟಿಜುವಾನಾಗೆ ಹೋಗುವ ಮಾರ್ಗದಲ್ಲಿ ಅವಘಡ ಸಂಭವಿಸಿದ್ದು, ಬಸ್‌ನಲ್ಲಿ ಭಾರತ, ಡೊಮಿನಿಕನ್ ರಿಪಬ್ಲಿಕ್ ಮತ್ತು ಆಫ್ರಿಕನ್ ರಾಷ್ಟ್ರಗಳ ನಾಗರಿಕರು ಸೇರಿದಂತೆ ಸುಮಾರು 42 ಪ್ರಯಾಣಿಕರಿದ್ದು, ಅತೀ ವೇಗದ ಚಾಲನೆಯಿಂದ ಅವಘಡ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ

ಮೃತರಲ್ಲಿ ಮೂವರು ಮಕ್ಕಳೂ ಸೇರಿದ್ದು, ಘಟನೆಯಲ್ಲಿ 22 ಮಂದಿಗೆ ಗಾಯಗಳಾಗಿವೆ ಎಂದು ನಯರಿತ್ ರಾಜ್ಯದ ನಾಗರಿಕ ರಕ್ಷಣಾ ಸಂಸ್ಥೆ ವರದಿ ಮಾಡಿದೆ. ಘಟನೆಗೆ ಸಂಬಂಧಿಸಿ ಬಸ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತರ ವಿವರ ಕಲೆ ಹಾಕಲಾಗುತ್ತಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿ ಸಾಗುತ್ತಿದೆ ಎಂದು ನಯಾರಿಟ್‌ನ ಭದ್ರತೆ ಮತ್ತು ನಾಗರಿಕ ಸಂರಕ್ಷಣಾ ಕಾರ್ಯದರ್ಶಿ ಜಾರ್ಜ್ ಬೆನಿಟೊ ರೋಡ್ರಿಗಸ್ ಹೇಳಿದ್ದಾರೆ.

 

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಸ್ರೋ - 'ಸ್ಪೇಸ್‌ಎಕ್ಸ್' ಸಹಯೋಗ: ಫಾಲ್ಕನ್‌- 9 ರಾಕೆಟ್ ನಲ್ಲಿ ಜಿಸ್ಯಾಟ್‌-20 ಉಪಗ್ರಹ ಉಡಾವಣೆ5 ರೂ ನಾಣ್ಯ ಅದರಿಂದ ಲಕ್ಷಗಟ್ಟಲೆ ಆದಾಯ..!ನಿಮ್ಮಲ್ಲೂ ಇದೆಯೇ ಈ ನಾಣ್ಯ?ಕೇಜ್ರಿವಾಲ್ ಬಂಧನದ ಸುಳುವು ಕೊಟ್ಟ ಎಎಪಿ ನಾಯಕರುಕರ್ನಾಟಕದಲ್ಲಿ 260 ಕೋವಿಡ್ ಪ್ರಕರಣ ದೃಢ - ಓರ್ವ ಮೃತ್ಯುಸ್ತ್ರೀ ಶಾಪ ಯಾವ ರೂಪದಲ್ಲಿ ಅಂಟಿಕೊಳ್ಳುತ್ತದೆ ಸ್ತ್ರೀ ಶಾಪದಿಂದ ಆಗುವಂತಹ ಸಮಸ್ಯೆಗಳನ್ನು ತಿಳಿದುಕೊಳ್ಳಿ ಸ್ತ್ರೀ ಶಾಪಕ್ಕೆ ಒಳಗಾದರೆ ನರಕ ಯಾಚನೆ ಖಂಡಿತ!ಹಸಿ ಕೊಬ್ಬರಿ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೊಂದು ಲಾಭವ?ಜನವರಿ 13ರಂದು ಕೆ-ಸೆಟ್ ಪರೀಕ್ಷೆ .!ಕಾಲುಂಗುರಕ್ಕೆ ಮುಕ್ತಿ.!ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಖುಷಿ ಸುದ್ದಿ.!ಪದವಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್‌!ಶುಲ್ಕ ಹೆಚ್ಚಳ ಇಷ್ಟು.!ರೈಲ್ವೆ ಪ್ರಯಾಣಿಕರಿಗೆ ಮುಖ್ಯವಾದ ಮಾಹಿತಿ.!