ಮೊಮ್ಮಕ್ಕಳ ಜೊತೆ ರೆಟ್ರೋ ಹಾಡು ರೀ ಕ್ರಿಯೇಟ್ ಮಾಡಿದ ಅಂಬಾನಿ ದಂಪತಿ
ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮಗ ಅನಂತ್ ಅಂಬಾನಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12ರಂದು ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಮದುವೆ ಆಗಲಿದ್ದಾರೆ. ಈಗಾಗಲೇ ಅನಂತ್ ಅಂಬಾನಿ- ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ಶುಕ್ರವಾರದಿಂದ ಅಂಬಾನಿ ಮನೆಯಲ್ಲಿ ಸಂಗೀತ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. ಇನ್ನು ಸಂಗೀತ ಸಮಾರಂಭಕ್ಕೆ ಸಿನಿಮಾ, ಕ್ರಿಕೆಟ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಇದರ ನಡುವೆ ಕ್ಯೂಟ್ ವಿಡಿಯೋವೊಂದು ಎಲ್ಲರ ಗಮನವನ್ನು ಸೆಳೆದಿದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು 60ರ ದಶಕದ ಹಾಡನ್ನು ಮೊಮ್ಮಕ್ಕಳೊಂದಿಗೆ ರೀ ಕ್ರಿಯೇಟ್ ಮಾಡಿದ್ದಾರೆ. ನೀತಾ ಅಂಬಾನಿ ಅವರು ನಾಲ್ಕು ಮೊಮ್ಮಕ್ಕಳ ಜತೆ ಕಾರಿನಲ್ಲಿ ಕುಳಿತಿದ್ದಾರೆ. ಅಂಬಾನಿ ದಂಪತಿ 1968ರಲ್ಲಿ ರಿಲೀಸ್ ಆದ ಬ್ರಹ್ಮಚಾರಿ ಸಿನಿಮಾದ ಚಕ್ಕೆ ಮೇ ಚಕ್ಕಾ ಎಂಬ ಹಿಂದಿ ಹಾಡಿಗೆ ಲಿಪ್ ಸಿಂಕ್ ಮಾಡಿದ್ದಾರೆ. ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ಮಕ್ಕಳಾದ ಪೃಥ್ವಿ ಮತ್ತು ವೇದಾ, ಇಶಾ ಅಂಬಾನಿ ಮತ್ತು ಆನಂದ್ ಪಿರಮಲ್ ಅವಳಿಗಳಾದ ಆದಿಯಾ ಮತ್ತು ಕೃಷ್ಣ ವಿಡಿಯೊದಲ್ಲಿ ಇದ್ದಾರೆ. ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೂರಲ್ ಆಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.