LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರಾಹುಲ್ ಗಾಂಧಿಯ ‘ಫ್ಲೈಯಿಂಗ್ ಕಿಸ್’ ಯಾರೂ ನೋಡಿಲ್ಲ: ಶಶಿ ತರೂರ್

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಫ್ಲೈಯಿಂಗ್ ಕಿಸ್’ ಮಾಡಿದ್ದನ್ನು ಯಾರೂ ನೋಡಿಲ್ಲ ಮತ್ತು ಅದರ ಬಗ್ಗೆ ಯಾವುದೇ ದಾಖಲೆ ಇದೆ ಅಂತ ನನಗೆ ಅನಿಸುತ್ತಿಲ್ಲ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಗುರುವಾರ ಹೇಳಿದ್ದಾರೆ. ಇಂದು ಸಂಸತ್ ಹೊರಗೆ ರಾಹುಲ್ ಗಾಂಧಿ ‘ಫ್ಲೈಯಿಂಗ್ ಕಿಸ್’ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಶಶಿ ತರೂರ್ ಅವರು, ನಾನು ಅದನ್ನು ಖಂಡಿತವಾಗಿಯೂ ನೋಡಿಲ್ಲ. ಬೇರೆ ಯಾರು ನೋಡಿದ್ದಾರೆ ಅಂತಾನೂ ನನಗೆ ಗೊತ್ತಿಲ್ಲ. ಅಲ್ಲಿ ಏನಾಯಿತು ಮತ್ತು ಅವರು ಯಾರಿಗೆ ‘ಫ್ಲೈಯಿಂಗ್ ಕಿಸ್’ ಮಾಡಿದರು ಎಂಬುದು ಸಂಸದ TV ಯಲ್ಲಿಯೂ ರೆಕಾರ್ಡ್ ಆಗಿಲ್ಲ ಎಂದು ನಾನು ನಂಬುತ್ತೇನೆ. ಹಾಗಾಗಿ, ನಮಗೆ ಆ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ. ನಿನ್ನೆ ಅವಿಶ್ವಾಸ ನಿರ್ಣಯದ ಕುರಿತು ರಾಹುಲ್ ಗಾಂಧಿ ಭಾಷಣ ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, “ಕೆಲವರ ವರ್ತನೆಯನ್ನು ನಾನು ಆಕ್ಷೇಪಿಸುತ್ತೇನೆ. ನನಗಿಂತ ಮುಂಚೆ ಮಾತನಾಡಿದ ವ್ಯಕ್ತಿ, ಹೊರಡುವ ಮುನ್ನ ಅಸಭ್ಯತೆಯನ್ನು ಪ್ರದರ್ಶಿಸಿದರು.  ಸ್ತ್ರೀದ್ವೇಷಿ ಪುರುಷನೊಬ್ಬನಿಂದ ಮಾತ್ರ ಮಹಿಳೆಯರು ಹಾಜರಿರುವ ಸದನಕ್ಕೆ ಫ್ಲೈಯಿಂಗ್ ಕಿಸ್ ಮಾಡಲು ಸಾಧ್ಯ ಎಂದು ವಾಗ್ದಾಳಿ ನಡೆಸಿದ್ದರು. ಅಲ್ಲದೆ ‘ಫ್ಲೈಯಿಂಗ್ ಕಿಸ್’  ಮಾಡಿದ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮಹಿಳಾ ಸಂಸದರು ಆಗ್ರಹಿಸಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರನಾಲ್ವರು ಉಗ್ರರರಿಂದ ಒಳನುಸುಳಲು ಯತ್ನ: ಓರ್ವ ಉಗ್ರನ ಹತ್ಯೆಜ.6ರಂದು ಸೌರ ಮಿಷನ್ ಆದಿತ್ಯ L1 ಪಾಯಿಂಟ್‌ಗೆ ಪ್ರವೇಶಿಸಲಿದೆ - ಸೋಮನಾಥ್Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್‌ ರೆಸಿಪಿ ಒಮ್ಮೆ ಟ್ರೈ ಮಾಡಿಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ: ಮುಖ್ಯ ಶಿಕ್ಷಕಿಯ ಬಂಧನಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್- ಬಿಜೆಪಿ ಮುಖಂಡರ ಆಕ್ರೋಶಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ..!ಶಾಲಾ ಕಾಲೇಜುಗಳಲ್ಲಿ ಹಿಜಬ್ ನಿಷೇಧ ವಾಪಾಸ್ – ಸಿಎಂ ಸಿದ್ದರಾಮಯ್ಯಹೇರ್ ಡ್ರೈಯರ್‌ನಿಂದ ಬೆಂಕಿ – ಟೆಕ್ಕಿಯ ಕೂದಲಿನ ಜೊತೆ ಬೆಡ್‌ ಸುಟ್ಟು ಹೋಯ್ತು!