ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಮುಗಿದಿದೆ - ಕಮಿಷನರ್ ದಯಾನಂದ್
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಪೂರ್ಣಗೊಂಡಿದೆ. 17ಆರೋಪಿಗಳ ವಿರುದ್ಧ ಹಲವು ಸಾಕ್ಷ್ಯಗಳು ಕಲೆ ಹಾಕಿದ್ದು ಅಂತಿಮ ವರದಿ ರೆಡಿಯಾಗಿದೆ. 3991ಪುಟಗಳನ್ನ ಚಾರ್ಜ್ ಶೀಟ್‌ನ ಸಲ್ಲಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕೆಲವರನ್ನ ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಎಫ್‌ಎಸ್‌ಎಲ್ ಮತ್ತು ಸಿಎಫ್‌ಎಸ್‌ಎಲ್‌ನಿಂದ ವರದಿ ಬಂದಿದೆ. ಸಿಎಫ್‌ಎಸ್‌ಎಲ್‌ನಿಂದ ಒಂದಷ್ಟು ವರದಿ ಬಾಕಿ ಇದೆ. ಸರ್ಕಾರಿ ಅಧಿಕಾರಿಗಳನ್ನು ಈ ಕೇಸ್‌ನಲ್ಲಿ ಸಾಕ್ಷಿಗಳನ್ನಾಗಿ ಮಾಡಿಕೊಳ್ಳಲಾಗಿದೆ 231ಸಾಕ್ಷಿದಾರರನ್ನ ಉಲ್ಲೇಖ ಮಾಡಲಾಗಿದೆ. ಬೆಂಗಳೂರಿನ ಎಫ್‌ಎಸ್‌ಎಲ್‌ನಿಂದ ಎಲ್ಲಾ ವರದಿ ಬಂದಿವೆ. ಸಿಎಫ್ ಎಸ್ ಎಲ್ ಹೈದ್ರಾಬಾದ್ ನಿಂದ ಎಲೆಕ್ಟ್ರಾನಿಕ್ ಡಿವೈಸ್‌ಗಳ ವರದಿ ಬಂದಿದೆ. ಇನ್ನೂ ಒಂದಷ್ಟು ವರದಿ ಬರಬೇಕಿದೆ. ಸಾಕಷ್ಟು ತಾಂತ್ರಿಕ ಸಾಕ್ಷಿಗಳು ದೊರೆತಿವೆ. ತನಿಖೆಯಲ್ಲಿ ಎಲ್ಲವನ್ನೂ ಅಳವಡಿಸಲಾಗಿದೆ. ಇದು ಉತ್ತಮವಾದ ತನಿಖೆ. ಎಲ್ಲಾ ರೀತಿಯಾದ ತನಿಖೆ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.