LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೇ 20ರವರೆಗೆ ಕೇರಳದ ಕೆಲವು ರಾಜ್ಯಗಳಿಗೆ ರೆಡ್ ಅಲರ್ಟ್‌ ಘೋಷಣೆ

ತಿರುವನಂತಪುರಂ: ಕೇರಳದ ಕೆಲವು ರಾಜ್ಯಗಳಾದ ಪತ್ತನಂತಿಟ್ಟ, ಇಡುಕ್ಕಿ, ಅಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಮೇ 20 ರವರೆಗೆ ರೆಡ್ ಅಲರ್ಟ್‌ನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.

ಭಾರೀ ಮಳೆಯ ಹಿನ್ನೆಲೆ ತಿರುವನಂತಪುರಂ, ಕೊಲ್ಲಂ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಣ್ಣೂರು ಮತ್ತು ಕೋಝಿಕ್ಕೋಡ್ ಹೊರತುಪಡಿಸಿ ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ರೆಡ್ ಅಲರ್ಟ್ 24 ಗಂಟೆಗಳಲ್ಲಿ 20 ಸೆಂ.ಮೀಗಿಂತ ಹೆಚ್ಚು ಮಳೆಯನ್ನು ಸೂಚಿಸುತ್ತದೆ. ಆರೆಂಜ್ ಅಲರ್ಟ್ ಮಳೆ 6 ಸೆಂ.ಮೀ ನಿಂದ 20 ಸೆಂ.ಮೀ. ಹೆಚ್ಚು ಮಳೆ ಸೂಚಿಸಿದರೆ ಯೆಲ್ಲೋ ಅಲರ್ಟ್ 6- 11 ಸೆಂ.ಮೀ ಮಳೆಯನ್ನು ಸೂಚಿಸುತ್ತದೆ.

ಬಲವಾದ ಗಾಳಿ ಮತ್ತು ಪ್ರಕ್ಷುಬ್ಧ ವಾತಾವರಣದ ಕಾರಣ ಮುಂದಿನ ಸೂಚನೆ ನೀಡುವವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭಾನುವಾರದಿಂದ ಮೇ 22ರ ನಡುವೆ ರಾಜ್ಯದ ಕೆಲವು ಸ್ಥಳಗಳಲ್ಲಿ 30-40 ಕಿ.ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೆಡಿಯು ಸೇರ್ಪಡೆಗೊಂಡ ಕ್ರಿಕೆಟಿಗ ಇಶಾನ್ ಕಿಶನ್ ತಂದೆ ಪ್ರಣವ್ ಪಾಂಡೆಬೇಲೆಕೇರಿ ಅದಿರು ಲೋಟಿ ನಾಪತ್ತೆ ಆಗಿದ್ದು ಬಿಜೆಪಿ ಸರಕಾರದಲ್ಲಿ.! ಕಾನೂನು ಸಚಿವ HK ಪಾಟೀಲ್ರೈತರ ಅಡಿಕೆ ತೋಟಗಳ 493 ಹಳ್ಳಿಗಳಲ್ಲಿ ಕೆರೆ ಕಟ್ಟೆ ಚೆಕ್ಡ್ಯಾಂಗಳನ್ನು ನಿರ್ಮಿಸಿದ್ದು ನಾನು.!ಮುದ್ರಾ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ.! ಹೇಗೆ ಪಡೆಯುವುದು.?ಮನೆಯಲ್ಲಿ ಎಸಿ ಬಳಸುವವರು ಎಚ್ಚರ.!ಈ ಕಾರಣಕ್ಕೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ.!ರೀಲ್ಸ್ ಹುಚ್ಚಿಗೆ ಪ್ರಾಣ ಕಳೆದುಕೊಂಡ ಬಾಲಕ - ವೀಡಿಯೋ ವೈರಲ್ ‘ಭಾರತೀಯ ಸೇನೆ , ಪಾಕಿಸ್ತಾನ ಸೇನೆ’ ಎರಡೂ ಒಂದೇ’ : ವಿವಾದ ಸೃಷ್ಟಿಸಿದ ಸಾಯಿ ಪಲ್ಲವಿ..ಸಂಬಂಧ ಹೊಂದಿದ್ದ ಮಹಿಳೆಯನ್ನೇ ಕೊಂದು ಜಿಲ್ಲಾಧಿಕಾರಿ ಮನೆಯ ಬಳಿ ಶವ ಹೂತಿಟ್ಟಿದ್ದ ಜಿಮ್ ಟ್ರೈನರ್ಒಂದೇ ಒಂದು ಅವಕಾಶ ಕೊಡಿ ಎಂದು ಚನ್ನಪಟ್ಟಣದ ಜನತೆಯನ್ನ ಬೇಡಿಕೊಂಡ ನಿಖಿಲ್