LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್‌ಗೆ ಮೋದಿಯನ್ನು ಸೋಲಿಸಲು ಆಗಲ್ಲ'- ಜಿಟಿ ದೇವೇಗೌಡ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್​ ಮೈತ್ರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿಶ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಮಾಜಿ ಪ್ರಧಾನಿ ಹೆಚ್.​ಡಿ.ದೇವೇಗೌಡ ಅವರು ಮಾತಾಡಿದ್ದಾರೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವೇಗೌಡರಿಗೆ ಇಡೀ ದೇಶ ಗೌರವ ನೀಡುತ್ತದೆ.  ಕಾಂಗ್ರೆಸ್ ಮುಕ್ತ ಮಾಡಬೇಕು ಅಂತ ಮೋದಿ ಹೇಳಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಗ್ಯಾರಂಟಿಗಳಿಂದ ಎಂದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲ್ಲ. ಮೋದಿಯನ್ನು ಸೋಲಿಸಲು ಆಗಲ್ಲ. ದೇವೇಗೌಡರು ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ಹೆಚ್​ಡಿ ದೇವೇಗೌಡರು ಹೇಳಿದ್ದಾರೆ. ಮೈಸೂರು ಕ್ಷೇತ್ರದಲ್ಲಿ ಜೆಡಿಎಸ್​, ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆ. ನಾನು ಅಥವಾ ಪ್ರತಾಪ್ ಸಿಂಹ ಸಂಸದನಾಗಬೇಕು ಅಂತೇನಿಲ್ಲ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಗೆಲ್ಲಬೇಕು, ಅದೇ ನಮ್ಮ ಗುರಿಯಾಗಿದೆ ಎಂದರು.

ದೇವೇಗೌಡರ ಬಗ್ಗೆ‌ ನರೇಂದ್ರ ಮೋದಿ ನಂಬಿಕೆ ಇಟ್ಟಿದ್ದಾರೆ. ದೇವೇಗೌಡರಿಗೆ ಅಗೌರವ ತರುವ ಕೆಲಸ ಮಾಡಿಲ್ಲ. ದೇವೇಗೌಡರು ಸಣ್ಣ ಕಾರ್ಯಕರ್ತರನ್ನು ಬಿಟ್ಟು ಕೊಡಲ್ಲ ಅಂತ ಹೇಳಿದ್ದಾರೆ. ಹೀಗಾಗಿ ಯಾರೂ ಭಯ ಬೀಳುವುದು, ಆತಂಕ ಪಡುವುದು ಬೇಡ ಎಂದು ಜಿಟಿ ದೇವೇಗೌಡ ಹೇಳಿದರು.

11 ತಿಂಗಳು ದೇವರಾಜು ಅರಸು ಅವರಿಗೆ ಯಾವ ರೀತಿ ನಡೆಸಿಕೊಂಡಿದ್ದೀರಿ? ಸಿದ್ದರಾಮಯ್ಯ ಅವರಿಗೆ ದೇವರಾಜು ಅರಸು ಪರಿಸ್ಥಿತಿ ಬರುವುದು ಬೇಡ. ದೇವರಾಜ್ ಅರಸು ಕುಟುಂಬಕ್ಕೆ ಒಂದು ಎಂಎಲ್​ಸಿ ಸ್ಥಾನ ಕೊಟ್ಟಿಲ್ಲ. ಬಿಕೆ ಹರಿಪ್ರಸಾದ್ ಅದನ್ನು ಹೇಳಿದ್ದಾರೆ. ಇಷ್ಟಕ್ಕೆ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ನೋಟಿಸ್ ನೀಡಿದೆ ಎಂದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆಕೊರೊನಾ ಜೆಎನ್.1 ವೈರಸ್ -ಸಭೆ ನಡೆಸಿ ನಿಯಮ ಪಾಲನೆಯ ನಿರ್ಧಾರ - ದಿನೇಶ್ ಗುಂಡೂರಾವ್ಶಬರಿಮಲೆಯ ಅಯ್ಯಪ್ಪ ಭಕ್ತರಿಗೆ ನೀರು,ಆಹಾರ ಸೌಲಭ್ಯ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನದತ್ತಮಾಲೆ ಧರಿಸುವುದಾಗಿ ಘೋಷಣೆ ಮಾಡಿದ್ದ ಹೆಚ್ ಡಿ ಕೆ ಮಾತು ತಪ್ಪಿದ್ರಾ ?ಮನೆಯಲ್ಲಿರುವ ಪಾಲಕ್ ನಲ್ಲಿಯೇ ಮನೆ ಮದ್ದು..!