LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವರ್ಧಮಾನ್‌ ಗ್ರೂಪ್‌ ಎಂಡಿಗೆ 7 ಕೋಟಿ ರೂ. ವಂಚಿಸಿದ ಸೈಬರ್‌ ಖದೀಮರು

ಹೊಸದಿಲ್ಲಿ : ಸಿಬಿಐ ಅಧಿಕಾರಿಗಳ ಸೋಗುಹಾಕಿ ಆನ್‌ಲೈನ್‌ ಮೂಲಕ ವರ್ಧಮಾನ್‌ ಕಂಪನಿ ಮಾಲೀಕ ಎಸ್‌.ಪಿ.ಓಸ್ವಾಲ್‌ ಅವರ ಖಾತೆಯಿಂದ 7 ಕೋ. ರೂ. ಎಗರಿಸಿದ್ದ ಇಬ್ಬರು ಸೈಬರ್‌ ವಂಚಕರನ್ನು ಪಂಜಾಬ್‌ ಪೊಲೀಸರು 48 ತಾಸುಗಳೊಳಗೆ ಬಂಧಿಸಿದ್ದಾರೆ. ಈ ಗ್ಯಾಂಗಿನಲ್ಲಿ ಇನ್ನೂ 7 ಮಂದಿಯಿದ್ದು, ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.ಓರ್ವ ಆರೋಪಿ ಸಿಬಿಐ ಅಧಿಕಾರಿಯಂತೆ ಸೋಗು ಹಾಕಿ ಓಸ್ವಾಲ್‌ ಅವರನ್ನು ಸಂಪರ್ಕಿಸಿ ಅವರಿಗೆ ತನ್ನ ನಕಲಿ ಗುರುತಿನ ಕಾರ್ಡ್‌ ತೋರಿಸಿದ್ದ. ನಂತರ ಮಾಮೂಲಿ ಕಾರ್ಯಶೈಲಿಯಂತೆ ಕೇಸಿನಿಂದ ಅವರನ್ನು ಪಾರು ಮಾಡಲು ಹಣಕ್ಕೆ ಬೇಡಿಕೆಯಿಟ್ಟಿದ್ದರು. ಅವರನ್ನು ಡಿಜಿಟಲ್‌ ಬಂಧನದಲ್ಲಿಟ್ಟು, ವಿವಿಧ ಖಾತೆಗಳಿಂದ 7 ಕೋಟಿ ರೂ. ತೆಗೆದಿದ್ದರು. ತಾನು ಮೋಸ ಹೋದದ್ದು ಗೊತ್ತಾದ ಬಳಿಕ ಓಸ್ವಾಲ್‌ ಲೂಧಿಯಾನ ಪೊಲೀಸರಿಗೆ ದೂರು ನೀಡಿದ್ದರು. ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅಸ್ಸಾಂ ನಿವಾಸಿಗಳಾದ ಅತನೂ ಚೌಧರಿ ಮತ್ತು ಆನಂದ್‌ ಚೌಧರಿ ಎಂಬಿಬ್ಬರನ್ನು ಬಂಧಿಸಿ ಅವರಿಂದ 5.25 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಈ ಮೊದಲು ಇವರು ಇದೇ ರೀತಿ ಇನ್ನೋರ್ವ ಉದ್ಯಮಿಯಿಂದ 1.01 ಕೋಟಿ ರೂ. ಲಪಟಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ.ದೇಶಾದ್ಯಂತ ಸೈಬರ್‌ ವಂಚನೆ ಮಾಡುತ್ತಿರುವ ಜಾಲ ಇವರದ್ದು. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಹಲವು ಮಂದಿ ಈ ಜಾಲದಲ್ಲಿ ಇದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಯೋಧ್ಯೆಯಲ್ಲಿ 22 ವರ್ಷದ ಯುವತಿಯ ಅತ್ಯಾಚಾರ, ಕೊಲೆ- ಕಣ್ಣೀರಿಟ್ಟ ಸಂಸದಆಧಾರ ಕಾರ್ಡ್‌ ಮೂಲಕ ಕಡಿಮೆ ಬಡ್ಡಿ ದರದಲ್ಲಿ 2.5 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯಹಿಂದೂ ಧರ್ಮ ಎಂದರೆ ಯಾರನ್ನೂ ಬಲವಂತವಾಗಿ ಜೈ ಶ್ರೀ ರಾಮ್ ಎಂದು ಹೇಳುವಂತೆ ಒತ್ತಾಯಿಸುವುದಲ್ಲ: ತರೂರ್ಮಹಾ ಕುಂಭ ಮೇಳದಲ್ಲಿ 'ಅಮೃತ ಸ್ನಾನ' ಕ್ಕಾಗಿ 'ಆಪರೇಷನ್ ಇಲೆವೆನ್'ಸಂಗೀತ ಕಾರ್ಯಕ್ರಮದಲ್ಲೇ ಗಾಯಕ ಸೋನು ನಿಗಮ್ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲುನ್ಯಾಕ್ ಗ್ರೇಡ್ ಕೊಡಲು ಲಂಚ ಪಡೆದ ವಿವಿ ಪ್ರಾಧ್ಯಾಪಕಿ ಬಂಧನಕಾಲೇಜು ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ ಶಿಶುವನ್ನು ಕಸದ ಬುಟ್ಟಿಯಲ್ಲಿ ಬಚ್ಚಿಟ್ಟು ಕ್ಲಾಸಿಗೆ ಹಾಜರ್!ವಸಂತ ಪಂಚಮಿಯ ಪವಿತ್ರ ದಿನ- ತ್ರಿವೇಣಿ ಸಂಗಮದಲ್ಲಿ ಭಕ್ತರಿಂದ 3ನೇ ಅಮೃತಸ್ನಾನಐರ್ಲೆಂಡ್‌ನಲ್ಲಿ ಕಾರು ಅಪಘಾತದಲ್ಲಿ ಇಬ್ಬರು ಭಾರತೀಯರು ಸಾವು.!ಉಡುಪಿ: ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟುಗೆ ವೈದ್ಯಕೀಯ ಪರೀಕ್ಷೆ , ನ್ಯಾಯಾಂಗ ಬಂಧನ