ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತರಾಗಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನೇಮಕ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಅಭಿವೃದ್ಧಿ ಆಯುಕ್ತರಾಗಿ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ನೇಮಕಗೊಂಡಿದ್ದಾರೆ. ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದ್ದಾರೆ. ಭಾರತೀಯ ಆಡಳಿತ ಸೇವೆ (ಐಎಎಸ್) 1989ರ ಬ್ಯಾಚ್‌ನ ಮಹಿಳಾ ಟಾಪರ್ ಡಾ. ಶಾಲಿನಿ ರಜನೀಶ್, ಸೈಕಾಲಜಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ ಮತ್ತು ಅವರು ಆಸ್ಟ್ರೇಲಿಯಾದಿಂದ MBA, ಮತ್ತು Ph.D. ಗ್ರಾಮೀಣಾಭಿವೃದ್ಧಿಯಲ್ಲಿ ಹೊಂದಿದ್ದಾರೆ. ಅವರು ಮ್ಯಾನೇಜ್‌ಮೆಂಟ್, ವ್ಯಕ್ತಿತ್ವ ವಿಕಸನ, ಮಹಿಳಾ ಸಬಲೀಕರಣ, ಐಎಎಸ್ ಕೋಚಿಂಗ್ ಮುಂತಾದ ವಿವಿಧ ವಿಷಯಗಳನ್ನು ಒಳಗೊಂಡ 13 ಪುಸ್ತಕಗಳನ್ನು ಇಂಗ್ಲಿಷ್‌ನಲ್ಲಿ ಮತ್ತು 5 ಕನ್ನಡದಲ್ಲಿ ಬರೆದಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.