ನಟಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸಿರುವ ಶೀಲ ಚಿತ್ರ ದ್ವಿಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಹಾಗೂ ಮಲೆಯಾಳಂನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಜುಲೈ ತಿಂಗಳ ಅಂತ್ಯಕ್ಕೆ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪ್ರಸ್ತುತ ಹೆಣ್ಣುಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ.
https://bcsuddi.com/%e0%b2%85%e0%b2%b8%e0%b3%8d%e0%b2%b8%e0%b2%be%e0%b2%82-16-%e0%b2%b5%e0%b2%b0%e0%b3%8d%e0%b2%b7%e0%b2%a6-%e0%b2%ac%e0%b2%be%e0%b2%b2%e0%b2%95%e0%b2%bf-%e0%b2%ae%e0%b3%87%e0%b2%b2%e0%b3%86-%e0%b2%85/
ನಿರ್ದೇಶಕ ಬಾಲು ನಾರಾಯಣನ್ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಚಿತ್ರದ ನಟಿ ರಾಗಿಣಿ ದ್ವಿವೇದಿ ತಿಳಿಸಿದ್ದಾರೆ. ಕೇರಳ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲೂ ಚಿತ್ರೀಕರಣವಾಗಿದೆ. ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು. ಡಿ.ಎಂ.ಪಿಳ್ಳೈ ಅವರು ಚಿತ್ರವನ್ನು ನಿರ್ಮಿಸಿದ್ದು, ಬಾಲು ನಾರಾಯಣನ್ ಆಕ್ಷನ್ ಕಟ್ ಹೇಳಿದ್ದಾರೆ. ತಾರಾಬಳಗದಲ್ಲಿ ರಾಗಿಣಿ ದ್ವಿವೇದಿ, ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ, ಮಹೇಶ್ ನಾಯರ್, ಶ್ರೀಪತಿ, ರಿಯಾಜ್ ಖಾನ್, ಅಬೆ ಡೇವಿಡ್, ಆರತಿ ಗೋಪಾಲ್ ಮುಂತಾದವರಿದ್ದಾರೆ.