'ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ, ಅಂಥವರನ್ನೆಲ್ಲ ಜಿ20ಗೆ ಕರೆಯೋಕೆ ಆಗುತ್ತಾ?'-ಯತ್ನಾಳ್ ವ್ಯಂಗ್ಯ
ವಿಜಯನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ, ಅಂಥವರನ್ನು ಜಿ20ಯಂಥ ಜಾಗತಿಕ ನಾಯಕರು ಬರುವ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗ ಸಭೆಗೆ ತನಗೆ ಆಹ್ವಾನವಿಲ್ಲ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಹೊಸಪೇಟೆಯಲ್ಲಿ ಪ್ರತಿಕ್ರಿಯೆ ನೀಡಿರು ಯತ್ನಾಳ್ ಅವರು, ರಾಹುಲ್ ಗಾಂಧಿ ದೇಶದ ಹೊರಗೆ ಭಾರತದ ಬಗ್ಗೆ ಅಪಪ್ರಚಾರ ಮಾಡುತ್ತಾನೆ. ಅದೇ ರೀತಿ ಜಗತ್ತಿನ ಗಣ್ಯರ ಎದುರು ನಮ್ಮ ದೇಶ ಅತಂತ್ರ ಆಗಿದೆ ಅಂದ್ರೆ ಪರಿಸ್ಥಿತಿ ಏನಾಗುತ್ತೆ ಹೇಳಿ? ಅದಕ್ಕೇ ಆಹ್ವಾನ ಕೊಟ್ಟಿಲ್ಲ ಎಂದು ಹೇಳಿದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.