LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ'- ಸಿ.ಟಿ.ರವಿ

ಚಿಕ್ಕಮಗಳೂರು : ವಕ್ಫ್ ಬೋರ್ಡ್ ಅನ್ನೋದು ಆಧುನಿಕ ಭಸ್ಮಾಸುರ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಒಬ್ಬ ಮೋಹಿನಿ ಸಾಲಲ್ಲ, ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದು ವಕ್ಫ್ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವೋಟಿನ ಆಸೆಗೆ ಅವರಿಗೆ ನಮ್ಮವರೇ ವರ ಕೊಟ್ಟರು. ಹಿಂದಿನ ಭಸ್ಮಾಸುರನಂತೆ ಇಂದಿನ ಭಸ್ಮಾಸುರ ಎಲ್ಲರ ತಲೆ ಮೇಲೆ ಕೈ ಇಡಲು ಬಂದಿದ್ದಾನೆ. ಭಗವಂತ ಮತ್ತೊಮ್ಮೆ ಮೋಹಿನಿ ರೂಪದಲ್ಲಿ ಭಸ್ಮಾಸುರನನ್ನ ನಾಶ ಮಾಡಬೇಕಾದ ಅವಶ್ಯಕತೆ ಇದೆ. ಆ ಭಸ್ಮಾಸುರ ವರ ಕೊಟ್ಟ ಶಿವನನ್ನೇ ಅಟ್ಟಿಸಿಕೊಂಡು ಹೋದನಂತೆ. ಆಗ ವಿಷ್ಣು ಮೋಹಿನಿ ರೂಪ ತಾಳಿ ಭಸ್ಮಾಸುರನನ್ನ ನಾಶ ಮಾಡಿದ ಕಥೆ ಕೇಳಿದ್ದೇವೆ. ಆಧುನಿಕ ಭಸ್ಮಾಸುರನನ್ನ ನಾಶ ಮಾಡೋದಕ್ಕೆ ಇಡೀ ಹಿಂದೂ ಸಮಾಜವೇ ಒಂದಾಗಬೇಕು ಎಂದಿದ್ದಾರೆ.

ವಕ್ಫ್ ಬೋರ್ಡಿಗೆ ಪರಮಾಧಿಕಾರವಿದೆ, ದೇಶ-ಜಗತ್ತಿನ ಯಾವ ಆಸ್ತಿಯನ್ನಾದರೂ ನಮ್ಮದು ಅನ್ನಬಹುದು. ಒಮ್ಮೆ ಘೋಷಣೆ ಮಾಡಿಕೊಂಡರೆ ಅಲ್ಲಾಗೆ ಸೇರಿದ್ದು ಅಂತಾರೆ. ಬಲಿ ಚಕ್ರವರ್ತಿ ವಿಷ್ಣುವಿನ ಅವತಾರದ ವಾಮನನಿಗೆ ಆ ಕಾಲದಲ್ಲೇ ದಾನ ಕೊಟ್ಟಿದ್ದಾನೆ. ಮತ್ತೆ ದಾನ ಕೊಡಬೇಕು ಅಂದರೆ ವಿಷ್ಣುವಿನ ಅವತಾರದ ವಾಮನನೇ ಬಂದು ಕೊಡಬೇಕು. ಇಡೀ ಭೂಮಂಡಲವೇ ಮಹಾ ವಿಷ್ಣುಗೆ ಸೇರಿದ್ದು. ಮಹಾವಿಷ್ಣು ಎಲ್ಲಿವರೆಗೆ ಇನ್ನೊಬ್ಬರಿಗೆ ಭೂಮಿ ಕೊಡಲ್ವೋ ಅಲ್ಲಿವರೆಗೂ ಅದು ಸನಾತನ ಧರ್ಮೀಯರದ್ದು. ಸನಾತನ ಧರ್ಮದಿಂದ ದೂರ ಹೋದವರಿಗೆ ಭೂಮಿ ಮೇಲೆ ಬದುಕುವ ಹಕ್ಕಿದೆ ಅಷ್ಟೆ. ದಶಾವತಾರ, ದೇವನೊಬ್ಬ ನಾಮ ಹಲವು, ಬಹುದೇವತಾರಾಧನೆ ಬಗ್ಗೆ ನಂಬಿಕೆ ಇಟ್ಟಿದ್ದಾರೋ ಅವರಿಗೆ ಮಾತ್ರ ವಾರಸುದಾರಿಕೆ ಇದೆ ಎಂದು ಕಿಡಿಕಾರಿದ್ದಾರೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಆ. 23, 24 ರಂದು ಕೆಲವು ರೈಲುಗಳು ರದ್ದು, ಸಂಚಾರದಲ್ಲಿ ಬದಲಾವಣೆಸ್ಫೋಟಕ ತಿರುವು ಪಡೆದುಕೊಂಡ ಧರ್ಮಸ್ಥಳ ಪ್ರಕರಣಲಕ್ಷಗಟ್ಟಲೆ ಸಂಬಳದ ಕೆಲಸ ಬಿಟ್ಟು ಐಎಎಸ್ ಟಾಪರ್ ಆದ ಉತ್ಸವ್ ಗೌತಮ್ ಸಕ್ಸಸ್‌ ಸ್ಟೋರಿವಾಯುಭಾರ ಕುಸಿತ : ಆಗಸ್ಟ್ 19 ಮತ್ತು 20ರಂದು ರಾಜ್ಯಾದ್ಯಂತ ವ್ಯಾಪಕ ಮಳೆ.!ಆಗಸ್ಟ್ 19 ಮಳೆ ಅಬ್ಬರ ಮುಂದುವರೆದಿದ್ದು ಮುನ್ನೆಚ್ಚರಿಕೆ ಕ್ರಮ ಈ ಜಿಲ್ಲೆಗಳಲ್ಲಿ ಶಾಲಾ-ಕಾಲೇಜು ರಜೆ.!ಗ್ರಾಮಾಂತರ ಪ್ರದೇಶ ಹಾಗೂ ದಾವಣೆಗರೆ ಈ ಭಾಗಗಳಲ್ಲಿ ಕರಂಟ್ ಇರಲ್ಲ.!ಒಳ ಮೀಸಲಾತಿ : ನಾಗಮೋಹನ್ದಾಸ್ ಆಯೋಗ ದತ್ತಾಂಶ ಸರಿ: ಜೆ.ಯಾದವರೆಡ್ಡಿಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!