LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರುಚಿಯಾದ ನೇಯಪ್ಪ ಮಾಡಿ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು:  ದೋಸೆ ಅಕ್ಕಿ- 2 ಕಪ್, ಬೆಲ್ಲ- 1.5 ಕಪ್, ಕಪ್ಪು ಎಳ್ಳು- 1 ಟೀ ಸ್ಪೂನ್, ಏಲಕ್ಕಿ- ಚಿಟಿಕೆ, ಮೈದಾ- 3 ಟೀ ಸ್ಪೂನ್, ತುಪ್ಪ- 2 ಟೀ ಸ್ಪೂನ್, ತೆಂಗಿನತುರಿ- 2 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಸೋಡಾ- ಚಿಟಿಕೆ. ಮಾಡುವ ವಿಧಾನ: ಬೆಲ್ಲಕ್ಕೆ ಅರ್ಧ ಕಪ್ ನೀರು ಹಾಕಿ ಕರಗಿಸಿ. ಬಳಿಕ ತೆಂಗಿನತುರಿಯನ್ನು ತುಪ್ಪದಲ್ಲಿ ಹುರಿಯಿರಿ. ಬಳಿಕ 5 ಗಂಟೆ ನೆನೆಸಿದ ದೋಸೆ ಅಕ್ಕಿಯನ್ನು ಮಿಕ್ಸಿ ಜಾರಿಗೆ ಹಾಕಿ, ಇದಕ್ಕೆ ರುಚಿಗೆ ತಕ್ಕಷ್ಟು, ಉಪ್ಪು, ಏಲಕ್ಕಿ, ಕರಗಿಸಿದ ಬೆಲ್ಲವನ್ನು ಸೋಸಿ ಹಾಕಿಕೊಂಡು ರುಬ್ಬಿಕೊಳ್ಳಿ. ಬಳಿಕ ಈ ಹಿಟ್ಟಿಗೆ ಕಪ್ಪು ಎಳ್ಳು ಹಾಗೂ ಮೈದಾ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.

ನಂತರ ಹುರಿದಿಟ್ಟ ತೆಂಗಿನತುರಿಯನ್ನು ಹಾಕಿ ಮುಚ್ಚಿಡಿ. 7 ರಿಂದ 8 ಗಂಟೆ ಕಾಲ ಹಾಗೆ ಇಡಿ. ದೋಸೆ ಹಿಟ್ಟಿನ ಹದಕ್ಕಿಂತ ಸ್ವಲ್ಪ ತೆಳ್ಳಗಿರಲಿ. ಒಂದು ಬಾಣಲೆಯನ್ನು ಸ್ಟೌ ನಲ್ಲಿ ಇಟ್ಟು ಕರಿಯಲು ಎಣ್ಣೆ ಹಾಕಿ. ಈ ವೇಳೆ ಹಿಟ್ಟಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಮಿಕ್ಸ್ ಮಾಡಿ. ನಂತರ ಎಣ್ಣೆ ಬಿಸಿಯಾದಾಗ ಹಿಟ್ಟನ್ನು ಎಣ್ಣೆಗೆ ಹಾಕಿ, ಈ ವೇಳೆ ಪೂರಿಯಂತೆ ಉಬ್ಬಿ ಬರುತ್ತದೆ. ಬಣ್ಣ ಬದಲಾದಾಗ ಸರ್ವಿಂಗ್ ಪ್ಲೇಟ್ ಗೆ ಎತ್ತಿಟ್ಟರೆ ರುಚಿಯಾದ ನೇಯಪ್ಪ ಸವಿಯಲು ಸಿದ್ಧ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಏನೇ ಬಂದ್ರೂ ಎದುರಿಸ್ತೀನಿ ಎಂದ ಸಿಎಂ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ?'- ಛಲವಾದಿ ನಾರಾಯಣಸ್ವಾಮಿಮೂಡಬಿದಿರೆ: ಡಿ. 10ರಿಂದ 15ರವರೆಗೆ ಆಳ್ವಾಸ್ ವಿರಾಸತ್ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲಾ ಧರ್ಮದ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡಬೇಕು- ಸುಪ್ರೀಂ ಕೋರ್ಟ್ ಆದೇಶನಾಳೆ (ಅ. 2) ರಂದು ಕೆಂಪು ಉಂಗುರದ ಸೂರ್ಯಗ್ರಹಣ – ಈ ರಾಶಿಯವರಿಗೆ ಎಚ್ಚರಿಕೆಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ..!'ಮುಡಾ ಸೈಟ್ ವಾಪಾಸ್ ನೀಡಿರುವುದು ಒಳ್ಳೆಯ ನಿರ್ಧಾರ' - ಪರಮೇಶ್ವರ್‌ಗ್ರಾಹಕರೇ ಎಚ್ಚರ: ನಿಷೇಧಿತ ಚೀನಿ ಬೆಳ್ಳುಳ್ಳಿ ಹಾವಳಿ..!1.5 ಲಕ್ಷ ರೂಪಾಯಿ ಮೌಲ್ಯದ ಐಫೋನ್‌ ಗಾಗಿ ಡೆಲಿವರಿ ಏಜೆಂಟ್‌ ಹತ್ಯೆಈ ಮಹಿಳೆಯರಿಗೆ ಬಂದಿಲ್ಲ ಗೃಹಲಕ್ಷ್ಮಿ ಹಣದ ಒಂದೇ ಒಂದು ಕಂತಿನ ಹಣನಟ ಗೋವಿಂದ ಅವರ ಕಾಲಿಗೆ ಮಿಸ್‌ಫೈರಿಂಗ್‌..!