ರುಚಿಕರವಾದ ಚೈನೀಸ್ ಫ್ರೈಡ್ ರೈಸ್ ಮಾಡುವ ವಿಧಾನ
ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು: ½ ಕೆ.ಜಿ. ಕೋಳಿ ಮಾಂಸ, 50 ಗ್ರಾಂ ಎಣ್ಣೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಕ್ಯಾರೆಟ್, 1 ಸ್ಪೂನ್ ಕರಿಮೆಣಸಿನ ಪುಡಿ, 50 ಗ್ರಾಂ ದೊಣ್ಣೆ ಮೆಣಸಿನಕಾಯಿ, 50 ಗ್ರಾಂ ಬೀನ್ಸ್, ½ ಕೆ.ಜಿ. ಜೀರಾ ರೈಸ್, 2 ಮೊಟ್ಟೆ, ಚಿಟಿಕೆ ಅಜಿನೊಮೊಟೊ, ಸೋಯಾಸಾಸ್, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಬೇಯಿಸಿಕೊಂಡು ಮೂಳೆ ತೆಗೆದು ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ಅಕ್ಕಿಯನ್ನು ಮುಕ್ಕಾಲು ಭಾಗ ಬೇಯಿಸಿ ಇಡಿ. ಕ್ಯಾರೆಟ್, ಬೀನ್ಸ್ ಸಣ್ಣಗೆ ಕತ್ತರಿಸಿ ಬೇಯಿಸಿಕೊಳ್ಳಿ. ಈರುಳ್ಳಿ ಮತ್ತು ದೊಣ್ಣೆ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ. 2 ನಿಮಿಷವಾದ ನಂತರ ಮೊಟ್ಟೆಯನ್ನು ಒಡೆದು ಹಾಕಿ, ತಿರುಗಿಸಿರಿ. ಅದಕ್ಕೆ ಬೇಯಿಸಿದ ಅನ್ನ, ತರಕಾರಿ, ಚಿಕನ್ ಹಾಕಿ ಕೆಲವು ನಿಮಿಷಗಳ ಕಾಲ ತಿರುಗಿಸಿ ಚೆನ್ನಾಗಿ ಮಿಕ್ಸ್ ಮಾಡಿರಿ. ಸ್ವಲ್ಪ ಸಮಯದ ನಂತರ ಬಿಸಿಬಿಸಿಯಾಗಿ ಸೋಯಾಸಾಸ್ ನೊಂದಿಗೆ ತಿನ್ನಲು ಕೊಡಿ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.