Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
1. Apply for Press ID Card
Register official reporter application with Email OTP.
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ರಾಜ್ಯ ಜನತೆಗೆ ಬಿಗ್ ಶಾಕ್ : ಮತ್ತೆ ಅಕ್ಕಿ ದರ ಭಾರಿ ಏರಿಕೆ | Rice Price Hike

ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆ ಹಾಗೂ ನೀರಿನ ಅಭಾವದ ಪರಿಣಾಮ ಇದೀಗ ಜನಸಾಮಾನ್ಯರ ಅಡುಗೆ ಮನೆಗೆ ನೇರವಾಗಿ ತಟ್ಟಿದೆ. ಜಲಾಶಯಗಳಲ್ಲಿ ನೀರಿನ ಕೊರತೆಯಿಂದ ಭತ್ತದ ಇಳುವರಿ ಕುಸಿದಿರುವ ಬೆನ್ನಲ್ಲೇ, ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯಾದ್ಯಂತ ಅಕ್ಕಿ ದರ ಮತ್ತೊಮ್ಮೆ ಗಗನಕ್ಕೇರಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಈಗಾಗಲೇ ಎರಡು ಬಾರಿ ಬೆಲೆ ಏರಿಕೆಯಾಗಿದ್ದು, ಇಂದಿನಿಂದ (ಸೆಪ್ಟೆಂಬರ್ 15) ಮೂರನೇ ಬಾರಿಗೆ ಅಕ್ಕಿ ದರ ಪರಿಷ್ಕರಣೆಯಾಗಿರುವುದು ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಯಾವ ಅಕ್ಕಿಗೆ ಎಷ್ಟು ಬೆಲೆ ಏರಿಕೆ?

ನೂತನ ದರ ಪರಿಷ್ಕರಣೆಯ ಪ್ರಕಾರ, ಸಾಮಾನ್ಯ ಬಳಕೆಯ ಅಕ್ಕಿಯ ದರ ಪ್ರತಿ ಕೆಜಿಗೆ ₹5 ರಿಂದ ₹10 ರಷ್ಟು ಹೆಚ್ಚಳವಾಗಿದ್ದರೆ, ಪ್ರೀಮಿಯಂ ಹಾಗೂ ಉತ್ತಮ ಗುಣಮಟ್ಟದ ಅಕ್ಕಿಯ ಬೆಲೆ ಕೆಜಿಗೆ ₹10 ರಿಂದ ₹20 ರಷ್ಟು ಏರಿಕೆಯಾಗಿದೆ. ಕ್ವಿಂಟಾಲ್ ಲೆಕ್ಕದಲ್ಲಿ ಸಗಟು ಮಾರುಕಟ್ಟೆಯಲ್ಲಿ ಸುಮಾರು ₹1,000 ವರೆಗೆ ದರ ಹೆಚ್ಚಾಗಿದೆ. ಚೀಲಗಳ ಲೆಕ್ಕಾಚಾರದಲ್ಲಿ ನೋಡುವುದಾದರೆ, ಸಾಮಾನ್ಯ ಅಕ್ಕಿಯ ಪ್ರತಿ ಬ್ಯಾಗ್‌ಗೆ ₹200 ಹಾಗೂ ಉತ್ತಮ ದರ್ಜೆಯ ಅಕ್ಕಿ ಚೀಲಕ್ಕೆ ₹250 ರಿಂದ ₹300 ರಷ್ಟು ಹೆಚ್ಚುವರಿ ಹಣ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಮತ್ತಷ್ಟು ದುಬಾರಿ

ಸಗಟು (ಹೋಲ್‌ಸೇಲ್) ಮಾರುಕಟ್ಟೆಯಲ್ಲಿ ಕೆಜಿಗೆ ₹10 ರಿಂದ ₹20 ರಷ್ಟು ಏರಿಕೆಯಾಗಿದ್ದರೆ, ಸ್ಥಳೀಯ ಚಿಲ್ಲರೆ ಅಂಗಡಿಗಳಲ್ಲಿ ಗ್ರಾಹಕರಿಗೆ ತಲುಪುವಷ್ಟರಲ್ಲಿ ಪ್ರತಿ ಕೆಜಿಗೆ ₹20 ರಿಂದ ಬರೋಬ್ಬರಿ ₹40 ರಷ್ಟು ಹೊರೆ ಬೀಳಲಿದೆ. ಇಂದಿನಿಂದಲೇ ಈ ಪರಿಷ್ಕೃತ ದರಗಳು ಮಾರುಕಟ್ಟೆಯಲ್ಲಿ ಜಾರಿಗೆ ಬಂದಿದ್ದು, ದಿನಸಿ ಖರೀದಿಗೆ ಬಂದ ಗ್ರಾಹಕರು ದರಪಟ್ಟಿಯನ್ನು ನೋಡಿ ಕಂಗಾಲಾಗಿದ್ದಾರೆ.

ದರ ಏರಿಕೆಗೆ ಅಸಲಿ ಕಾರಣಗಳೇನು?

ರಾಜ್ಯದಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದೆ ಭತ್ತದ ಬೆಳೆಗೆ ಭಾರಿ ಹೊಡೆತ ಬಿದ್ದಿರುವುದು ಹಾಗೂ ಕಚ್ಚಾ ಸಾಮಗ್ರಿಗಳ ಅಭಾವವೇ ಬೆಲೆ ಏರಿಕೆಗೆ ಮುಖ್ಯ ಕಾರಣವೆಂದು ವ್ಯಾಪಾರಿಗಳು ತಿಳಿಸಿದ್ದಾರೆ. ಇದರ ಜತೆಗೆ, ದೇಶೀಯ ಮಾರುಕಟ್ಟೆಯಿಂದ ವಿದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಅಕ್ಕಿ ರಫ್ತಾಗುತ್ತಿರುವುದು ಕೂಡ ಸ್ಥಳೀಯವಾಗಿ ಪೂರೈಕೆಯಲ್ಲಿ ವ್ಯತ್ಯಯ ತಂದೊಡ್ಡಿದೆ. ಸ್ಥಳೀಯ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದಿರುವುದು ಬೆಲೆ ಏರಿಕೆಗೆ ತುಪ್ಪ ಸುರಿದಂತಾಗಿದೆ.

ಅಕ್ಟೋಬರ್‌ನಲ್ಲಿ ಮತ್ತಷ್ಟು ಏರಿಕೆಯ ಆತಂಕ

ಸದ್ಯದ ಪರಿಸ್ಥಿತಿ ಹೀಗಿರುವಾಗಲೇ, ಅಕ್ಟೋಬರ್ ತಿಂಗಳಲ್ಲಿ ಅಕ್ಕಿ ಬೆಲೆ ಮತ್ತೊಂದು ಹಂತದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಗಟು ವರ್ತಕರು ಮುನ್ಸೂಚನೆ ನೀಡಿದ್ದಾರೆ. ಹಬ್ಬದ ಸೀಸನ್ ಸಮೀಪಿಸುತ್ತಿರುವ ಹೊತ್ತಲ್ಲೇ ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಪ್ರಧಾನಿ ಮೋದಿ, ಅಮಿತ್ ಶಾಗು 'ವಂದೇ ಮಾತರಂ' ಪೂರ್ಣ ಹಾಡು ಬರಲ್ಲ : ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ BREAKING : ತುಮಕೂರಲ್ಲಿ ಭೀಕರ ಅಪಘಾತ : ಹಿಟ್ & ರನ್ ಗೆ ನವದಂಪತಿ ದುರ್ಮರಣ!BIG NEWS : ಬೆಂಗಳೂರಿಗರೇ ಹುಷಾರ್ : ಚೌಡೇಶ್ವರಿ ಪೂಜೆ ಹೆಸರಲ್ಲಿ ಲಕ್ಷಾಂತರ ರೂ. ಒಡವೆ ಎಗರಿಸಿದ ನಕಲಿ ಜ್ಯೋತಿಷಿ!BREAKING : ಹಾಸನದ ಲಾಡ್ಜ್ ನ ಬಾತ್ರೂಮ್ ನಲ್ಲಿ ಯುವತಿ ಅನುಮಾನಾಸ್ಪದ ಸಾವು : ಸಾವಿನ ಸುತ್ತ ಅನುಮಾನದ ಹುತ್ತ!BREAKING : ರೇಣುಕಾಸ್ವಾಮಿ ಕೋಲೆ ಕೇಸ್ : ಇಂದು ಹೈಕೋರ್ಟ್ ನಲ್ಲಿ ದರ್ಶನ್ ಖುದ್ದು ಹಾಜರಿ ಕುರಿತು ಸಲ್ಲಿಸಿದ್ದ ಅರ್ಜಿಯ ವಿಚಾರಣೆ!ರಕ್ಷಣಾತ್ಮಕ ಶಕ್ತಿಶಾಲಿ ಸುದರ್ಶನ ಮಂತ್ರ​ದ ಮಹತ್ವಪೂರ್ಣ ದ ಅರ್ಥ..!!ಖಾತೆದಾರರು ಮೃತಪಟ್ಟ ಬಳಿಕ ಕಾನೂನುಬದ್ಧ ವಾರಸುದಾರರು ಬ್ಯಾಂಕ್ ಹಣ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿರಸ್ತೆ ಅಪಘಾತದ ನಂತರ ವಾಹನ ವಿಮೆ ಕ್ಲೈಮ್ ಪಡೆಯಲು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿರಾಜ್ಯದ ಗ್ರಾಮ ಪಂಚಾಯಿತಿ ಮತ್ತು ವಾರ್ಡ್ ಮಟ್ಟದಲ್ಲೂ ‘ಗ್ಯಾರಂಟಿ ಸಮಿತಿ’ ರಚನೆ: ಸರ್ಕಾರ ಮಹತ್ವದ ಆದೇಶRain Alert : ವಾಯುಭಾರ ಕುಸಿತ : ರಾಜ್ಯದ ಈ ಜಿಲ್ಲೆಗಳಲ್ಲಿ ಭಾರಿ ಮಳೆ, ಯೆಲ್ಲೋ ಅಲರ್ಟ್ ಘೋಷಣೆ.!