LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಕರವಾದ ವೆಜಿಟೇಬಲ್ ಎಗ್ ಆಮ್ಲೆಟ್ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು...

  • ಮೊಟ್ಟೆ – 4

  • ಈರುಳ್ಳಿ- 1

  • ಕ್ಯಾರೆಟ್-1

  • ಬೀನ್ಸ್- 5

  • ಹಸಿಮೆಣಸಿನಕಾಯಿ- 3

  • ಕ್ಯಾಪ್ಸಿಕಂ- 1/2

  • ಕೊತ್ತಂಬರಿ ಸೊಪ್ಪು-ಸ್ವಲ್ಪ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್- ಸ್ವಲ್ಪ

  • ಅರಿಶಿಣ ಪುಡಿ – 1/2 ಚಮಚ

  • ಕರಿಬೇವಿನ ಸೊಪ್ಪು– ಸ್ವಲ್ಪ

  • ಪೆಪ್ಪರ್‌ಪುಡಿ– ಅರ್ಧ ಚಮಚ

  • ಎಣ್ಣೆ- ಸ್ವಲ್ಪ

  • ಉಪ್ಪು ರುಚಿಗೆ ತಕ್ಕಷ್ಟು

    ಮಾಡುವ ವಿಧಾನ...

    • ಈರುಳ್ಳಿ, ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಂ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿಗಳನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ.

    • ಒಲೆಯ ಮೇಲೆ ಪಾತ್ರೆಯಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕಾದ ನಂತರ ಸಣ್ಣಗೆ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ, ಕರಿಬೇವು, ಕ್ಯಾಪ್ಸಿಕಂ, ಈರುಳ್ಳಿ, ಕ್ಯಾರೆಟ್, ಬೀನ್ಸ್ ಎಲ್ಲವನ್ನು ಹಾಕಿ ಕೆಂಪಗೆ ಹುರಿದುಕೊಳ್ಳಿ. ನಂತರ ಕೊತ್ತಂಬರಿಸೊಪ್ಪು, ಪೆಪ್ಪರ್‌ಪುಡಿ, ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ಚೆನ್ನಾಗಿ ಫ್ರೈ ಮಾಡಿ.

    • ಇದು ತಣ್ಣಗಾದ ಬಳಿಕ ಮೊಟ್ಟೆಯನ್ನು ಒಡೆದು ಹಾಕಿ. ನಂತರ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

    • ಬಳಿಕ ಒಲೆಯ ಮೇಲೆ ಫ್ರೈ ಪ್ಯಾನ್ ಇರಿಸಿ ಎಣ್ಣೆ ಸವರಿ. ಖಾದ ನಂತರ ಮೊಟ್ಟೆ ಮಿಶ್ರಣವನ್ನು ಹಾಕಿ ದೋಸೆ ರೀತಿ ವೃತ್ತಾಕಾರದಲ್ಲಿ ಹರಡಬೇಕು. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ಬದಿಯನ್ನು ಚೆನ್ನಾಗಿ ಬೇಯಿಸಿದ ನಂತರ ಮುಚ್ಚಳ ತೆಗೆದು, ಮಗುಚಿ ಹಾಕಿ ಇನ್ನೊಂದು ಬದಿಯನ್ನು ಚೆನ್ನಾಗಿ ಬೇಯಿಸಿ. ಇದೀಗ ರುಚಿಕರವಾದ ವೆಜಿಟೇಬಲ್ ಎಗ್ ಆಮ್ಲೆಟ್ ಸವಿಯಲು ಸಿದ್ಧ.



Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇನ್ಮುಂದೆ ನ್ಯಾಯಾಂಗ ಸೇವೆಗೆ ಸೇರಲು ಕನಿಷ್ಠ 3 ವರ್ಷಗಳ ವಕೀಲ ವೃತ್ತಿ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶಧರ್ಮಸ್ಥಳದ ಆಕಾಂಕ್ಷ ಸಾವಿನ ಪ್ರಕರಣ: ಪ್ರೋಫೆಸರ್ ಬಂಧನ, ಮೃತದೇಹ ಮೇ.21ಕ್ಕೆಮತ್ತೊಂದು ಹೊಸ ನೋಟು ಎಂಟ್ರಿ : RBI ಮಹತ್ವದ ಘೋಷಣೆಚುನಾವಣಾ ರಾಜಕೀಯಕ್ಕೆ ಸಹಕಾರ ಸಚಿವ ಕೆ. ಎನ್‌ ರಾಜಣ್ಣ ನಿವೃತ್ತಿಪಿಎಸ್ಐ ನೇಮಕಾತಿಗೆ ಪೂರ್ವ ತರಬೇತಿಗಾಗಿ ಅರ್ಜಿ ಆಹ್ವಾನ…ಭಾರಿ ಮಳೆಗೆ ಕರ್ನಾಟಕದಲ್ಲಿ 4 ಸಾವು, ಬೆಂಗಳೂರಿನಲ್ಲಿ ಇನ್ನೂ 3 ದಿನ ಭಾರೀ ಮಳೆಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆ ಪ್ರಕರಣ: ಮದುವೆಯಾದ ಪ್ರೊಫೆಸರ್ ಜೊತೆಗಿನ ಪ್ರೇಮ ವೈಫಲ್ಯವೇ ಕಾರಣಮಂಗಳೂರು: ಸುಹಾಸ್ ಹತ್ಯೆಯ ಪ್ರಮುಖ ಆರೋಪಿಗೆ ಜೈಲಿನಲ್ಲಿ ಹಲ್ಲೆಗೆ ಯತ್ನಬೆಂಗಳೂರಿನಲ್ಲಿ 50ಕ್ಕೂ ಅಧಿಕ ಬಡಾವಣೆಗಳು ಜಲಾವೃತ : 4 ಮಂದಿ ಸಾವುಅಂಚಿನ ಮಾಡುವ ವಿಧಾನ ಸಾರ್ವಜನಿಕ ವಶೀಕರಣ.!