ಮುಂಬೈ: ಇಲ್ಲಿನ ಕಾರೊಂದು ಮೇಲ್ಸೇತುವೆ ಮೇಲಿಂದ ರೈಲ್ವೇ ಹಳಿಗೆ ಬಿದ್ದ ಕಾರಣ ಐವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಮಹಾರಾಷ್ಟ್ರದಲ್ಲಿ ನಡೆದಿದ್ದು, ಬೆಳಕಿಗೆ ಬಂದಿದೆ.
ಬೆಳಿಗ್ಗೆ ೭:೩೦ರ ಸುಮಾರಿಗೆ ನಾಗ್ಪುರದ ಬೋರ್ಖೆಡಿ ಮೇಲ್ಸೇತುವೆಯ ಮೇಲೆ ಕಾರು ಚಲಿಸುತ್ತಿದ್ದು, ಈ ಸಮಯ ಅಪಘಾತ ಸಂಭವಿಸಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊAಡಿದೆ. ಅತಿ ವೇಗದಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರಿಂದ ತಿಳಿದಿದೆ.
https://bcsuddi.com/290-%e0%b2%9c%e0%b2%a8%e0%b2%b0-%e0%b2%b8%e0%b2%be%e0%b2%b5%e0%b2%bf%e0%b2%97%e0%b3%86-%e0%b2%95%e0%b2%be%e0%b2%b0%e0%b2%a3%e0%b2%b5%e0%b2%be%e0%b2%a6-%e0%b2%92%e0%b2%a1%e0%b2%bf%e0%b2%b6%e0%b2%be/
ಸ್ಥಳಕ್ಕೆ ಬುಟಿಬೋರಿ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂದು ತನಿಖೆ ಬಳಿಕ ತಿಳಿಯಲಿದ್ದು, ಸದ್ಯ ಗಾಯಾಳುಗಳು ಚೇತರಿಸಿಕೊಂಡ ಬಳಿಕ ಅವರಿಂದ ಮಾಹಿತಿ ಪಡೆಯಲಾಗುವುದು ಎಂದು ಪೊಲೀಸರು ಸೂಚಿಸಿದ್ದಾರೆ.