E-PAPER
17 Nov 2026, 12:18:32 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಲಿಂಗಾಯತ ಸಂಘಟನೆ ವತಿಯಿಂದ ಗ್ರಂಥ ಲೋಕಾರ್ಪಣೆ -- ವಚನಗಳು ನಮ್ಮ ಜೀವನದ ದಾರಿದೀಪಗಳು ಡಾ. ಗುರುದೇವಿ ಹುಲೆಪ್ಪನವರಮಠ ಅಭಿಮತ

ಶರಣರ ವಚನಗಳು ನಮ್ಮ ಬಾಳನ್ನು ತಿದ್ದುವ ದಾರಿದೀಪಗಳಾಗಿವೆ. ಪ್ರತಿಶರಣರ ಪ್ರತಿಯೊಂದು ವಚನದ ವಿಚಾರಗಳು ನೈಜತೆ ಬಿಂಬಿಸುವುದರ ಜೊತೆಗೆ ಸದಾಕಾಲ ಮಾರ್ಗದರ್ಶಿಯಾಗಿವೆ ಎಂದು ನಿವೃತ್ತ ಪ್ರಾಧ್ಯಾಪಕಿ ಮತ್ತು ಸಾಹಿತಿ ಡಾ.ಗುರುದೇವಿ ಹುಲೆಪ್ಪನವರಮಠ ರವಿವಾರ ದಿ 1 ರಂದು ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಪ್ರಾರoಭದಲ್ಲಿ ಮಹಾದೇವಿ ಅರಳಿ ಪ್ರಾಥ೯ನೆ ನಡಿಸಿಕೂಟ್ಟರು ಲಿಂಗಾಯತ ಸಂಘಟನೆಯ ವತಿಯಿಂದ ಅಕ್ಕಮಹಾದೇವಿ ತೆಗ್ಗಿ ರಚಿಸಿದ 'ವಚನ ಬುತ್ತಿ ' ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು. ಕೃತಿ ರಚಿಸಿದ ಅಕ್ಕಮಹಾದೇವಿ ತೆಗ್ಗಿ ಮಾತನಾಡಿ 12 ನೇ ಶತಮಾನದ ಸುಮಾರು 15 ಕ್ಕೂ ಹೆಚ್ಚು ವಚನಕಾರರ ವಚನಗಳನ್ನು ಬಳಸಿ ಅದನ್ನು ನೈಜ ಜೀವನದ ಜೊತೆಗೆ ವಿಶ್ಲೇಷಣೆ ಮಾಡಲಾಗಿದೆ ಪ್ರಸ್ತುತ ಜೀವನದಲ್ಲಿ ವಚನಗಳು ತೀರಾ ಅವಶ್ಯಕವಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಘಟನೆ ಅಧ್ಯಕ್ಷ ಈರಣ್ಣಾ ದೇಯನ್ನವರ ಮಾತನಾಡಿ ಸಂಘಟನೆಯ ಒಡನಾಟ ಮತ್ತು ಇಲ್ಲಿಯ ಪ್ರಾರ್ಥನೆ ಮತ್ತು ಅನುಭಾವದ ಪ್ರಭಾವದಿಂದ ಇಂದು ಅಕ್ಕಮಹಾದೇವಿ ತೆಗ್ಗಿಯವರು ಕೃತಿ ರಚಿಸುವ ಮಟ್ಟಕ್ಕೆ ಅನುಭವ ಪಡೆದಿದ್ದಾರೆ ಇದು ಸತ್ಸಂಗದ ಫಲವಾಗಿದೆ ಎಂದರು. ಕಾರ್ಯಕ್ರಮದಲ್ಲಿ ವಿರುಪಾಕ್ಷ ದೊಡ್ಡಮನಿ,ಸಿದ್ದಪ್ಪ ಸಾರಾ ಪೂರಿ, ಸದಾಶಿವ ದೇವರಮನಿ,ಶoಕರ ಶೆಟ್ಟಿ, ಆನಂದ ಕರ್ಕಿ,ಮಹಾದೇವ ಕೆoಪಿಗೌಡ್ರ, ಬಸವರಾಜ ಕರಡಿಮಠ,ಸುದೀರ ರಘಶೆಟ್ಟಿ,ಪ.ಬಿ.ಕರಿಕಟ್ಟಿ, ಬಿ.ಪಿ. ಜೇವಣಿ, ಶಿ.ಪೂಜಾರ, ಶಿವಕುಮಾರ ಪಾಟೀಲ,ಶಿವಾನoದ ನಾಯಕ, ಶoಕರ ರಾವಳ, ಸ ರಾ ಸುಳಕೂಡೆ,ಅಶೋಕ ಉಳೆಗಡ್ಡಿ, ಸುನಿಲ ಸಾಣಿಕೊಪ್ಪ, ಬಸವರಾಜ ಬಿಜ್ಜರಗಿ, ಡಾ ಅ. ಬ. ಇಟಗಿ, ಜಯಶ್ರೀ ಚವಲಗಿ,ಲಕ್ಷ್ಮಿ ಜೇವಣಿ ಶಶಿಕಲಾ ಪೂಜಾರಿ ಸೇರಿದಂತೆ ಶರಣರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸಂಗಮೇಶ ಅರಳಿ ಸ್ವಾಗತಿಸಿದರು, ಎಂ ವೈ ಮೆಣಸಿನಕಾಯಿ ನಿರೂಪಿಸಿದರು ಕೊನೆಯಲ್ಲಿ ಶಿವಾನಂದ ತಲ್ಲೂರ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.