LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಷ್ಯಾ ಬಂಡಾಯ ಶಮನ: ದಂಗೆ ನಿಲ್ಲಿಸಿ, ಉಕ್ರೇನ್ ಶಿಬಿರಗಳಿಗೆ ಮರಳಿ ಎಂದ ವ್ಯಾಗ್ನರ್ ಮುಖ್ಯಸ್ಥ

ಮಾಸ್ಕೊ: ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ಮರಳುವಂತೆ ತಮ್ಮ ಪಡೆಗೆ ಆದೇಶಿಸಿದ್ದೇನೆ ಎಂದು ವ್ಯಾಗ್ನರ್ ನಾಯಕ ಪ್ರಿಗೋಷಿನ್ ತಿಳಿಸಿದ್ದಾರೆ. ‘ನಮ್ಮ ಯೋಧರು ಮಾಸ್ಕೊದಿಂದ ಕೇವಲ 200 ಕಿ.ಮೀ ದೂರದಲ್ಲಿರುವಾಗ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಪ್ರಿಗೋಷಿನ್ ತಿಳಿಸಿದ್ದಾರೆ. ಆದರೆ, ರಷ್ಯಾ ತಮ್ಮ ಬೇಡಿಕೆಗಳಿಗೆ ಸಮ್ಮತಿಸಿದೆಯೇ ಎಂಬ ಬಗ್ಗೆ ಅವರು ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ರಷ್ಯಾ ಸಹ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧವೇ ತಿರುಗಿಬಿದ್ದಿರುವ ರಷ್ಯಾದ ಖಾಸಗಿ ಸೇನಾಪಡೆ ವ್ಯಾಗ್ನರ್ ಗ್ರೂಪ್ ಮುಖ್ಯಸ್ಥ ಪ್ರಿಗೊಜಿನ್, ಪುಟಿನ್ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಪ್ರಿಗೊಜಿನ್ ಅವರು ಮಾಸ್ಕೋದಿಂದ ಕೇವಲ 200 ಕಿಲೋಮೀಟರ್(120 ಮೈಲುಗಳು) ದೂರದಲ್ಲಿರುವಾಗ, "ರಷ್ಯಾದಲ್ಲಿ ರಕ್ತಪಾತ" ತಪ್ಪಿಸಲು ತನ್ನ ಖಾಸಗಿ ಸೇನೆ ವಾಪಸ್ ಪಡೆಯಲು ನಿರ್ಧರಿಸಿದರು. ಇದಕ್ಕೂ ಮುನ್ನ ದಕ್ಷಿಣ ರಷ್ಯಾದ ಸೇನಾ ಕೇಂದ್ರ ಕಚೇರಿಯನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದ್ದ ವಾಗ್ನರ್, ತಮಗೆ ಸ್ಥಳೀಯರ ಬೆಂಬಲವೂ ಇದೆ ಎಂದು ತಿಳಿಸಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಸ್​ಮಸ್ ಹಬ್ಬ ಹಿನ್ನೆಲೆ: ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ.!ಒನಕೆ ಓಬವ್ವ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆ: ಪ್ರತಿಭಟನೆ.!-ರಕ್ಕಸಬೊಮ್ಮಿತಂದೆ / ರಕ್ಕಸ ಬ್ರಹ್ಮಯ್ಯ ಅವರ ವಚನ …!ಯುವಕರು, ಬಡವರು, ಮಹಿಳೆಯರು ಮತ್ತು ರೈತರ ಮೇಲೆ ಕೇಂದ್ರೀಕರಿಸಲು ಬಿಜೆಪಿ ಅಭಿಯಾನ : ಪ್ರಧಾನಿ ಮೋದಿಪ್ರಥಮ ಬಾರಿಗೆ ಹೊರಗುತ್ತಿಗೆಯಲ್ಲಿ ಮೀಸಲಾತಿ ಜಾರಿ : ಸಿದ್ದರಾಮಯ್ಯಮಹಿಳೆಯ ಮೇಲೆ ಕರಡಿಗಳ ದಾಳಿತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಬೋಂಡಾ ಮಣಿ ನಿಧನನಾಡಿದ್ದು, ಬಿಜೆಪಿ ನೂತನ ರಾಜ್ಯ ಪದಾಧಿಕಾರಿಗಳ ಸಭೆ- ಬಿ.ವೈ.ವಿಜಯೇಂದ್ರಅತಿಯಾಗಿ ತಂಪು ಪಾನೀಯ ಸೇವಿಸುತ್ತೀರಾ..? - ಇನ್ನು ಮುಂದೆ ಇರಲಿ ಎಚ್ಚರ..!ಅತ್ಯಂತ ಕಡಿಮೆ ಬೆಲೆ, ಅತ್ಯಧಿಕ ಮೈಲೇಜ್‌ : ಮಾರುಕಟ್ಟೆಗೆ ಎಂಟ್ರಿ ಕೊಡಲಿಗೆ ಕಿಯಾ ಸೋನೆಟ್ 2024 ಫೇಸ್‌ಲಿಫ್ಟ್