LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಬೆಂಗಳೂರು:ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷರು, ರಾಜ್ಯ ಪ್ರಧಾ‌ನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು, ಖಜಾಂಚಿ ಮತ್ತು 7 ಮೋರ್ಛಾಗಳ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪದಾಧಿಕಾರಿಗಳ ಪಟ್ಟಿಯಲ್ಲಿ 6 ಶಾಸಕರು, ವಿಧಾನಪರಿಷತ್​ನ ಓರ್ವ ಸದಸ್ಯ, 10 ಮಾಜಿ ಶಾಸಕರಿಗೆ ಅವಕಾಶ ನೀಡಲಾಗಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪನವರ 6 ಆಪ್ತರು, ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ವಿಜಯೇಂದ್ರರ ಇಬ್ಬರು ಆಪ್ತರಿಗೆ ಸ್ಥಾನ ನೀಡಲಾಗಿದೆ. ಬಿಜೆಪಿಗೆ ಬಂದಿದ್ದ 17 ವಲಸಿಗರ ಪೈಕಿ ಭೈರತಿ ಬಸವರಾಜ್​ಗೆ ಮತ್ತು 6 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ.

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ: ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಬೈರತಿ ಬಸವರಾಜ, ರಾಜೂ ಗೌಡ ನಾಯಕ್, ಎನ್. ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಡಾ. ಬಸವರಾಜ ಕೇಲಗಾರ, ಮಾಳವಿಕಾ ಅವಿನಾಶ್ ಮತ್ತು ಎಂ. ರಾಜೇಂದ್ರ ನೇಮಕ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ: ವಿ. ಸುನೀಲ್ ಕುಮಾರ್, ಪಿ. ರಾಜೀವ್, ಎನ್.ಎಸ್. ನಂದೀಶ್ ರೆಡ್ಡಿ ಮತ್ತು ಜೆ. ಪ್ರೀತಮ್ ಗೌಡ ನೇಮಕ.

ಬಿಜೆಪಿ ರಾಜ್ಯ ಕಾರ್ಯದರ್ಶಿಗಳಾಗಿ: ಶೈಲೇಂದ್ರ ಬೆಲ್ದಾಳೆ, ಡಿ.ಎಸ್. ಅರುಣ್, ಬಸವರಾಜ ‌ಮತ್ತಿಮೂಡ, ಸಿ. ಮುನಿರಾಜು, ವಿನಯ್ ಬಿದರೆ, ಕ್ಯಾ. ಬ್ರಿಜೇಶ್ ಚೌಟ, ಶರಣು ತಳ್ಳಿಕೇರಿ, ಲಲಿತಾ ಅನಾಪುರ, ಡಾ. ಲಕ್ಷ್ಮೀ ಅಶ್ವಿನ್ ಗೌಡ, ಅಂಬಿಕಾ ಹುಲಿನಾಯ್ಕರ್ ನೇಮಕ.

ರಾಜ್ಯ ಖಜಾಂಚಿಯಾಗಿ: ಸುಬ್ಬನರಸಿಂಹ ನೇಮಕ.

ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆಯಾಗಿ: ಸಿ. ಮಂಜುಳಾ

ಯುವ ಮೋರ್ಛಾ ರಾಜ್ಯಾಧ್ಯಕ್ಷರಾಗಿ: ಧೀರಜ್ ಮುನಿರಾಜು ನೇಮಕ

ಎಸ್​ಟಿ ಮೋರ್ಛಾ ರಾಜ್ಯಾಧ್ಯಕ್ಷರಾಗಿ: ಬಂಗಾರು ಹನುಮಂತು

ಎಸ್​ಸಿ ಮೋರ್ಛಾ ರಾಜ್ಯಾದ್ಯಕ್ಷರಾಗಿ: ಎಸ್. ಮಂಜುನಾಥ್

ಒಬಿಸಿ ಮೋರ್ಛಾ ರಾಜ್ಯಾಧ್ಯಕ್ಷರಾಗಿ: ರಘು ಕೌಟಿಲ್ಯ

ರೈತ ಮೋರ್ಛಾ ರಾಜ್ಯಾದ್ಯಕ್ಷರಾಗಿ: ಎ.ಎಸ್. ಪಾಟೀಲ್ ನಡಹಳ್ಳಿ

ಅಲ್ಪಸಂಖ್ಯಾತ ಮೋರ್ಛಾದ ರಾಜ್ಯಾಧ್ಯಕ್ಷರಾಗಿ: ಅನಿಲ್ ಥಾಮಸ್
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೌಜನ್ಯಾ ಅತ್ಯಾಚಾರ – ಕೊಲೆ ಪ್ರಕರಣ; ಪೋಸ್ಟ್‌ ಮಾರ್ಟಂ ಮಾಡಿದ್ದ ವೈದ್ಯ ಡಾ. ಆದಂ ವಿಧಿವಶ'ನಿರುದ್ಯೋಗಿ ಯುವಕ -ಯುವತಿಯರಿಗೆ ಪಕೋಡ ಮಾರಿ ಅನ್ನೋಕೆ ಮೋದಿ ಪ್ರಧಾನಿಯೇ ಆಗಬೇಕಿತ್ತಾ'- ಸಿ.ಎಂನೇಹಾ ಹತ್ಯೆ ಖಂಡಿಸಿ ಏಪ್ರಿಲ್ 22ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದು ಗ್ಯಾರಂಟಿ.!ಈ ದಿನಗಳಲ್ಲಿ ಮದ್ಯ ಮಾರಾಟ ನಿಷೇಧ23 ರಂದು ಚುನಾವಣಾ ಹಿನ್ನೆಲೆ ಪ್ರಿಯಾOಕಾ ಗಾಂಧಿ ದುರ್ಗಕ್ಕೆಬೆಂಗಳೂರು: ಸ್ಟಾರ್ ನಿರ್ದೇಶಕ ಆರ್ ಚಂದ್ರುಗೆ ಮತ್ತೆ ಸಂಕಷ್ಟನೇಹಾ ಕೊಲೆ ಪ್ರಕರಣ: ನನ್ನ ಜೊತೆ ಮಾತಾಡಲ್ಲ ಅಂದಳು, ಅದಕ್ಕೆ ಚಾಕು ಹಾಕಿದೆ- ಬಾಯಿಬಿಟ್ಟ ಫಯಾಜ್'ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ'- ಪ್ರಧಾನಿ ವಿರುದ್ಧ ರಮೇಶ್‌ ಕುಮಾರ್‌ ಕಿಡಿ5 ವರ್ಷಗಳಲ್ಲೇ ಅಮಿತ್ ಶಾ ಆಸ್ತಿ ದ್ವಿಗುಣ.! - ಅಫಿಡವಿಟ್‌ನಲ್ಲಿ ಬಹಿರಂಗ