ಲೋಕಸಭೆ ಚುನಾವಣೆ ನಡೆದರೆ ಮೋದಿ ಹ್ಯಾಟ್ರಿಕ್ ಬಾರಿಸುವುದು ಖಚಿತ - NDAಗೆ 326, INDIA ಕೂಟಕ್ಕೆ 190 ಸ್ಥಾನ ; ಟೈಮ್ಸ್ ನೌ ಸಮೀಕ್ಷೆ
ಈಗ ಲೋಕಸಭೆ ಚುನಾವಣೆ ನಡೆದರೆ ನರೇಂದ್ರ ಮೋದಿ ಹ್ಯಾಟ್ರಿಕ್ ಬಾರಿಸುವುದು ಖಚಿತವಾಗಿದೆ. 'ಟೈಮ್ಸ್ ನೌ' ಹಾಗೂ 'ಇಟಿಜಿ' ಜಂಟಿಯಾಗಿ ನಡೆಸಿದ ಸಮೀಕ್ಷೆ ಹೇಳಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ 296ರಿಂದ 326 ಸ್ಥಾನ ಬರಲಿದ್ದು, ವಿಪಕ್ಷಗಳ 'ಇಂಡಿಯಾ' ಕೂಟಕ್ಕೆ 160ರಿಂದ 190 ಹಾಗೂ ಇತರರು 70-80 ಸ್ಥಾನ ಗಳಿಸಲಿದ್ದಾರೆ ಎಂದು ಅಂದಾಜಿಸಿದೆ. ಎನ್‌ಡಿಎ ಅಂಗಪಕ್ಷಗಳನ್ನು ಬದಿಗೆ ಸರಿಸಿದರೆ ಬಿಜೆಪಿಯೊಂದೇ 288ರಿಂದ 314 ಸ್ಥಾನ ಗಳಿಸಲಿದೆ. ಕಾಂಗ್ರೆಸ್ 62ರಿಂದ 80 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ವಿವರಿಸಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ 353 ಸ್ಥಾನ ಬಂದಿದ್ದವು. ಈಗಿನ ಸಮೀಕ್ಷೆ ಅದಕ್ಕಿಂತ ಕಡಿಮೆ ಸೀಟು ನೀಡಿದ್ದರೂ, ಎನ್‌ಡಿಎ ಶೇ.55, ಇಂಡಿಯಾ ಶೇ.36 ಹಾಗೂ ಇತರರು ಶೇ.9ರಷ್ಟು ಮತ ಗಳಿಸಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ 18ರಿಂದ 20 ಸ್ಥಾನ ಬರಲಿವೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ 8ರಿಂದ 10 ಸ್ಥಾನ ಗಳಿಸಬಹುದು ಎಂದು 'ಟೈಮ್ಸ್ ನೌ' ಸಮೀಕ್ಷೆ ಹೇಳಿದೆ. ಕಳೆದ ಸಲ ಬಿಜೆಪಿ 25, ಕಾಂಗ್ರೆಸ್ 1, ಜೆಡಿಎಸ್ 1 ಹಾಗೂ ಪಕ್ಷೇತರರು 1ಸ್ಥಾನ ಗೆದ್ದಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.