ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೋರ್ಟ್ ನಲ್ಲಿ ಸಾಕ್ಷಿ ದಾಖಲಿಸಿದ ನಟ ಚಿಕ್ಕಣ್ಣ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಿಕ್ಕಣ್ಣ ಕೋರ್ಟ್ ನಲ್ಲಿ 164 ಸಾಕ್ಷ ಹೇಳಿಕೆ ದಾಖಲಿಸಿದ್ದಾರೆ. ದರ್ಶನ್ ಆಪ್ತನಿಂದ ನಟ ದರ್ಶನ್‌ಗೆ ಕಂಟಕ ಎದುರಾಗಲಿದ್ಯಾ ಎನ್ನುವ ಅನುಮಾನ ಎದುರಾಗಿದೆ. ಕೊಲೆ ದಿನ ದರ್ಶನ್ ಜೊತೆಗಿದ್ದ ಚಿಕ್ಕಣ್ಣನನ್ನು ಕರಸಿ ಪೊಲೀಸ್ರು ವಿಚಾರಣೆ ನಡೆಸಿದ್ರು. ಇದಾದ ನಂತರ ಪೊಲೀಸ್ರು ಸಿಆರ್ ಪಿಸಿ 164 ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ರೇಣುಕಾಸ್ವಾಮಿ ಪಟ್ಟಣಗೆರೆ ಶೆಡ್ ಗೆ ಬರೋ ಮುನ್ನ ದರ್ಶನ್ ಜೊತೆಯಲ್ಲಿ ಇದ್ದ ಚಿಕ್ಕಣ್ಣ ಸ್ಟೋನಿ ಬ್ರೂಕ್ ನಲ್ಲಿ ಪಾರ್ಟಿ ಮಾಡಿದ್ರು. ಪ್ರಕರಣದ ಮೂವರು ಆರೋಪಿಗಳಾದ ದರ್ಶನ್, ಪ್ರದೋಷ್, ವಿನಯ್ ಜೊತೆಯಲ್ಲಿ ಜೂನ್ 9ರಂದು ಸ್ಟೋನಿ ಬ್ರೂಕ್ ಅಲ್ಲಿ ಪಾರ್ಟಿ ಮಾಡಿದ್ರು. ಪವನ್ ಬಂದು ರೇಣುಕಾಸ್ವಾಮಿ ಬಂದಿರೋದಾಗಿ ಹೇಳಿದ್ದು, ಮಧ್ಯಾಹ್ನ 1:45 ಕ್ಕೆ ಸ್ಟೋನಿ ಬ್ರೂಕ್ ಗೆ ಬಂದಿದ್ದ ಪವನ್ ಮಾತು ಕೇಳಿದ ಬಳಿಕ ಸ್ಟೋನಿ ಬ್ರೂಕ್ ಇಂದ ಹೊರಟ್ಟಿದ್ದರು. 2:15 ಕ್ಕೆ ಸ್ಟೋನಿ ಬ್ರೂಕ್ ಇಂದ ಹೊರಟ್ಟಿದ್ದಾಗಿ ಚಿಕ್ಕಣ್ಣ ಹೇಳಿಕೆ ನೀಡಿದ್ದಾರಂತೆ.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.