LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ಮಂಗಳೂರು ಸೌತೆಕಾಯಿ ಸಾಂಬಾರ್ ಮಾಡುವ ವಿಧಾನ




ಬೇಕಾಗುವ ಪದಾರ್ಥಗಳು...






  • ಸಾಂಬಾರ್ ಸೌತೆ ಅಥವಾ ಮಂಗಳೂರು ಸೌತೆ -1 ಮಧ್ಯಮ ಗಾತ್ರದ್ದು

  • ನೆನೆಸಿದ ತೊಗರಿ ಬೇಳೆ- 1/4 ಬಟ್ಟಲು

  • ತೆಂಗಿನ ತುರಿ- 1/2 ಬಟ್ಟಲು

  • ಕೆಂಪು ಮೆಣಸಿನ ಕಾಯಿ- 3-4

  • ತೊಗರಿ ಬೇಳೆ- 2 ಚಮಚ

  • ಉದ್ದಿನ ಬೇಳೆ- 1/2 ಚಮಚ

  • ದನಿಯಾ- 2 ಚಮಚ

  • ಮೆಂತ್ಯ-8-10 ಕಾಳು

  • ಅರಿಶಿಣ- ಸ್ವಲ್ಪ

  • ಬೆಲ್ಲ-1 ಚಮಚ

  • ಇಂಗು-ಸ್ವಲ್ಪ

  • ಅಡುಗೆ ಎಣ್ಣೆ-1 ಚಮಚ







ಮಾಡುವ ವಿಧಾನ...

  • ತೊಳೆದ ಸೌತೆಕಾಯಿಯನ್ನು ಕತ್ತರಿಸಿ ಮಧ್ಯದ ತಿರುಳು ತೆಗೆದು ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಬಳಿಕ ಸೌತೆಕಾಯಿ, ನೆನೆಸಿದ ಬೇಳೆಯನ್ನು ಕುಕ್ಕರ್ ಗೆ ಹಾಕಿ ಅರ್ಧ ಬಟ್ಟಲು ನೀರು, ಚಿಟಿಕೆ ಅರಿಶಿಣ ಹಾಕಿ. ಒಂದು ವಿಸಿಲ್ ವರೆಗೆ ಬೇಯಿಸಿಕೊಳ್ಳಿ,

  • ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ, ಕೆಂಪುಮೆಣಸಿನ ಕಾಯಿ, ದನಿಯಾ, ಉದ್ದಿನ ಬೇಳೆ, ಮೆಂತ್ಯ, ಇಂಗು ಹಾಕಿ ಹುರಿದಿಟ್ಟುಕೊಳ್ಳಿ.

  • ಹೀಗೆ ಹುರಿದ ಮಸಾಲೆ ಹಾಗೂ ತೆಂಗಿನ ತುರಿಗೆ ಸ್ವಲ್ಪ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಬಳಿಕ ರುಬ್ಬಿದ ಮಸಾಲೆ ಮಿಶ್ರಣವನ್ನು ಬೇಯಿಸಿಟ್ಟುಕೊಂಡಿರುವ ಬೇಳೆ ಕುಕ್ಕರ್ ಗೆ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಸೇರಿಸಿ. ಈಗ ನಿಮಗೆ ಸಾಂಬರ್ ಎಷ್ಟು ಬೇಕು ಅಷ್ಟು ಪ್ರಮಾಣದ ನೀರು ಸೇರಿಸಿ ಒಂದು ಕುದಿ ಬರುವವರೆಗೆ ಕುದಿಸಿ ಇಳಿಸಿ.

  • ಇದಕ್ಕೆ ಚಮಚ ಎಣ್ಣೆ, ಸಾಸಿವೆ, ಕರಿಬೇವು, ಒಂದು ಕೆಂಪು ಮೆಣಸಿನಕಾಯಿ ಹಾಕಿ ಒಗ್ಗರಣೆ ಹಾಕಿ. ಇದೀಗ ರುಚಿಕರವಾದ ಮಂಗಳೂರು ಸೌತೆಕಾಯಿ ಸಾಂಬಾರ್ ಸವಿಯಲು ಸಿದ್ಧ.


ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.


Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸೈಫ್ ಆಲಿ ಖಾನ್ ಮೇಲಿ ದಾಳಿ ಪ್ರಕರಣ: ಟ್ವಿಸ್ಟ್ ಮೇಲೆ ಟ್ವಿಸ್ಟ್..!! ಪೊಲೀಸರು ತಪ್ಪಾಗಿ ವಶಕ್ಕೆ ಪಡೆದ ಯುವಕನ ಕೆಲಸವೂ ಹೋಯ್ತು, ಮದುವೆ ಕ್ಯಾನ್ಸಲ್ಭಾವಿಪತ್ನಿ ಜೊತೆ ರವಿಶಂಕರ್ ಗುರೂಜಿ ಆಶೀರ್ವಾದ ಪಡೆದ ತೇಜಸ್ವಿ ಸೂರ್ಯ,ಮದುವೆ ಯಾವಾಗ?ಮೆಟ್ರೋ ರೈಲ್ವೆ ಕಾರ್ಪೊರೇಷನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಐಎಎಸ್ ಅಧಿಕಾರಿಯಾಗುವ ಕನಸನ್ನು ನನಸಾಗಿಸಿಕೊಂಡ ವರುಣ್ ಬರನ್ವಾಲ್ಸನಾತನ ಧರ್ಮ ಭಾರತದ 'ರಾಷ್ಟ್ರೀಯ ಧರ್ಮ': ಯುಪಿ ಸಿಎಂ ಯೋಗಿಒಡಿಶಾದಲ್ಲಿ ಬಸ್ ಪಲ್ಟಿಯಾಗಿ ಇಬ್ಬರು ಸಾವು; 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ಕೆ.ಎಂ. ಚೆರಿಯನ್ ನಿಧನಕುರಿ ಕಾಯುವ ಹುಡುಗ ಹನುಮಂತ ಲಮಾಣಿ ‘ಬಿಗ್ ಬಾಸ್’ ವಿನ್ನರ್ಈ ವಸ್ತುಗಳು ಕಂಡರೆ ಧನ ಲಾಭವಾಗುವುದು ಖಚಿತ.!ವಚನ.: --ಅಮುಗೆ ರಾಯಮ್ಮ!