LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಮೈಸೂರು ದಸರಾ ಗಜಪಡೆಗೆ 1 ಕೋಟಿ ರೂ.ಗೂ ಅಧಿಕ ಮೊತ್ತದ ವಿಮೆ ಸೌಲಭ್ಯ

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಇಂದು ಮೈಸೂರಿಗೆ ಆಗಮಿಸಲಿದೆ. ಈ ನಡುವೆ ಅರಣ್ಯ ಇಲಾಖೆಯು ಗಜಪಡೆ, ಸಿಬ್ಬಂದಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 1 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿಮೆ ಮಾಡಿಸಿದೆ.

ಗಜಪಡೆಗೆ 87,50,000 ರೂ. ಮೊತ್ತದ ವಿಮೆ ಮಾಡಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ರೂಪಾಯಿ, ಸಾರ್ವಜನಿಕರು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 50 ಲಕ್ಷ ರೂ. ಮೊತ್ತದ ವಿಮೆ ಮಾಡಿಸಲಾಗಿದೆ. ಇದಕ್ಕಾಗಿ ವಿಮಾ ಕಂಪನಿಗೆ ಪ್ರೀಮಿಯಂ ಹಣವನ್ನು ಪಾವತಿಸಲಾಗಿದೆ.

ಆಗಸ್ಟ್ 21ರಿಂದ ಆರಂಭವಾಗಿ ದಸರಾ ಮಹೋತ್ಸವ ಮುಕ್ತಾಯಗೊಂಡು ಗಜಪಡೆ ಕಾಡು ಸೇರುವವರೆಗೂ ಈ ವಿಮೆ ಚಾಲ್ತಿಯಲ್ಲಿರುತ್ತದೆ. ನಾಲ್ಕು ಮೀಸಲು ಆನೆಗಳು ಸೇರಿ ಒಟ್ಟು 18 ಆನೆಗಳಿಗೆ 87,50,000 ವಿಮೆ ಮಾಡಿಸಲಾಗಿದೆ. ಅರಣ್ಯಧಿಕಾರಿಗಳು, ಮಾವುತರು, ಕಾವಾಡಿಗಳಿಗೆ ತಲಾ 2 ಲಕ್ಷದಂತೆ 50 ಜನರಿಗೆ 1 ಕೋಟಿ ವಿಮೆಯನ್ನು ಅರಣ್ಯ ಇಲಾಖೆ ಮಾಡಿಸಿದೆ.

ಗಜಪಡೆಗೆ ನಾಡಿಗೆ ಬಂದ ವೇಳೆಯಲ್ಲಿ ತಾಲೀಮು ಅಥವಾ ಇನ್ನಿತರ ಸಂಧರ್ಭದಲ್ಲಿ ಗಜಪಡೆಯಿಂದ ಸಾರ್ವಜನಿಕರಿಗೆ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ 50 ಲಕ್ಷ ರೂಪಾಯಿ ವರೆಗೆ ವಿಮೆ ಸೌಲಭ್ಯ ಸಿಗಲಿದೆ. ಒಟ್ಟು 2,37,50,000 ಕೋಟಿ ರೂಪಾಯಿ ಮೊತ್ತದ ವಿಮೆ ಸೌಲಭ್ಯ ಕಲ್ಪಿಸಲಾಗಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಣಿಪುರ: ಇಬ್ಬರು ಸಹೋದ್ಯೋಗಿಗಳನ್ನು ಕೊಂದು, 8 ಜನರಿಗೆ ಗಾಯಗೊಳಿಸಿದ ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ..!ಬೆಂಗಳೂರು : 'ವ್ಯಾಲೆಂಟೈನ್ಸ್‌ ಡೇ'ಗೆ ಬಾಯ್ ಫ್ರೆಂಡ್ ಬೇಕಾ..? - ಬಾಡಿಗೆಗೆ ಸಿಕ್ತಾರೆ ಬಾಯ್ ಫ್ರೆಂಡ್!ಐಪಿಎಸ್ ಮಂಜರಿ ಜರೂರ್ ಯಶಸ್ಸಿನ ಕಥನಮಧುಮೇಹ ನಿಯಂತ್ರಣದಲ್ಲಿ ಪರಿಣಾಮಕಾರಿ ಈ ಮೂರು ಬಗೆಯ ಸೊಪ್ಪುಗಳುಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆದೇಶ ಜಾರಿ.! ಮುಖ್ಯಾಂಶಗಳುಚಿತ್ರದುರ್ಗ: ಫೆ.15 ರಿಂದ 17 ರವರೆಗೆ ಫಲ-ಪುಷ್ಪ ಪ್ರದರ್ಶನ.!ಹೆಣ್ಣು ಮಕ್ಕಳು ಈ ತಪ್ಪುಗಳನ್ನು ಮಾಡಿದರೆ ಮಾಂಗಲ್ಯದೋಷ ಕಂಕಣ ದೋಷಕ್ಕೆ ಈಡಾಗುತ್ತೀರಿ ಎಚ್ಚರ!-ಅಲ್ಲಮಪ್ರಭುದೇವರು ಅವರ ವಚನ…ಅಮೆರಿಕ ಪ್ರವಾಸದಲ್ಲಿ ತುಳಸಿ ಗಬ್ಬಾರ್ಡ್‌ರನ್ನು ಭೇಟಿಯಾದ ಪ್ರಧಾನಿ ಮೋದಿ