LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆ

ಬೆಂಗಳೂರು: ರೈತರಿಗೆ ಅವಮಾನವಾಗುವಂತಹ ಯಾವುದೇ ವಿವಾದಾತ್ಮಕ ಹೇಳಿಕೆಯನ್ನ ನೀಡಿಲ್ಲ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೇನು ರೈತ ವಿರೋಧಿಯಲ್ಲ. ಚುನಾವಣೆ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಅಕ್ಷೇಪ ವ್ಯಕ್ತಪಡಿಸಿದರು.

ಮೂರು ವರ್ಷಕ್ಕೊಮ್ಮೆ ರೈತರು ಬೆಳೆಯುವಂತಹ ಬೆಳೆಗಳಿಗೆ ಬೆಲೆ ಸಿಗುತ್ತದೆ. ಉಳಿದ ಎರಡು ವರ್ಷ ಅವರ ಬೆಳೆಗಳಿಗೆ ನಿರ್ದಿಷ್ಟ ಪ್ರಮಾಣದ ಬೆಲೆ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗಾಗಿ ತಮ್ಮ ಸಾಲಮನ್ನಾ ಆಗಲಿ ಎಂದು ಬಯಸುತ್ತಾರೆ ಎಂದು ಹೇಳಿದ್ದೆ ಅಷ್ಟೇ. ಆದರೆ ಕಾರ್ಯಕ್ರಮದಲ್ಲಿ ನೀಡಿದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಕಿಡಿಕಾರಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿವಾನಂದ ಪಾಟೀಲ್ ಮಾತನಾಡಿ, ರೈತರಿಗೆ ಕೃಷ್ಣಾ ನದಿ ನೀರು, ವಿದ್ಯುತ್ ಉಚಿತವಾಗಿ ಸಿಗುತ್ತಿದೆ. ಮುಖ್ಯಮಂತ್ರಿಗಳು ಬೆಳೆ ಬೆಳೆಯಲು ಬೀಜ, ಗೊಬ್ಬರ ಕೊಟ್ಟರು. ಇನ್ನೂ ಅವರಿಗೆ ಇರುವ ಆಸೆ ಏನೆಂದರೆ ಮೇಲೆ ಮೇಲೆ ಬರಗಾಲ ಬಂದರೆ ನಮ್ಮ ಸಾಲ ಮನ್ನಾ ಆಗುತ್ತೆ ಅನ್ನೋದು. ಯಾರು ಈ ರೀತಿ ಬಯಸಬಾರದು ಎಂದಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಸೋಡಿಯಾ ಜಾಮೀನು ಅರ್ಜಿ: ಸಿಬಿಐ, ಇ.ಡಿ ಗೆ ಹೈಕೋರ್ಟ್ ನೋಟಿಸ್ ಜಾರಿಮುಸ್ಲಿಮರು ಬಿಜೆಪಿ ಪ್ರಚಾರ ಸಭೆಯಲ್ಲಿ ಭಾಗಿಯಾದ್ರೆ ಅಂತವರನ್ನು ಬಹಿಷ್ಕರಿಸಿ - ಮಲ್ಲಿಕಾರ್ಜುನ್ ಖರ್ಗೆ ವಿವಾದಾತ್ಮಕ ಹೇಳಿಕೆ'ಕುಟುಂಬವಾದದ ಕಾಂಗ್ರೆಸ್ ಬೇಕೇ? ಪರಂಪರೆ ಕಾಪಾಡುವ ಬಿಜೆಪಿ ಬೇಕೇ' - ಅಮಿತ್ ಶಾ ಪ್ರಶ್ನೆಶಿವಸೇನೆ ನಾಯಕರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ - ಇಬ್ಬರು ಪೈಲಟ್‌ಗಳಿಗೆ ಗಾಯ'ಸರ್ಕಾರಿ ನೌಕರ ನಮಗೆ ಸಂಬಳ ನಿಂತುಹೋಗಿದೆ ಎಂದರೆ ನಾನು ರಾಜಕೀಯ ನಿವೃತಿ ಪಡೆಯುತ್ತೇನೆ'- ಸಿಎಂಕಡುಬೇಸಿಗೆಯಲ್ಲಿ ವಾಹನಗಳಿಗೆ ಪೆಟ್ರೋಲ್‌, ಡೀಸೆಲ್‌ ಫುಲ್‌ ಟ್ಯಾಂಕ್‌ ಮಾಡಿಸೋದು ಸುರಕ್ಷಿತ: ಇಂಡಿಯನ್‌ ಆಯಿಲ್‌'ಅಮೇಥಿಯಲ್ಲೂ ಸೋಲಿನ ಭಯ ಕಂಡಿರುವ ರಾಹುಲ್‌ ರಾಯ್‌ಬರೇಲಿಯಿಂದ ಸ್ಪರ್ಧಿಸುತ್ತಿದ್ದಾರೆ'- ಮೋದಿಅಯೋಧ್ಯೆಯ ರಾಮಮಂದಿರಕ್ಕೆ ಇಂದು ಭೇಟಿ ನೀಡಲಿದ್ದಾರೆ 200 ಮಂದಿ ಪಾಕಿಸ್ತಾನಿಗಳುಲೈಂಗಿಕ ಕಿರುಕುಳ ಆರೋಪ: ಹೆಚ್‌.ಡಿ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಾಪಾಸ್'ನೇಹಾ ಹತ್ಯೆ ಖಂಡಿತವಾಗಿಯೂ ಲವ್‌ ಜಿಹಾದ್‌ ಪ್ರಕರಣ'- ಅಮಿತ್ ಶಾ