ರೇಣುಕಾಸ್ವಾಮಿ ಕಿಡ್ನಾಪ್ ಮಾಡಿದ್ದ ಕಾರು ಚಾಲಕನಿಂದಲೇ ಬಾಡಿ ಶಿಫ್ಟ್ ಮಾಡಿಸಿದ್ರು ಹಂತಕರು
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅನುಕುಮಾರ್, ರಘು, ಜಗ್ಗ ಕಿಡ್ನಾಪ್ ಮಾಡಿದ್ದರು. ಈ ವೇಳೆ ರವಿ ಅನ್ನೋ ಕ್ಯಾಬ್ ಡ್ರೈವರ್‌ನ ಕಾರ್ ಬುಕ್ ಮಾಡಿಕೊಂಡು ಶೆಡ್‌ಗೆ ಬಂದಿದ್ದರು. ಸದ್ಯ ಈ ಕೇಸ್‌ನಲ್ಲಿ ರವಿನೇ ಚಿತ್ರದುರ್ಗ ಪೊಲೀಸರಿಗೆ ಶರಣಾಗಿ ಸದ್ಯ ಜೈಲು ಸೇರಿದ್ದಾನೆ. ಮೊದಲಿಗೆ ರವಿ ಕೇಸ್‌ನಲ್ಲಿ ಇನ್ವಾಲ್ ಇಲ್ಲ. ಆತ ಜಸ್ಟ್ ಕ್ಯಾಬ್ ಬುಕ್ ಮಾಡಿಕೊಂಡು ಕ್ಯಾಬ್ ಡ್ರೈವ್ ಮಾಡಿಕೊಂಡು ಬಂದಿದ್ದ ಅಂತ ಹೇಳಲಾಗುತ್ತಿತ್ತು. ಇಷ್ಟೇ ಆಗಿದ್ರೆ ಪೊಲೀಸ್ರು ರವಿಯನ್ನ ಬಂಧಿಸದೆ ಸಾಕ್ಷಿಯಾಗಿ ಪರಿಗಣನೆ ಮಾಡುತ್ತಿದ್ದರು ಅನ್ಸುತ್ತೆ. ಆದ್ರೆ ರೇಣುಕಾಸ್ವಾಮಿ ಶವ ಎಸೆಯಲು ಇದೇ ರವಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಮೊದಲಿಗೆ ರವಿಗೆ ಶವವನ್ನು ತನ್ನ ಇಟಿಯಾಸ್ ಕಾರಿನಲ್ಲಿ ಹಾಕಿಕೊಂಡು ಚಿತ್ರದುರ್ಗ ಬಳಿ ಎಸೆಯುವಂತೆ ಹೇಳಿದ್ರಂತೆ. ಆದ್ರೆ ಇದಕ್ಕೆ ರವಿ ಒಪ್ಪಿರಲಿಲ್ಲ. ಕೊನೆ ಆತನಿಗೆ ಹೆದರಿಸಿ ಶೆಡ್‌ನಲ್ಲಿದ್ದ ಸ್ಕಾರ್ಪಿಯೋ ಕಾರ್‌ನ ಡ್ರೈವ್ ಮಾಡು ಇವರು ಹೇಳಿದ ಕಡೆ ಹೋಗು ಅಂತ ಕಳುಹಿಸಿದ್ದಾರೆ. ಇದರಂತೆ ರವಿ ಸ್ಕಾರ್ಪಿಯೋ ಕಾರ್ ಡ್ರೈವ್ ಮಾಡಿಕೊಂಡು ಹೋಗಿದ್ದಾನೆ. ಇದೇ ಕಾರಣಕ್ಕೆ ರವಿಯನ್ನು ಕೂಡ ಬಂಧಿಸಲಾಗಿದೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.