LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಾಕಿಂಗ್‌ ಮಾಡೋದ್ರಿಂದ ಕ್ಯಾನ್ಸರ್, ಶುಗರ್ ಸಮಸ್ಯೆಗೂ ಸಿಗುತ್ತೆ ಮುಕ್ತಿ – ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ…

ಇತ್ತೀಚಿನ ದಿನಗಳ ಬದಲಾಗುತ್ತಿರುವ ಜೀವನಶೈಲಿಯಲ್ಲಿ ನಾವು ನಡೆಯುವುದು, ಓಡಾಡುವುದು ಕಡಿಮೆಯಾಗಿದೆ. ಈಗ ಹೆಚ್ಚಾಗಿ ಕೂತು ಕೆಲಸ ಮಾಡುವುದು. ಇದರಿಂದಾಗಿ ಕೆಲ ಆರೋಗ್ಯ ಸಮಸ್ಯೆಗಳು ನಮಗೆ ಕಾಡಬಹುದು.

ಈ ಒತ್ತಡದ ಜೀವನದಲ್ಲಿ ದಿನದಲ್ಲಿ 1 ಗಂಟೆ ಸಮಯವನ್ನು ಹೊಂದಿಸಿಕೊಂಡು ನಡೆಯುವುದರಿಂದ ಪ್ರಯೋಜನ ಇದೆ. ಪ್ರಸ್ತುತ ದಿನಗಳಲ್ಲಿ ಜನರು ವಾಕಿಂಗ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ವಾಕಿಂಗ್ ಮಾಡಲು ವಯಸ್ಸಿನ ಮಿತಿ ಇಲ್ಲ. ಯಾವ ವಯೋಮಾನದವರು ಕೂಡಾ ವಾಕಿಂಗ್ ಮಾಡಬಹುದು.

ನಡಿಗೆ ದೇಹ ಮತ್ತು ಮನಸ್ಸನ್ನು ಉಲ್ಲಾಸಿತವಾಗಲು ಸಹಾಯ ಮಾಡುತ್ತದೆ. ಕೀಲು ನೋವು, ಹೃದಯದ ಸಮಸ್ಯೆಗಳು, ಒತ್ತಡ, ಖಿನ್ನತೆಯಿಂದ ಬಳಲುತ್ತಿದ್ದರೆ ವಾಕಿಂಗ್ ಮಾಡುವುದು ಒಳ್ಳೆಯ ಅಭ್ಯಾಸ.

ಶೂ ಧರಿಸಬೇಕು, ಆರಾಮದಾಯಕ ಬಟ್ಟೆಗಳನ್ನು ಧರಿಸಿ, ಒಂದು ಬಾಟಲಿ ನೀರು, ದೀರ್ಘ ನಡಿಗೆಯಾದರೆ ಎನರ್ಜಿ ಡ್ರಿಂಕ್ ತೆಗೆದುಕೊಂಡು ಹೋಗಿ, ಪ್ರತಿದಿನ ವಿಭಿನ್ನ ಮಾರ್ಗಗಳನ್ನು ಬಳಸುವುದು ಉತ್ತಮ.

ಹೊಸದಾಗಿ ವಾಕಿಂಗ್ ಆರಂಭಿಸುವವರು ಪ್ರತಿದಿನ 10 ನಿಮಿಷ ನಡೆಯುವ ಮೂಲಕ ಪ್ರಾರಂಭಿಸಿ, ತಕ್ಷಣ ದೂರ ನಡೆಯಬೇಡಿ. ದಿನದಿಂದ ದಿನಕ್ಕೆ ಈ ಅವಧಿಯನ್ನು 30 ನಿಮಿಷಗಳಿಗೆ ಹೆಚ್ಚಿಸಿ. ಬೆಳಗ್ಗೆ 30 ನಿಮಿಷ ಹಾಗೂ ಸಂಜೆ 30 ನಿಮಿಷ ನಡೆಯುವ ಅಭ್ಯಾಸ ರೂಢಿಸಿಕೊಳ್ಳಿ. ವಾಕಿಂಗ್ ವೇಗವನ್ನು ಹೆಚ್ಚಿಸುತ್ತಿರಿ.

ವಾಕಿಂಗ್‌ ಉಪಯೋಗಗಳು:


ರಕ್ತದೊತ್ತಡ ನಿಯಂತ್ರಣ:

ನಡಿಗೆಯಿಂದ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತದೆ. ನಿಮಗೆ ದಿನಕ್ಕೆ 10 ಸಾವಿರ ಹೆಜ್ಜೆ ಹಾಕಲು ಸಾಧ್ಯವಾಗದಿದ್ದರೂ ಪ್ರತಿದಿನ ಕನಿಷ್ಠ 1 ಗಂಟೆಗಳ ಕಾಲ ನಡೆದರೆ ರಕ್ತದೊತ್ತಡದ ಮಟ್ಟ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹ ನಿಯಂತ್ರಣ:

ಪ್ರಸ್ತುತ ದಿನಗಳಲ್ಲಿ ಮಧುಮೇಹ ಕಾಯಿಲೆ ಸಾಮಾನ್ಯ. ಟೈಪ್ 2 ಡಯಾಬಿಟಿಸ್ ತಡೆಯಲು ದಿನಕ್ಕೆ 5 ಸಾವಿರ ಹೆಜ್ಜೆ ಹಾಕುವುದು ಒಳ್ಳೆಯದು. ಅದರಲ್ಲೂ 3 ಸಾವಿರ ಹೆಜ್ಜೆ ಬಿರುಸಿನ ನಡಿಗೆಯಾಗಿದ್ದರೆ ಇನ್ನೂ ಒಳ್ಳೆಯದು. ಪ್ರತಿದಿನ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ.

ತೂಕ ನಷ್ಟಕ್ಕೆ ನಡಿಗೆ ಸಹಕಾರಿ:

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ವಾಕಿಂಗ್ ಉತ್ತಮ ವ್ಯಾಯಾಮ.

ಕ್ಯಾನ್ಸರ್ ವಿರುದ್ಧ ಹೋರಾಟ:





ಕ್ಯಾನ್ಸರ್ ಇದುವರೆಗೂ ಒಂದು ದಶಲಕ್ಷಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ. ನಮ್ಮ ಜೀವನ ಶೈಲಿ ಕೂಡ ಕ್ಯಾನ್ಸರ್ ಗೆ ಕಾರಣ ಎಂದು ಹೇಳಲಾಗುತ್ತದೆ. ಸ್ತನ ಕ್ಯಾನ್ಸರ್‌ನಿಂದ ಆಗುವ ಅಪಾಯ ಕಡಿಮೆ ಮಾಡುತ್ತದೆ.

ದೇಹದ ಮೂಳೆಗಳು ಬಲಗೊಳಿಸಲು ಸಹಕಾರಿ:

ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಆದರೆ ನಿಯಮಿತವಾಗಿ ವಾಕ್ ಮಾಡುವ ಮೂಲಕ ಎಲುಬುಗಳನ್ನು ಬಲಪಡಿಸಬಹುದು. ವಾಕಿಂಗ್ ಮಾಡಿದರೆ ಸ್ನಾಯುಗಳನ್ನು ಬಲಗೊಳ್ಳುತ್ತವೆ. ನಿಯಮಿತವಾಗಿ ನಡೆಯುವುದರಿಂದ ಕಾಲು ಮತ್ತು ಬೆನ್ನಿನ ಸ್ನಾಯುಗಳನ್ನು ಬಲಪಡಿಸಬಹುದು. ನಿಯಮಿತ ನಡಿಗೆಯಿಂದ ಮೂಳೆ ಮುರಿತದ ಸಾಧ್ಯತೆ 40% ಕಡಿಮೆಯಾಗುತ್ತದೆ.

ಜೀರ್ಣಕ್ರಿಯೆ ಸುಲಭ:

ಜೀರ್ಣಕ್ರಿಯೆ ಸರಿಯಾಗದಿದ್ದರೆ, ಹೊಟ್ಟೆಉಬ್ಬರ, ಮಲಬದ್ಧತೆ, ಅತಿಸಾರ ಮತ್ತು ಕರುಳಿನ ಕ್ಯಾನ್ಸರ್ ಗೆ ವಾಕಿಂಗ್ ಅತ್ಯುತ್ತಮ ಮಾರ್ಗ. ನಿಮ್ಮ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಲು ಉತ್ತಮ ಆಹಾರ ಪದ್ಧತಿ, ನೀರನ್ನು ಕುಡಿಯುವುದು ಅಳವಡಿಸಿಕೊಳ್ಳಬೇಕು. ಊಟದ ನಂತರ ನಡೆಯುವುದು ಒಳ್ಳೆಯದು. ಇದರಿಂದ ತೂಕ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.

ರೋಗನಿರೋಧಕ ಶಕ್ತಿ ಹೆಚ್ಚು:

ಸೋಂಕುಗಳು ಅಥವಾ ಯಾವುದೇ ರೋಗಗಳನ್ನು ತಡೆಗಟ್ಟಲು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಎಲ್ಲಾ ಸಮಯದಲ್ಲೂ ಸರಿಯಾಗಿ ಕಾರ್ಯನಿರ್ವಹಿಸಬೇಕು. ರೋಗನಿರೋಧಕ ಶಕ್ತಿ ಹೆಚ್ಚಬೇಕೆಂದರೆ ವಾಕಿಂಗ್ ಮಾಡಲೇಬೇಕು. ದಿನಕ್ಕೆ ಕನಿಷ್ಠ 30 ನಿಮಿಷ ನಡೆಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.







Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಸರ್ಕಾರಕ್ಕೆ ಹಿಜಬ್‌ ವಾಪಸ್‌ ಆದೇಶ ಹೊರಡಿಸಲು ಕೇವಲ 30 ನಿಮಿಷ ಸಾಕು'- ಓವೈಸಿಕ್ರಿಸ್‌ಮಸ್‌ ಸಂಭ್ರಮ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ; ಇಬ್ಬರು ಯುವಕರ ದುರ್ಮರಣ..!ಕ್ರಿಸ್ಮಸ್ ದಿನವೇ ಮುದ್ದು ಮಗಳು ರಾಹಾಳ ಫೋಟೋ ಹಂಚಿಕೊಂಡ ಆಲಿಯಾ -ರಣಬೀರ್ ದಂಪತಿಮಾನವ ಕಳ್ಳಸಾಗಾಣಿಕೆಯಲ್ಲಿ ಬಂಧಿಯಾಗಿದ್ದ ಶಂಕೆ- ಮುಂಬೈ ತಲುಪಿದ ವಿಮಾನಗ್ಯಾಸ್ ಗೀಜರ್‌ನಿಂದ ಸ್ನಾನ ಮಾಡುವ ಮುನ್ನ ಇರಲಿ ಎಚ್ಚರ..! ಆರೋಗ್ಯ ಸಮಸ್ಯೆಗಳು ಉದ್ಭವವಾಗುತ್ತವೆ ಎನ್ನುತ್ತದೆ ಸಂಶೋಧನೆನಿರ್ಮಾಣ ಹಂತದ ಕಟ್ಟಡ ಕುಸಿತ - ಓರ್ವ ಕಾರ್ಮಿಕ ಸಾವು, ಹಲವರು ಗಂಭೀರ'ರಾಮಮಂದಿರದ ಇಡೀ ವಿಷಯ ಬಿಜೆಪಿಗೆ ಪ್ರದರ್ಶನವಾಗಿದೆ' - ಕಪಿಲ್‌ ಸಿಬಲ್‌'ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿಲ್ಲ'- ಶಿವಾನಂದ ಪಾಟೀಲ್ ಸ್ಪಷ್ಟನೆಕೊರೊನಾ ಜೆಎನ್.1 ವೈರಸ್ -ಸಭೆ ನಡೆಸಿ ನಿಯಮ ಪಾಲನೆಯ ನಿರ್ಧಾರ - ದಿನೇಶ್ ಗುಂಡೂರಾವ್ಶಬರಿಮಲೆಯ ಅಯ್ಯಪ್ಪ ಭಕ್ತರಿಗೆ ನೀರು,ಆಹಾರ ಸೌಲಭ್ಯ ಒದಗಿಸುವಂತೆ ಹೈಕೋರ್ಟ್‌ ನಿರ್ದೇಶನ