Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿಶೇಷಚೇತನರ ಮಾಸಾಶನವನ್ನು 5,000 ರೂ.ಗೆ ಏರಿಕೆ ಮಾಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ

ರಾಮನಗರ : ಈ ಹೃದಯಹೀನ ಸರ್ಕಾರ ವಿಶೇಷಚೇತನರ ಅಹವಾಲುಗಳನ್ನು ಕೇಳಿಲ್ಲ. ಕೂಡಲೇ ವಿಶೇಷಚೇತನರ ಮಾಸಾಶನವನ್ನು 5,000 ರೂ. ಏರಿಕೆ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದರು. 

ರಾಮನಗರದಲ್ಲಿ ವಿಶೇಷಚೇತನರ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ವಿಶೇಷಚೇತನರಿಂದ ದೊಡ್ಡಮಟ್ಟದ ಪ್ರತಿಭಟನೆ ನಡೆಯುತ್ತಿದೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ನೀವು ಮಾಡುತ್ತಿರುವ ಧರಣಿಗೆ ಪ್ರತಿಕ್ರಿಯೆಯಾಗಿ ಜಿಲ್ಲಾಧಿಕಾರಿ ನನ್ನೊಂದಿಗೆ ಮಾತಾಡಿದ್ದಾರೆ. ನೀತಿ ಸಂಹಿತೆ ಇರುವುದರಿಂದ ಬರಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ಅವಧಿಯಲ್ಲಿ ನಾನು ಕಂದಾಯ ಸಚಿವನಾಗಿದ್ದಾಗ 700 ರೂ. ಇದ್ದ ಮಾಸಾಶನವನ್ನು 1,400 ರೂ. ಮಾಡಿದ್ದೆ. ಆಸಿಡ್‌ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ಮಾಸಿಕ 3,000 ರೂ. ಅನ್ನು 10,000 ರೂ. ಮಾಡಿದ್ದೆ. ಈ ಮೂಲಕ ಅವರಿಗೆ ಔಷಧಿಗೆ ಸಹಾಯವಾಗಿತ್ತು. ಈಗ ವಿಶೇಷಚೇತನರ ಮಾಸಾಶನವನ್ನು 5,000 ರೂ. ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ದೆಹಲಿಯಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆದಾಗ ಅಲ್ಲಿನ ಬಿಜೆಪಿ ಸಿಎಂ 5,000 ರೂ.ಗೆ ಏರಿಕೆ ಮಾಡಿದ್ದಾರೆ. ಆಂಧ್ರಪ್ರದೇಶದಲ್ಲಿ 3,000 ರೂ. ಆಗಿದೆ ಎಂದರು. 

ಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಾಸಾಶನವನ್ನು 5,000 ರೂ. ಗೆ ಏರಿಕೆ ಮಾಡಬೇಕಿತ್ತು. ಆದರೆ ಇದು ಹೃದಯ ಇಲ್ಲದ ಬಂಡೆ ಸರ್ಕಾರವಾಗಿದೆ. ರಾಮನಗರ ಅವರದ್ದೇ ಜಿಲ್ಲೆಯಾಗಿದ್ದು, ವಿಶೇಷಚೇತನರನ್ನು ಭೇಟಿಯಾಗಿ ಮಾತಾಡಬೇಕಿತ್ತು. ಎಷ್ಟು ಏರಿಸುತ್ತೇವೆಂದಾದರೂ ಭರವಸೆ ನೀಡಬೇಕಿತ್ತು. ಐದಾರು ತಿಂಗಳಿಂದ ಯಾರಿಗೂ ಪಿಂಚಣಿಗಳು ಬರುತ್ತಿಲ್ಲ. ಇದನ್ನು ಪ್ರಶ್ನೆ ಮಾಡಿದರೆ ಬಯೋಮೆಟ್ರಿಕ್‌, ಸರ್ವೆ ಎಂದೆಲ್ಲ ನೆಪ ಹೇಳುತ್ತಾರೆ. ಸ್ವಾತಂತ್ರ್ಯ ಬಂದಾಗಿಂದಲೂ ಸರ್ವೆ ನಡೆಯುತ್ತಲೇ ಇದ್ದು, ಅದರಲ್ಲಿ ವಿಶೇಷವೇನೂ ಇಲ್ಲ. ಆರ್ಥಿಕ ಇಲಾಖೆ ಪಾಪರ್‌ ಆಗಿದೆ ಎಂದು ತಿಳಿವಳಿಕೆ ಪತ್ರ ನೀಡಲಾಗಿದೆ. ಹಣ ಇಲ್ಲದೆ, ನಾವು ಪಾಪರ್‌ ಆಗಿದ್ದೇವೆ, ನೀವೇ ಡೊನೇಶನ್‌ ಕೊಡಿ ಎಂದು ಬೇಡಿಕೊಳ್ಳಲಿ ಎಂದರು. 

ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡರು ರಸ್ತೆಗೆ ಜಲ್ಲಿ ಹಾಕಿ ಎಂದು ಅಧಿಕಾರಿಗಳ ಬಳಿ ಕೈ ಮುಗಿಯವ ಸ್ಥಿತಿ ಬಂದಿದೆ. ನಾಯಿಯನ್ನು ಬಾಲ ಅಲ್ಲಾಡಿಸುವಂತೆ ಈ ಸರ್ಕಾರದ ಪರಿಸ್ಥಿತಿಯಾಗಿದೆ. ಒಬ್ಬ ಸಚಿವ ಎಂಜಿನಿಯರ್‌ ಬಳಿ ಮನವಿ ಮಾಡುತ್ತಾರೆಂದರೆ, ಕೈಯಿಂದ ಹಣ ಹಾಕಿ ರಸ್ತೆ ಮಾಡಿ ಎಂದರ್ಥ. ಒಬ್ಬ ಸಚಿವರು ಬಂದು ಸರ್ಕಾರದಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಗ್ಯಾರಂಟಿಗಳಿಂದಾಗಿ ಯಾರಿಗೂ ಹಣ ಕೊಡಲು ಆಗುತ್ತಿಲ್ಲ ಎಂದಿದ್ದಾರೆ. ಸಚಿವ ಬಸವರಾಜ ರಾಯರೆಡ್ಡಿ ಅವರು ಗ್ಯಾರಂಟಿ ಬೇಕೋ ರಸ್ತೆ ಬೇಕೋ ಎಂದು ಪ್ರಶ್ನೆ ಮಾಡಿದ್ದಾರೆ ಎಂದರು. 

ಬಸವರಾಜ ಬೊಮ್ಮಾಯಿಯವರ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡುವ ಕೆಲಸವಾಗಿತ್ತು. ಇಂತಹ ಕೆಲಸವನ್ನು ಈಗಿನ ಸರ್ಕಾರ ಮಾಡಬೇಕು. ಈಗಿನ ಕಾಲದ ದರಕ್ಕೆ ತಕ್ಕಂತೆ ಪಿಂಚಣಿ ಏರಿಸಬೇಕಿದೆ. ಪ್ರತಿ ವರ್ಷ ಪಿಂಚಣಿಗಳಿಗೆ 10,000 ಕೋಟಿ ರೂ. ಮೀಸಲಿಡಲಾಗುತ್ತದೆ. ಅದನ್ನು ಹೆಚ್ಚಳ ಮಾಡುವುದು ಸರ್ಕಾರದ ಕರ್ತವ್ಯ. ಹಣವಿಲ್ಲ ಎಂಬ ಕಾರಣಕ್ಕೆ ಹೆಚ್ಚಳ ಮಾಡದೇ ಇರಲು ಸಾಧ್ಯವಿಲ್ಲ ಎಂದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು-ರಾಮೇಶ್ವರಂ ನಡುವೆ ವಿಶೇಷ ರೈಲುಗಳ ಸಂಚಾರ15 ದಿನದೊಳಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ 'ಗ್ಯಾರಂಟಿ ಸಮಿತಿ ರಚನೆ'ಗೆ ಸರ್ಕಾರ ಖಡಕ್ ಆದೇಶತಿರುಮಲದ ಕರ್ನಾಟಕ ಪ್ರವಾಸಿ ಸೌಧ ನಿರ್ವಹಣೆ KSTDCಗೆ: ಸಚಿವ ಕೆ.ಜೆ. ಜಾರ್ಜ್ವಿಶೇಷಚೇತನರ ಮಾಸಾಶನವನ್ನು 5,000 ರೂ.ಗೆ ಏರಿಕೆ ಮಾಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ‘ಆಕ್ಟಿವ್ ಕರ್ನಾಟಕ’ ಮೂಲಕ ಕ್ರೀಡೆ–ಪ್ರವಾಸೋದ್ಯಮ ಸಂಪರ್ಕ: ಸಚಿವ ಕೆ.ಜೆ. ಜಾರ್ಜ್ಪರಿಶಿಷ್ಟ ಪಂಗಡದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವುದೇ ನನ್ನ ಗುರಿ: ಸಚಿವ ಟಿ.ರಘುಮೂರ್ತಿBIG BREAKING: ತಾವು ಕರ್ತವ್ಯ ನಿರ್ವಹಿಸುವ 'ಕೇಂದ್ರ ಸ್ಥಾನ'ಗಳಲ್ಲೇ 'ಅಧಿಕಾರಿ, ಸಿಬ್ಬಂದಿ ವಾಸ' ಕಡ್ಡಾಯ: ರಾಜ್ಯ ಸರ್ಕಾರ ಆದೇಶಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತBREAKING: ರಾಜ್ಯ ಸಚಿವ ಸಂಪುಟ ಸಭೆ ದಿಢೀರ್ ರದ್ದು, ಚುನಾವಣಾ ಆಯೋಗ ಮುಂದೆ ಸಿಎಂ ಸೇರಿ ಸಚವರು ಧರಣಿBREAKING: ಫಾರ್ಮ್-7 ಸಲ್ಲಿಕೆ ಅಕ್ರಮ: ಚು.ಆಯೋಗದ ಕಚೇರಿ ಎದುರು ಸಿಎಂ ಡಿ.ಕೆ. ಶಿವಕುಮಾರ್, ಸಚಿವರು ಧರಣಿ ಪ್ರತಿಭಟನೆ