E-PAPER
17 Nov 2026, 12:18:27 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ಲಿಂಗಾಯತ ಸಂಘಟನೆ ವತಿಯಿಂದ ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ- ಒಗ್ಗಟ್ಟಿನಿಂದ ಧರ್ಮ ಜಾಗೃತಿ ಸಾಧ್ಯ ಈರಣ್ಣ ದೇಯನ್ನವರ

ಬೆಳಗಾವಿ-13 : ಬಸವಣ್ಣನವರ ಆಚಾರ ವಿಚಾರಗಳನ್ನು ಪ್ರಚಾರಪಡಿಸುವುದಲ್ಲದೆ ಧಾರ್ಮಿಕವಾಗಿ ನಾವು ಜಾಗೃತಗೊಳ್ಳಲು ನಾವೆಲ್ಲ ಒಗ್ಗಟ್ಟಿನಿಂದ ಮುಂದೆ ಸಾಗಬೇಕಿದೆ ಬಸವ ಜಯಂತಿ ಉತ್ಸವದ ಮೂಲಕ ನಾವೆಲ್ಲ ಒಂದಾಗಿದ್ದೇವೆ ಈ ನಿಟ್ಟಿನಲ್ಲಿ ಮುಂದೆ ಸಾಗಿದಾಗ ಮಾತ್ರ ಧರ್ಮದ ಜಾಗೃತಿ ಸಾಧ್ಯ ಎಂದು ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ರವಿವಾರ ದಿ ೧೧ ರಂದು ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಲಿಂಗಾಯತ ಸಂಘಟನೆಗಳ ಒಕ್ಕೂಟದ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಪದಾಧಿಕಾರಿಗಳನ್ನು ಸತ್ಕರಿಸಿ ಮಾತನಾಡಿದರು. ಸಮಾಜದ ಮುಖಂಡರು ಎಂ ಪಿ ಫೌಂಡೇಶನ್ ಅಧ್ಯಕ್ಷ ಮುರುಗೇದ್ರಗೌಡ ಪಾಟೀಲ ಮಾತನಾಡಿ ಸಮಾಜದ ಬೇಕು ಬೇಡಿಕೆಗಳಿಗೆ ಮಾನ್ಯತೆ ಸಿಗಲು ನಾವೆಲ್ಲ ಒಗ್ಗೂಡುವುದರ ಮೂಲಕ ಪಕ್ಷಾತೀತವಾಗಿ ರಾಜಕೀಯದಲ್ಲಿ ಸಮಾಜದ ಮುಖಂಡರು ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ. ರಾಜಕೀಯವಾಗಿ ಗಟ್ಟಿತನ ಬಂದಾಗ ಮಾತ್ರ ಸಮಾಜ ಏಳಿಗೆ ಸಾಧ್ಯ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ ಬೆಳಗಾವಿ ಜಿಲ್ಲೆಯ ಸಾಮಾಜಿಕ ಒಗ್ಗಟ್ಟು ರಾಜ್ಯಕ್ಕೆ ಮಾದರಿಯಾಗುವುದಲ್ಲದೆ ಸಮಾಜಕ್ಕೂ ಶೋಭೆ ತಂದಿದೆ ಎಂದರು. ಅಶೋಕ ಮಳಗಲಿ ಮಾತನಾಡಿ ಒಂದಾದರೆ ಮಾತ್ರೆ ಸಾಲದು ಮಕ್ಕಳಲ್ಲಿ ಯುವ ಜನತೆಯಲ್ಲಿ ಧರ್ಮ ಜಾಗೃತಿ ಉಂಟು ಮಾಡಲು ಪ್ರಯತ್ನ ಮಾಡೋಣ ಎಂದರು. ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಗುಂಡು ಪಾಟೀಲ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಹುಕ್ಕೇರಿಯಲ್ಲಿ ಎತ್ತುಗಳ ಮೆರವಣಿಗೆ,ರೈತರಿಗಾಗಿ ಕಾರ್ಯಕ್ರಮಗಳು ಸೇರಿದಂತೆ ಧರ್ಮ ಜಾಗೃತಿಗಾಗಿ ಬಸವ ತತ್ವದ ಪ್ರಚಾರಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚಾಗುವನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.ನಗರ ಸೇವಕ ರಾಜಶೇಖರ ಧೋನಿ ಮಾತನಾಡಿ ಪಂಗಡಗಳು ಒಳ ಪಂಗಡಗಳು ಹೆಚ್ಚಿದಂತೆ ಸಮಾಜ ದ ಬಲ ಕಡಿಮೆಯಾಗುತ್ತಾ ಹೋಗುತ್ತದೆ ಅದಕ್ಕಾಗಿ ನಾವೆಲ್ಲ ಒಂದಾಗಿರುವುದು ಸೂಕ್ತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಂಕರ ಗುಡಸ,ಬಾಲಚಂದ್ರ ಬಾಗಿ ಮನೋಹರ ಪುಡಕಲಕಟ್ಟಿ ರಮೇಶ ಕಳಸನ್ನವರ, ಸೇರಿದಂತೆ ಅನೇಕ ಮುಖಂಡರು ಬಸವ ಜಯಂತಿ ಅತ್ಯಂತ ಯಶಸ್ವಿಯಾಗಿ ಒಟ್ಟಾಗಿ ಆಚರಿಸಿದ್ದರ ಕುರಿತು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಬಸವ ಜಯಂತಿಯನ್ನು ಕಳೆದೆರಡು ವರ್ಷಗಳಿಂದ ಒಗ್ಗಟ್ಟಾಗಿ ಆಚರಿಸಲು ಶ್ರಮವಹಿಸಿದ ಒಕ್ಕೂಟದ ಎಲ್ಲಾ ಮುಖಂಡರನ್ನು ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿ ಕೆ ಪಾಟೀಲ, ವಿರುಪಾಕ್ಷ ದೊಡಮನಿ, ಎಂ ವೈ ಮೆಣಸಿನಕಾಯಿ, ಬಿ.ಪಿ. ಜೆವಣಿ, ಶಿವಾನಂದ ತಲ್ಲೂರ, ಬಸವರಾಜ ಕರಡಿಮಠ, ಮ.ಬ.ಕರಿಕಟ್ಟಿ,ಬಸವರಾಜ ಬಿಜ್ಜರಗಿ, ಆನoದ ಕರಕಿ,ಮಹದೇವ ಕೆoಪಿಗೌಡರ,ಶ್ರೀದೇವಿ ನರಗುಂದ, ಶೋಭಾ ದೇಯನ್ನವರ, ಕಮಲಾ ಗಣಾಚಾರಿ,ಸೇರಿದಂತೆ ಶರಣರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸುರೇಶ ನರಗುoದ ಪ್ರಾಥ೯ನೆ ನಡಿಸಿ ಕೂಟ್ಟರು ಶಂಕರ ಶೆಟ್ಟಿ ದಾಸೋಹ ಸೇವೆ ಸಲ್ಲಿಸಿದರು ಸಂಗಮೇಶ ಅರಳಿ ಸ್ವಾಗತಿಸಿದರು ಸತೀಶ ಪಾಟೀಲ ನಿರೂಪಿಸಿದರು ಸದಾಶಿವ ದೇವರಮನಿ ವಂದಿಸಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.