LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ರೈತ ಉತ್ಪಾದಕರ ಸಂಸ್ಥೆಗಳ ಸಾಲಕ್ಕೆ ಬಡ್ಡಿ ಸಹಾಯಧನ ಯೋಜನೆ.!

 

ಹೊಸಪೇಟೆ: ಕೃಷಿ ಇಲಾಖೆಯಿಂದ ರೈತ ಉತ್ಪಾದಕರ ಸಂಸ್ಥೆಗಳ ಸಾಲಕ್ಕೆ ಶೇ.4ರ ಬಡ್ಡಿ ಸಹಾಯಧನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.

ಸರ್ಕಾರದಿಂದ 2023-24 ನೇ ಸಾಲಿನ ಆಯವ್ಯಯದಲ್ಲಿ ರೈತ ಉತ್ಪಾದಕರ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ ರೂ. 20 ಲಕ್ಷ ವರೆಗಿನ ಸಾಲಕ್ಕೆ ಶೇ.4ರ ಬಡ್ಡಿ ಸಹಾಯಧನ ನೀಡಲಾಗುತ್ತದೆ. ವಿಜಯನಗರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೂರು ರೈತ ಉತ್ಪಾದಕರ ಸಂಸ್ಥೆಗಳು ಈ ಪ್ರಯೋಜನವನ್ನು ಪಡೆಯಬಹುದಾಗಿದ್ದು, ಅರ್ಜಿ ಸಲ್ಲಿಸಲು 2024ರ ಜನವರಿ 3 ಕೊನೆಯ ದಿನವಾಗಿರುತ್ತದೆ. ಮೊದಲು ಬಂದ ಸೂಕ್ತ ಅರ್ಜಿಗಳಿಗೆ ಸೌಲಭ್ಯ ನೀಡಲಾಗುವುದು.

ಸ್ವೀಕೃತವಾದ ಅರ್ಜಿಗಳಿಗೆ ನಿಯಮಾನಸಾರ ಬಡ್ಡಿ ಸಹಾಯಧನವನ್ನು ಸಂಬAಧಿಸಿದ ರೈತ ಉತ್ಪಾದಕರ ಸಂಸ್ಥೆಗಳ ಸಾಲದ ಖಾತೆಗೆ ಪಾವತಿಸಲಾಗುವುದು. ಜಿಲ್ಲೆಯ ರೈತ ಉತ್ಪಾದಕರ ಸಂಸ್ಥೆಗಳು ತಮ್ಮ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ಹಾಗೂ ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಿ, ಈ ಯೋಜನೆಯ ಸದುಪಯೊಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೇಹಾ ಹತ್ಯೆ ಖಂಡಿಸಿ ಏಪ್ರಿಲ್ 22ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದು ಗ್ಯಾರಂಟಿ.!ಈ ದಿನಗಳಲ್ಲಿ ಮದ್ಯ ಮಾರಾಟ ನಿಷೇಧ23 ರಂದು ಚುನಾವಣಾ ಹಿನ್ನೆಲೆ ಪ್ರಿಯಾOಕಾ ಗಾಂಧಿ ದುರ್ಗಕ್ಕೆಬೆಂಗಳೂರು: ಸ್ಟಾರ್ ನಿರ್ದೇಶಕ ಆರ್ ಚಂದ್ರುಗೆ ಮತ್ತೆ ಸಂಕಷ್ಟನೇಹಾ ಕೊಲೆ ಪ್ರಕರಣ: ನನ್ನ ಜೊತೆ ಮಾತಾಡಲ್ಲ ಅಂದಳು, ಅದಕ್ಕೆ ಚಾಕು ಹಾಕಿದೆ- ಬಾಯಿಬಿಟ್ಟ ಫಯಾಜ್'ಪ್ರಧಾನಿ ಸುಳ್ಳು ಹೇಳೋದು ಈ ಪ್ರಪಂಚದಲ್ಲಿಯೇ ಕೇಳಿರಲಿಲ್ಲ'- ಪ್ರಧಾನಿ ವಿರುದ್ಧ ರಮೇಶ್‌ ಕುಮಾರ್‌ ಕಿಡಿ5 ವರ್ಷಗಳಲ್ಲೇ ಅಮಿತ್ ಶಾ ಆಸ್ತಿ ದ್ವಿಗುಣ.! - ಅಫಿಡವಿಟ್‌ನಲ್ಲಿ ಬಹಿರಂಗಮದುವೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ವ್ಯಾನ್‌ಗೆ ಟ್ರಕ್ ಡಿಕ್ಕಿ- 9 ಮಂದಿ ಸಾವುಇಂದು ಮಧ್ಯಾಹ್ನ 3 ಗಂಟೆಗೆ ನಮ್ಮ ಮನೆಗೆ ಜೆಪಿ ನಡ್ಡಾ ಬರಲಿದ್ದಾರೆ - ನೇಹಾ ತಂದೆ ನಿರಂಜನ ಹಿರೇಮಠ