ಬೆಳಗಾವಿ: ಇತ್ತಿಚೆಗೆ ಬೆಳಗಾವಿಯ ಜೈನ್ ಎಂಜಿನಿಯರಿಂಗ್ ಅಂಡ್ ರಿಸರ್ಚ್ ಕಾಲೇಜು ಆಯೋಜಿಸಿದ್ದ ರಾಷ್ಟ್ರಮಟ್ಟದ ಟೆಕ್ನೋ ಕಲ್ಚರಲ್ ಫೆಸ್ಟ್ನಲ್ಲಿ ನಡೆದ ರ್ಯಾ0ಪ್ ವಾಕ್ ಸ್ಪರ್ಧೆಯಲ್ಲಿ ಎಸ್. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಗೌರಿಶ ಸಾಲಿಮಠ, ವಿನಾಯಕ ಭಾವಿ, ಸ್ರಷ್ಟಿ ಶೇಗುಣಶಿ, ಶಿವಾನಿ ವಾಲಿ ಇಟಗಿ, ಸೃಷ್ಟಿ ಬಿ. ಜಾಧವ, ಸೌಜನ್ಯ ಹೊಸಮನಿ, ಪೂಜಾ ವಾಲಿ, ಪೃಥ್ವಿ ದೇವಡಿಗ, ಜಾಕಿ ಮುಜಾವರ, ಜುಹೈಬ್ ಆಲಂ ಏಕಸಂಬಿ ಅದ್ಭುತ ಗೆಲುವು ಸಾಧಿಸಿ ಮಹಾವಿದ್ಯಾಲಯಕ್ಕೆ ಗೌರವ ತಂದಿದ್ದಾರೆ.
ಈ ವಿಶೇಷ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಮ್ಮ ಪ್ರಥಮ ವರ್ಷದ ಅವಧಿಯಲ್ಲೇ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆ, ಆತ್ಮವಿಶ್ವಾಸ ಮತ್ತು ನವಿರಾದ ಪ್ರದರ್ಶನದ ಮೂಲಕ ವಿಶಿಷ್ಟವಾಗಿ ಗುರುತಿಸಿಕೊಂಡಿರುವ ಈ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ಹೆಮ್ಮೆ ಎಂಬ ಆಶಯದೊಂದಿಗೆ ಎಲ್ಲ ವಿಜೇತ ವಿದ್ಯಾರ್ಥಿಗಳನ್ನ ಆಶೀರ್ವದಿಸಿದರು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಎಫ್. ವಿ. ಮಾನ್ವಿ, ಪ್ರಾಚಾರ್ಯರಾದ ಡಾ. ಬಿ. ಆರ್. ಪಟಗುಂದಿ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ. ಮಂಜುನಾಥ ಶರಣಪ್ಪನವರ ಅವರು ಸಂಸ್ಥೆಯ ವತಿಯಿಂದ ಎಲ್ಲ ವಿಜೇತ ವಿದ್ಯಾರ್ಥಿಗಳಿಗೆ ಹಾರ್ದಿಕ ಅಭಿನಂದನೆಗಳನ್ನ ತಿಳಿಸಿ, ವಿದ್ಯಾರ್ಥಿಗಳ ಭವಿಷ್ಯದ ಎಲ್ಲಾ ಪ್ರಯತ್ನಗಳಿಗೆ ಶುಭಾಶಯಗಳನ್ನ ಕೋರಿದರು. ಜೊತೆಗೆ ಮಹಾವಿದ್ಯಾಲಯದ ಸಮಸ್ತ ಸಿಬ್ಬಂದಿ ಸಮೂಹದಿಂದ ವಿದ್ಯಾರ್ಥಿಗಳಿಗೆ ವಿಶೇಷ ಅಭಿನಂದನೆ ವ್ಯಕ್ತವಾಗಿದೆ.