Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
💛

ಸ್ವತಂತ್ರ ಪತ್ರಿಕೋದ್ಯಮ ಬೆಂಬಲಿಸಲು ಲೇಖನದ ಕೆಳಭಾಗದಲ್ಲಿ UPI ಮೂಲಕ ಕಾಣಿಕೆ ನೀಡಿ!

State News

ರಾಜ್ಯದ ಗೃಹಲಕ್ಷ್ಮಿಯರಿಗೆ ಸಿಹಿಸುದ್ದಿ: 33ನೇ ಕಂತಿನ ಹಣ 2,482 ಕೋಟಿ ಸರ್ಕಾರ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ 33ನೇ ಕಂತಿನ ₹2,482 ಕೋಟಿ ಮೊತ್ತದ ಅನುದಾನವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಸರಿಸುಮಾರು 1.24 ಕೋಟಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಈ ಹಣ ನೇರವಾಗಿ ಜಮೆಯಾಗಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.

ಪ್ರತಿ ಯಜಮಾನಿಗೆ ಒಟ್ಟು ₹66,000 ಆರ್ಥಿಕ ನೆರವು

ಯೋಜನೆ ಆರಂಭವಾದಾಗಿನಿಂದ ಇಂದಿನವರೆಗೆ ಯಶಸ್ವಿಯಾಗಿ 32 ಕಂತುಗಳಲ್ಲಿ ಪ್ರತಿ ಫಲಾನುಭವಿಗೆ ₹64,000 ಹಣವನ್ನು ವರ್ಗಾವಣೆ ಮಾಡಲಾಗಿದೆ. ಇದೀಗ 33ನೇ ಕಂತಿನ ಹಣ ಬಿಡುಗಡೆಯಾಗುತ್ತಿದ್ದು, ಇದರೊಂದಿಗೆ ಪ್ರತಿ ಮನೆಯೊಡತಿಗೆ ಯೋಜನೆಯಡಿ ಒಟ್ಟಾರೆಯಾಗಿ ₹66,000 ತಲುಪಿದಂತಾಗುತ್ತದೆ. ಈ ಮೂಲಕ ರಾಜ್ಯಾದ್ಯಂತ ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಯಡಿ ಹಂಚಿಕೆಯಾದ ಒಟ್ಟು ಮೊತ್ತ ₹79,433 ಕೋಟಿಗೆ ತಲುಪಲಿದೆ ಎಂದು ಅವರು ವಿವರಿಸಿದರು.

ಬರ ಮತ್ತು ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಬಲ

ಪ್ರಸ್ತುತ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದ್ದು, ಇಂತಹ ಸಂಕಷ್ಟದ ಸಮಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಮಾಸಿಕ ನೆರವು ಕುಟುಂಬಗಳ ನಿರ್ವಹಣೆಗೆ ದೊಡ್ಡ ಆಸರೆಯಾಗಿದೆ. ದಸರಾ ಸಂಭ್ರಮದ ಹೊತ್ತಲ್ಲೇ ಹಣ ಬಿಡುಗಡೆ ಮಾಡಿರುವುದು ಮಹಿಳೆಯರಲ್ಲಿ ಸಂತಸ ತಂದಿದೆ. ಬಡ ಹಾಗೂ ಮಧ್ಯಮ ವರ್ಗದ ಮಹಿಳೆಯರ ಆರ್ಥಿಕ ಸ್ಥಿರತೆಗೆ ಶಕ್ತಿ ತುಂಬುತ್ತಿರುವ ಮುಖ್ಯಮಂತ್ರಿಗಳಿಗೆ ದಿನೇಶ್ ಗೂಳಿಗೌಡ ಕೃತಜ್ಞತೆ ಸಲ್ಲಿಸಿದರು.

ಮಾಧ್ಯಮ ಬೆಂಬಲಿಸಿ / Support Local Journalism

ನಿಮ್ಮ ಬೆಂಬಲ ಸ್ವತಂತ್ರ ಪತ್ರಿಕೋದ್ಯಮವನ್ನು ಜೀವಂತವಾಗಿರಿಸುತ್ತದೆ. Scan & Pay directly via PhonePe, GPay or Paytm.

0% Gateway Commission — Money goes 100% directly into publisher bank account.
Scan with Any UPI App
Scan QR Code to Support News via UPI
Pre-filled: ₹10.00
UPI ID: khushihost1@ibl
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮನೆಯ ಹಿತ್ತಲಲ್ಲಿ ಬೃಹತ್ ಹೆಬ್ಬಾವು ಪತ್ತೆ | WATCH VIDEOರಷ್ಯಾ ಸೇನೆಗೆ ಸೇರಿದ ಭಾರತೀಯರೆಷ್ಟು? ಎಷ್ಟು ಮಂದಿ ಸಾವು, ಎಷ್ಟು ಜನ ನಾಪತ್ತೆ? ಸುಪ್ರೀಂಕೋರ್ಟ್‌ಗೆ ಕೇಂದ್ರದ ಮಾಹಿತಿಭಾರತದಲ್ಲಿ CJP ಪ್ರತಿಭಟನೆಗೆ ಅಮೆರಿಕದಿಂದ ಹಣಕಾಸು ನೆರವು ? ಗಾಯಕಿ ಮೇರಿ ಮಿಲ್ಬೆನ್‌ ಗಂಭೀರ ಆರೋಪ!ಶೃಂಗೇರಿ ಮತ ಎಣಿಕೆ ವಿಡಿಯೋ ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆಕಬ್ಬು ಬೆಳೆಗಾರರ ಬೇಡಿಕೆ ಪರಿಶೀಲನೆಗೆ ಕೇಂದ್ರದ ಮಹತ್ವದ ಕ್ರಮ: ರಮೇಶ್ ಚಂದ್ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚನೆಹಬ್ಬದ ಹೊತ್ತಲ್ಲೇ ರೈಲ್ವೆ ನೌಕರರಿಗೆ ಬಂಪರ್ ಕೊಡುಗೆ: 78 ದಿನಗಳ ಬೋನಸ್ ಗೆ ಮೋದಿ ಸಂಪುಟ ಅನುಮೋದನೆದೇಶವನ್ನೇ ಬೆಚ್ಚಿಬೀಳಿಸಿದ್ದ ಮೀರತ್ ‘ನೀಲಿ ಡ್ರಮ್ ಹತ್ಯೆ ಪ್ರಕರಣ’: ಪತ್ನಿ, ಪ್ರಿಯಕರನಿಗೆ ಮರಣದಂಡನೆಕರ್ನಾಟಕದಲ್ಲಿ ಹಿಂಗಾರು ಮಳೆ ನಿರೀಕ್ಷೆ: ಹಲವು ಜಿಲ್ಲೆಗಳಲ್ಲಿ ಗುಡುಗು, ಮಿಂಚಿನ ಎಚ್ಚರಿಕೆ; IMD ಮುನ್ಸೂಚನೆ ಏನು?15,000 ಲಂಚ ಪಡೆಯುತ್ತಿದ್ದಾಗಲೇ ಹೆಸ್ಕಾಂ ಅಧಿಕಾರಿ, ಗುತ್ತಿಗೆದಾರ ಲೋಕಾಯುಕ್ತ ಬಲೆಗೆBREAKING: ಜೆಡಿಎಸ್ ಸೋಶಿಯಲ್ ಮೀಡಿಯಾ ತಂಡದ ಯುವಕ ಪೊಲೀಸರು ವಶಕ್ಕೆ: HDK ಕಿಡಿ