ರಾಹುಲ್ ಗಾಂಧಿಗೆ 'ಉಮ್ಮನ್ ಚಾಂಡಿ ಸಾರ್ವಜನಿಕ ಸೇವಕ ಪ್ರಶಸ್ತಿ' ಗರಿ
ತಿರುವನಂತಪುರ: ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ದಿವಂಗತ ಉಮ್ಮನ್ ಚಾಂಡಿ ಅವರ ಸ್ಮರಣಾರ್ಥ ಸ್ಥಾಪಿಸಲಾದ ಮೊದಲ "ಉಮ್ಮನ್ ಚಾಂಡಿ ಸಾರ್ವಜನಿಕ ಸೇವಕ ಪ್ರಶಸ್ತಿ"ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.
ಉಮ್ಮನ್ ಚಾಂಡಿ ಅವರ ಮೊದಲ ಪುಣ್ಯತಿಥಿಯ ಮೂರು ದಿನಗಳ ನಂತರ ಉಮ್ಮನ್ ಚಾಂಡಿ ಫೌಂಡೇಶನ್ ಭಾನುವಾರ ಈ ಪ್ರಶಸ್ತಿಯನ್ನು ಘೋಷಿಸಿದೆ . ಪ್ರಶಸ್ತಿ ಗೌರವವು ಒಂದು ಲಕ್ಷ ರೂಪಾಯಿಯ ನಗದು ಮತ್ತು ಖ್ಯಾತ ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕ ನೇಮೊಮ್ ಪುಷ್ಪರಾಜ್ ವಿನ್ಯಾಸಗೊಳಿಸಿದ ಕಲಾಕೃತಿಯನ್ನು ಒಳಗೊಂಡಿದೆ.
ಭಾರತ್ ಜೋಡೋ ಯಾತ್ರೆಯನ್ನು ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದ ಮತ್ತು ಅವರ ಕಷ್ಟಗಳಿಗೆ ಧ್ವನಿಯಾದ ರಾಹುಲ್ ಗಾಂಧಿ ಅವರಿಗೆ ಈ ಪ್ರಶಸ್ತಿ ಸಲ್ಲುತ್ತದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯ ಪರಿಣಿತ ತೀರ್ಪುಗಾರರ ಸಮಿತಿಯೂ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.