LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಂಡೋಸ್​ನಿಂದ ‘ವರ್ಡ್​ಪ್ಯಾಡ್​’ ತೆಗೆದು ಹಾಕಲಿದೆ ಮೈಕ್ರೊಸಾಫ್ಟ್​…!

ಸ್ಯಾನ್ ಫ್ರಾನ್ಸಿಸ್ಕೋ : ಮೈಕ್ರೋಸಾಫ್ಟ್ ಇನ್ನು ಮುಂದೆ ವರ್ಡ್​ಪ್ಯಾಡ್​ಗೆ ಯಾವುದೇ ಅಪ್​ಡೇಟ್​​ ನೀಡುವುದಿಲ್ಲ ಎಂದು ಘೋಷಿಸಿದೆ. ಅಲ್ಲದೆ ಸುಮಾರು 30 ವರ್ಷಗಳ ನಂತರ ವಿಂಡೋಸ್​​ನ ಭವಿಷ್ಯದ ಆವೃತ್ತಿಗಳಿಂದ ವರ್ಡ್ ಪ್ರೊಸೆಸರ್ ಅನ್ನು ತೆಗೆದುಹಾಕುವುದಾಗಿ ತಿಳಿಸಿದೆ.

ಪರ್ಯಾಯವಾಗಿ, ಮೈಕ್ರೋಸಾಫ್ಟ್ ತನ್ನ ಪಾವತಿಸಿದ ವರ್ಡ್ ಪ್ರೊಸೆಸರ್ ಎಂಎಸ್​ ವರ್ಡ್ ಅನ್ನು ಬಳಸುವಂತೆ ಹೇಳಿದೆ. ವರ್ಡ್​​ ಪ್ಯಾಡ್​​ಗಿಂತ ತುಂಬಾ ವೈಶಿಷ್ಟ್ಯಗಳನ್ನು ಹೊಂದಿರುವ ಮತ್ತು ಬಳಸಲು ಸುಲಭವಾದ ಎಂಎಸ್​ ವರ್ಡ್​ 1995 ರಿಂದ ವಿಂಡೋಸ್​ನೊಂದಿಗೆ ಲಭ್ಯವಾಗುತ್ತಿದೆ.

“ವರ್ಡ್​ಪ್ಯಾಡ್​ ಗೆ ಇನ್ನು ಮುಂದೆ ಅಪ್​ಡೇಟ್​ಗಳು ಬರಲಾರವು ಮತ್ತು ವಿಂಡೋಸ್​ನ ಭವಿಷ್ಯದ ಆವೃತ್ತಿಗಳಿಂದ ಅದನ್ನು ತೆಗೆದುಹಾಕಲಾಗುವುದು. .doc ಮತ್ತು .rtf ನಂತಹ ರಿಚ್ ಟೆಕ್ಸ್ಟ್​​ ಡಾಕ್ಯುಮೆಂಟ್​ ತಯಾರಿಸಲು ಮೈಕ್ರೋಸಾಫ್ಟ್ ವರ್ಡ್ ಮತ್ತು .txt ನಂತಹ ಸರಳ ಟೆಕ್ಸ್ಟ್​ ಫೈಲ್ ತಯಾರಿಸಲು ವಿಂಡೋಸ್ ನೋಟ್​ ಪ್ಯಾಡ್​ ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ” ಎಂದು ಮೈಕ್ರೋಸಾಫ್ಟ್ ಶುಕ್ರವಾರ ಪ್ರಕಟಿಸಿದ ಸಪೋರ್ಟ್​ ನೋಟ್​ನಲ್ಲಿ ಹೇಳಲಾಗಿದೆ.

ನೋಟ್​​ ಪ್ಯಾಡ್​​ನಲ್ಲಿ ಆಟೋಸೇವ್ ಮತ್ತು ಟ್ಯಾಬ್ ಹಿಂತೆಗೆದುಕೊಳ್ಳುವಿಕೆಯಂತಹ ವೈಶಿಷ್ಟ್ಯಗಳ ಅಪ್​ಡೇಟ್​​ ನೀಡಿದ ಒಂದು ದಿನದ ನಂತರ ಮೈಕ್ರೋಸಾಫ್ಟ್ ತನ್ನ ವರ್ಡ್​ ಪ್ಯಾಡ್​​ ಬಗ್ಗೆ ಹೊಸ ಮಾಹಿತಿ ನೀಡಿದೆ. ವಿಂಡೋಸ್ 11 ನಲ್ಲಿನ ವಿಂಡೋಸ್ ನೋಟ್​ ಪ್ಯಾಡ್​ ಅಪ್ಲಿಕೇಶನ್ ಅನ್ನು ಅನೇಕ ವರ್ಷಗಳ ನಂತರ 2018 ರಲ್ಲಿ ಮೊದಲ ಬಾರಿಗೆ ಅಪ್ಡೇಟ್​​ ಮಾಡಲಾಗಿತ್ತು ಮತ್ತು ಟ್ಯಾಬ್​ಗಳನ್ನು ಸೇರಿಸಲಾಗಿತ್ತು.

ಕಳೆದ ತಿಂಗಳು ಐಒಎಸ್ ಮತ್ತು ಆಂಡ್ರಾಯ್ಡ್ ನಂತರ, ಮೈಕ್ರೋಸಾಫ್ಟ್ ಈಗ ವಿಂಡೋಸ್ 11 ನಲ್ಲಿ ತನ್ನ ಡಿಜಿಟಲ್ ಸಹಾಯಕ ಕೊರ್ಟಾನಾ ಅಪ್ಲಿಕೇಶನ್ ಅನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಸ್ವತಂತ್ರ ಅಪ್ಲಿಕೇಶನ್ ಆಗಿ ವಿಂಡೋಸ್​ನಲ್ಲಿ ಕೊರ್ಟಾನಾ ಅನ್ನು ತೆಗೆದುಹಾಕಲಾಗಿದ್ದರೂ, ಟೀಮ್ಸ್ ಮೊಬೈಲ್, ಮೈಕ್ರೋಸಾಫ್ಟ್ ಟೀಮ್ಸ್ ಡಿಸ್​ ಪ್ಲೇ ಮತ್ತು ಮೈಕ್ರೋಸಾಫ್ಟ್ ಟೀಮ್ಸ್ ರೂಮ್ ಗಳಲ್ಲಿ ಕೊರ್ಟಾನಾಗೆ ಸಪೋರ್ಟ್​ 2023 ರಲ್ಲಿ ಕೊನೆಗೊಳ್ಳುತ್ತದೆ. ಜೂನ್​ನಲ್ಲಿ ವಿಂಡೋಸ್ 11 ನಲ್ಲಿ ಫೈಲ್ ಎಕ್ಸ್​ಪ್ಲೋರರ್ ಸೆಟ್ಟಿಂಗ್​ಗಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ ಮೈಕ್ರೋಸಾಫ್ಟ್ ಫೈಲ್ ಎಕ್ಸ್​ಪ್ಲೋರರ್​​ನಲ್ಲಿ ಫೋಲ್ಡರ್ ಆಯ್ಕೆಗಳ ಅಡಿಯಲ್ಲಿ ಕೆಲ ಹಳೆಯ ಸೆಟ್ಟಿಂಗ್​ಗಳನ್ನು ತೆಗೆದುಹಾಕಿದೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಗಳೂರು: ಅನ್ಯಮತೀಯ ಕೇರಳ ಜೋಡಿಗಳ ಮೇಲೆ ನೈತಿಕ ಪೊಲೀಸ್ ಗಿರಿ - ಮೂವರು ಅರೆಸ್ಟ್4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರನಾಲ್ವರು ಉಗ್ರರರಿಂದ ಒಳನುಸುಳಲು ಯತ್ನ: ಓರ್ವ ಉಗ್ರನ ಹತ್ಯೆಜ.6ರಂದು ಸೌರ ಮಿಷನ್ ಆದಿತ್ಯ L1 ಪಾಯಿಂಟ್‌ಗೆ ಪ್ರವೇಶಿಸಲಿದೆ - ಸೋಮನಾಥ್Coconut Rice Recipe : ಚಿತ್ರಾನ್ನದಷ್ಟೇ ರುಚಿಕರವಾದ ತೆಂಗಿನಕಾಯಿ ರೈಸ್‌ ರೆಸಿಪಿ ಒಮ್ಮೆ ಟ್ರೈ ಮಾಡಿಮಕ್ಕಳಿಂದ ಶೌಚಾಲಯ ಕ್ಲೀನಿಂಗ್ ಪ್ರಕರಣ: ಮುಖ್ಯ ಶಿಕ್ಷಕಿಯ ಬಂಧನಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧ ವಾಪಸ್- ಬಿಜೆಪಿ ಮುಖಂಡರ ಆಕ್ರೋಶಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ : 3000 ಹುದ್ದೆಗಳಿಗೆ ಅರ್ಜಿ ಆಹ್ವಾನಮಾಂಸಾಹಾರ ಊಟದ ಜೊತೆ ಹಾಲು ಕುಡಿದ್ರೆ ಇಷ್ಟೆಲ್ಲಾ ಸಮಸ್ಯೆ ಆಗುತ್ತಾ..!ಶಾಲಾ ಕಾಲೇಜುಗಳಲ್ಲಿ ಹಿಜಬ್ ನಿಷೇಧ ವಾಪಾಸ್ – ಸಿಎಂ ಸಿದ್ದರಾಮಯ್ಯ