E-PAPER
17 Nov 2026, 12:19:52 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಯುವ ಕರ್ನಾಟಕ ಭೀಮ ಸೇನೆಯಿಂದ ಪ್ರತಿಭಟನೆ

ಹುಕ್ಕೇರಿ-೦೧ :-ಡಾ.ಬಿ ಆರ್ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ -ಮಾಡಿ ಕೋರ್ಟ್ ಸರ್ಕಲದಿಂದ ದಲಿತ ಸಮುದಾಯದ ಶಿಕ್ಷಕಿಗೆ ಅರೆ ಬೆತ್ತಲೆ ಮಾಡಿ ಹೊಡೆದಿರುವ ಆರೋಪಿಗಳನ್ನು ಶೀಘ್ರ ಬಂಧಿಸಬೇಕೆಂದು ಘೋಷಣೆ ಕೂಗುತ್ತಾ ಮಿನಿ ವಿಧಾನಸೌಧ ಕಡೆಗೆ ಹೊರಟು, ಸಂಕೇಶ್ವರ ಪೊಲೀಸ್ ಠಾಣೆ ಪೊಲೀಸರಿಗೆ ಧಿಕ್ಕಾರ ಹಾಕಿದರು , ಹಾಗೂ ಮಾರಣಾಂತಿಕ ಹಲ್ಲೆ ಮಾಡಿದ ಕೆಲ ಮೇಲ್ವರ್ಗದ ಜಾತಿವಾದಿಗಳಿಗೆ ಮತ್ತು ಹುಕ್ಕೇರಿ ತಹಶೀಲ್ದಾರ್ ಆಫೀಸ್ ಎದುರಿಗೆ ಕೆಲ ಕಾಲ ಘೋಷಣೆ ಕೂಗುತ್ತಾ ಇದ್ದಾಗ ಗ್ರೇಟ್ 2 ತಹಶೀಲ್ದರಾದ ಪ್ರಕಾಶ್ ಕಲ್ಲೋಳಿ ಆಗಮಿಸಿದಾಗ, ನಿರಾಕರಿಸಿ ಮುಖ್ಯ ತಹಶೀಲ್ದಾರ್ ಬರಬೇಕೆಂದು ತಹಶೀಲ್ದಾರ್ ಗೆ ದಿಕ್ಕಾರನ್ನು ಕೂಗಿದರು. ತದನಂತರ ಸ್ಥಳಕ್ಕೆ ಆಗಮಿಸಿದ ತಹಸಿಲ್ದಾರ್ ಶ್ರೀಮತಿ ಮಂಜುಳಾ ನಾಯಕ್, ನೀವು ಸಂಕೇಶ್ವರ ಪೊಲೀಸ್ ಠಾಣೆಗೆ ಅಟ್ರಾಸಿಟಿ ಪ್ರಕರಣ ದೂರದ ಅನ್ವಯ ಸಂಬಂಧಪಟ್ಟ ಅಧಿಕಾರಿಗೆ ದೂರವಾಣಿ ಮುಖಾಂತರ ಸ್ಥಳದಲ್ಲಿ ಮಾತನಾಡಬೇಕು ಏಕೆಂದರೆ ಗರ್ಭಿಣಿ ಶಿಕ್ಷಕಿಯಾದ ಲಲಿತಾ ಐವಾಳೆ ಸಂಜು ಐವಾಳೆ ರಾಜು ಐವಾಳೆ, ನಿರ್ಮಲಾ ಐವಾಳೆ ನಾಲ್ವರ ಮೇಲೆ ರಾಮಗೌಡ ಪಾಟೀಲ್ ಎಸ್ ಡಿ.ಎಂ.ಸಿ ಅಧ್ಯಕ್ಷ ಹಾಗೂ ಅವನು ಒಂಬತ್ತು ಜನ ಸಹಚರಿಂದ ದಿನಾಂಕ್ 20/01/2025 ರಂದು 11:00ಗೆ ಶಾಲೆಗೆ ಬಂದು ಕೀಳ ಜಾತಿಯೊಳೆಂದು ಜಾತಿ ನಿಂದನೆ ಮಾಡಿ. ಶಾಲೆಯಿಂದ ಹೊರ ದಪ್ಪಿದ್ದಾರೆ ತದನಂತರ ಮನೆಗೆ ಹೋಗಿ ಲಲಿತಾ ಐವಾಳೆ ಗರ್ಭಿಣಿ ಅಂತ ಗೊತ್ತಿದ್ದರೂ ಅವಳ ಹೊಟ್ಟೆಯ ಮೇಲೆ ಒದ್ದು ಹೂಲೇರ್ ಮಾದಿಗೆ ಜಾತಿವಳು ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದು ಬೇಡವೆಂದು ಜಾತಿ ನಿಂದನೆ ಮಾಡಿ. ಅವರ ಮನೆಗೆ ಹೋಗಿ ಈ ವಿಚಾರವಾಗಿ ತಂಟೆ ತಕರಾರು ಮಾಡಿ ನಾಲ್ವರಿಗು ಹೊಡಿ ಬಡಿ ಮಾಡಿ ಅವಾಚ್ಯ ಶಬ್ದಗಳಿಂದ ಬೇದು -ಜಾತಿ ನಿಂದನೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಈ ವಿಚಾರವಾಗಿ ಸಂಕೇಶ್ವರ ಪೋಲಿಸ್ ಠಾಣೆಯಲ್ಲಿ 23/01/2025 ರಂದು ರಾತ್ರಿ 11:00 ರಾಮಗೌಡ ಪಾಟೀಲ್ ಮತ್ತು ಅವನ 9 -ಜನರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ ಸಂಕೇಶ್ವರ್ ಪೊಲೀಸ್ ಇಲಾಖೆಯಿಂದ ಯಾವುದೇ ಆರೋಪಿಯನ್ನು ಇದುವರೆಗೆ ಬಂಧಿಸಿಲ್ಲ. ಹಾಗಾದ್ರೆ ಅಟ್ರಾಸಿಟಿ ಕಾಯಿದೆ ಮರ್ಯಾದೆ ಇಲ್ಲಾ, ಮರ್ಯಾದೆ ಇದ್ದರೆ ತಕ್ಷಣ 48 ಘಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಂತೆ ಈ ಕೂಡಲೇ ಸಂಕೇಶ್ವರ -ಪೊಲೀಸ್ ಇಲಾಖೆಗೆ ತಿಳಿ ಒತ್ತಾಯಿಸಿದರು. ತಕ್ಷಣ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದಲ್ಲಿ ಎರಡೇ ದಿನಗಳಲ್ಲಿ ನಾವು ಸಂಕೇಶ್ವರ ಪೊಲೀಸ್ ಠಾಣೆ ಮುತ್ತಿಗೆ ಹಾಕಬೇಕಾಗುತ್ತದೆ ಮಾದ್ಯಮ ಮುಂದೆ ಸಂಕೇಶ್ವರ ಪೋಲಿಸ್ ಠಾಣೆ ಅಧಿಕಾರಿಗಳ ವಿರುದ್ಧ ತ್ರೀವವಾಗಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು ತದನಂತರ ಮಾನ್ಯ ಹುಕ್ಕೇರಿ ತಹಶೀಲ್ದಾರ್ ಅವರಿಗೆ ಶಿಕ್ಷಕಿಗೆ ನ್ಯಾಯ ದೊರಕಿಸಿಕೊಡಿ ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡುತ್ತೇವೆಂದು ಯುವ ಕರ್ನಾಟಕ ಭೀಮ್ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಯುತ ಪ್ರವೀಣ್ ಆರ್ ಮಾದರ್ ಮನವಿ ಸಲ್ಲಿಸಿ ಒತ್ತಾಯಿಸಿದರು....

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಮಲಪ್ಪ ಅಕ್ಕಮಡಿ, ಶ್ರೀ ಉದಯ ಬಸೋಜಿ, ಹಾಗೂ ಬೆಳಗಾವಿ ಜಿಲ್ಲಾ ಸಂಘಟನಾ ಸಂಚಾಲಕ ಆಕಾಶ ಕಾಂಬಳೆ, ಬೆಳಗಾವಿ ಜಿಲ್ಲಾ ನಗರ ಅಧ್ಯಕ್ಷ ಸಂಪತ್ ಬಲೋಗಿ ಯುವ ಮುಖಂಡರಾದ ಶ್ರೀ ಕಿರಣ್ ಬಾಗೇವಾಡಿ, ಶಂಕರ್ -ಕಟ್ಟಿಮನಿ, ಶಶಿಕಾಂತ್ ಹೊನ್ನಳ್ಳಿ ಸತೀಶ್ ದಿನ್ನಿಮನಿ ವಿದ್ಯಾಧರ್ ರಣುಗೋಳ್ ನಿಖಿಲ್ ಹಾದಿಮನಿ, ಮದಿಹಳ್ಳಿಯ ಕಾದೇಶ್ ಹೊಸಮನಿ, ಅವರುಗೋಳ ವಿಠಲ್ ಮಾದರ್, ದಲಿತ ಸಂಘಟನೆ ಅಥಣಿ ವಿವೇಕ್ ಕರಪೆ. ನಿಪ್ಪಾಣಿ ಬಾಮಸೇಪ "ಅಧ್ಯಕ್ಷರಾದ ಶ್ರೀ ಅಕ್ಕಾ ರಾಮ್ ಯಡ್ ನಾಯಕ್. ಸೂರಜ್ ಹೆಗಡೆ ಅಮಿತ್ ಕಾಂಬೈ ವಾಲ್ಮೀಕಿ ಸಂಘಟನೆಯ ಕೋನಕೇರಿ. ಸಿದ್ದು ನಾಯಕ್.ಸುನಿಲ್ ಕುಮಾರ್.ವಿನೋದ್ ನಾಯಕ್. ಅಣ್ಣಾ ಬಾಹೂಸಾಟೆ ಕೊಲ್ಲಾಪುರ್. ಕೆಂಪಣ್ಣ ಯರಿಗಾರ್, ಶಿವಾಜಿ ದಿಲೀಪ್, "ಅಶೋಕ್, ಅಂಕುಕ್, ಆಕಾಶ್. ಭೀಮಾ. ಶ್ರೀ ಕಾಳಿಕಾದೇವಿ ಮಹಿಳಾ ಸಂಘಟನೆ ಅಧ್ಯಕ್ಷರಾದ ಸಂಗೀತ ಮಾದಿಗ ಮಹಾದೇವಿ -ಮಹಾಲಪ್ಪ ನಿಕಿತಾ, ಗಂಗವ್ವ ಕಾಲಪ್ಪ ಸಾಕವ್ವ ಸುಮಿತ್ರ ಯರಿಗಾರ್ ವಿಶ್ವಲ ಮಾದರ, ರಾಘವೆಂದ್ರ ಗಸ್ತಿ ಹಾಗೂ ವಿವಿಧ ಸಂಘಟನೆಯ ಮುಖಂದರು ವಿವಿಧ ಗ್ರಾಮದ ಮುಖಂಡರು ಹಾಗೂ ಮಹಿಳೆಯರು ಸೇರಿದಂತೆ ಇತರರು ಹಾಜರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.