LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ಯಾವುದೇ ಮೈತ್ರಿಕೂಟ ಮಾಡಿಕೊಂಡರೂ ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಗೆಲುವು : ಶಾ ವಿಶ್ವಾಸ

ನವದೆಹಲಿ : ಭ್ರಷ್ಟಾಚಾರ ಮಾಡುವ 'ಇಂಡಿಯಾ' ಮೈತ್ರಿಕೂಟದ ವಿಪಕ್ಷಗಳಿಗೆ ಕೇಜ್ರಿವಾಲ್ ಸರ್ಕಾರ ಬೆಂಬಲ ನೀಡುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿ, ಅರವಿಂದ ಕೇರ್ಜಿವಾಲ್ ನೇತೃತ್ವದ ದೆಹಲಿ ಸರ್ಕಾರ ಜನರ ಸೇವೆ ಮಾಡುವ ಬದಲು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ದೆಹಲಿ ಸೇವೆಗಳ ಮೇಲೆ ಕೇಂದ್ರ ಸರ್ಕಾರ ನಿಯಂತ್ರಣ ಒದಗಿಸುವ 2023ರ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ(ತಿದ್ದುಪಡಿ) ವಿಧೇಯಕವನ್ನು ಲೋಕಸಭೆಯಲ್ಲಿ ಗುರುವಾರ ಅಂಗೀಕರಿಸಲಾಯಿತು. ರಾಷ್ಟ್ರರಾಜಧಾನಿ ಕುರಿತು ಯಾವುದೇ ಕಾನೂನು ಮಾಡುವ ಹಕ್ಕು ಸಂಸತ್ತಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಗೆ ಪ್ರತ್ಯೇಕ ಕಾನೂನು ಮಾಡುವ ಅಧಿಕಾರವನ್ನು ಸಂವಿಧಾನವೇ ನೀಡಿದೆ ಎಂದು ಹೊಸ ಮಸೂದೆಯನ್ನು ಉಲ್ಲೇಖಿಸಿ ಶಾ ಹೇಳಿದರು. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಯಾವುದೇ ಮೈತ್ರಿಕೂಟ ಮಾಡಿಕೊಂಡರೂ ಅವರ ವಿರುದ್ಧ ಮತ್ತೊಮ್ಮೆ ಮೋದಿ ಸರ್ಕಾರವೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧೇಯಕ ಅಂಗೀಕಾರವಾಗುವುದಕ್ಕೂ ಮುನ್ನ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದ ಕೇಜ್ರಿವಾಲ್, ಈ ವಿಧೇಯಕವು ರಾಜ್ಯದ ಜನರನ್ನ ಗುಲಾಮರನ್ನಾಗಿ ಮಾಡುತ್ತದೆ ಎಂದು ಕಿಡಿಕಾರಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಿಗ್ ಕಾರ್ಮಿಕರ ವಿಮಾ ಯೋಜನೆ: ನೋಂದಾಯಿಸಲು ಸೂಚನೆಕೇಬಲ್ ಟೆವಿಲಿಷನ್ ಮೇಲ್ವಿಚಾರಣಾ ಸಮಿತಿ ಸಭೆ : ಜಾಹಿರಾತು ಸಂಹಿತೆ ಪಾಲನೆ ಮಾಡುವುದು ಕಡ್ಡಾಯ; ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ-----ಬಿಬ್ಬಿ ಬಾಚಯ್ಯ  ಅವರ ವಚನ …!ತ್ರಿಶೂರ್‌ನಲ್ಲಿ ಪ್ರಧಾನಿ ಮೋದಿ ರೋಡ್ ಶೋಕಂಟಕವಾದ ಹೊಸ ಮೊಬೈಲ್‌- ಬ್ಲಾಸ್ಟ್‌ ಆಗಿ ಯುವಕ ಸೇರಿದ ಆಸ್ಪತ್ರೆ!'ನಮ್ಮ ಗ್ಯಾರಂಟಿ ಯೋಜನೆಗಳೇ ಜನರ ಕಷ್ಟ ನಿವಾರಣೆಯ ಮಂತ್ರಾಕ್ಷತೆ, ಅನ್ನಭಾಗ್ಯ ಅಕ್ಕಿಗೆ ಅರಿಶಿನ ಹಚ್ಚಿ "ಮಂತ್ರಾಕ್ಷತೆ" ಮಾಡಿ ಹಂಚುತ್ತಿದ್ದಾರೆ'-ಡಿಸಿಎಂಸೈಬರ್ ವಂಚಕರ ಬಲೆಗೆ ಬಿದ್ದ ನಟಿ ಅಂಜಲಿ ಪಾಟೀಲ್ - 5.79 ಲಕ್ಷ ರೂ. ಪಂಗನಾಮನಿರ್ಮಲಾ ಸೀತಾರಾಮನ್​​ರನ್ನು ವಜಾಗೊಳಿಸಿ - ರಾಷ್ಟ್ರಪತಿಗೆ ತಮಿಳುನಾಡು IRS ಅಧಿಕಾರಿ ಪತ್ರ'ಚುನಾವಣಾ ಲಾಭಕ್ಕಾಗಿ ಕಾಂಗ್ರೆಸ್ ತಂದಿರುವ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೆ ಎರವಾಗಿದೆ' - ಹೆಚ್​ಡಿಕೆJOB NEWS : 2250 ಕಾನ್ಸ್ ಟೇಬಲ್, SI ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ