LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶ ಪಡೆಯಬಹುದು - ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ:ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 125 ರ ಅಡಿಯಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ಪಾವತಿಸುವ ನಿರ್ದೇಶನವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ ಅರ್ಜಿ ಸಲ್ಲಿಸಿದ್ದರು.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಸಿಹ್ ಅವರ ಪೀಠವು ಅರ್ಜಿ ವಜಾಗೊಳಿಸಿದೆ. ಜೀವನಾಂಶವನ್ನು ಕೋರುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೆ ಅವರ ಧರ್ಮವನ್ನು ಲೆಕ್ಕಿಸದೆ ಅನ್ವಯಿಸುತ್ತದೆ ಎಂದು ಪೀಠವು ಸ್ಪಷ್ಟಪಡಿಸಿದೆ.

ಸೆಕ್ಷನ್ 125 ವಿವಾಹಿತ ಮಹಿಳೆಯರಿಗೆ ಮಾತ್ರವಲ್ಲ, ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ. ಈ ಪ್ರಮುಖ ತೀರ್ಮಾನದೊಂದಿಗೆ ನಾವು ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ನ್ಯಾಯಮೂರ್ತಿ ನಾಗರತ್ನ ತಿಳಿಸಿದ್ದಾರೆ. ಜೀವನಾಂಶ ದಾನವಲ್ಲ, ವಿವಾಹಿತ ಮಹಿಳೆಯರ ಹಕ್ಕು ಎಂದು ನ್ಯಾಯಾಲಯ ಹೇಳಿದೆ.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತಡರಾತ್ರಿ  ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 18 ಜನರು ಸಾವು.!ನಾಳೆಯಿಂದ ಬೆಂಬಲ ಬೆಲೆಯಲ್ಲಿ ತೋಗರಿ, ಕಡಲೇಕಾಳು ಖರೀದಿ ಪ್ರಾರಂಭ.! ರೇಟ್ ಇಂತಿದೆ.!ಅಕ್ರಮ ಮರಳು ಸಾಗಾಣಿಕೆ ತಡೆಯಲು ಈ ನಂಬರ್ ಗೆ ಕರೆಮಾಡಿ.!ಕೋರ್ಟ್ ಕಚೇರಿ ವ್ಯಾಜ್ಯಗಳಿಂದ ನರಳುತ್ತಿದ್ದರೆ ಸಂಸಾರ ಸಮಸ್ಯೆಗಳಿಂದ ಜೀವನವೇ ನಸ್ವರ ವಾಗಿದ್ದರೆ  ತಾಂತ್ರಿಕ ಹಾಗೂ ಮಾಂತ್ರಿಕ ಸಮಸ್ಯೆಗಳಿಂದ ಬಗೆಹರಿಸಬಹುದು !ರೈಲ್ವೆ ಸೇತುವೆಗಳ ನಿರ್ಮಾಣಕ್ಕೆ ರೂ.164.00 ಕೋಟಿ ಬಿಡುಗಡೆಗೆ : ಸಂಸದ ಗೋವಿಂದ ಕಾರಜೋಳವಚನ: --ಜೇಡರ ದಾಸಿಮಯ್ಯ10 ನೇ ತರಗತಿ ಪಾಸಾಗಿದ್ದೀರಾ: ಹೋಂ ಗಾರ್ಡ್​​​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!ಬೆಂಗಳೂರು ಸಮೀಪವೇ ಮೊಬೈಲ್ ಉತ್ಪಾದನಾ ಕಂಪನಿ ಆರಂಭ: ಅಶ್ವಿನಿ ವೈಷ್ಣವ್ಲೈಂಗಿಕತೆ ಬಗ್ಗೆ ರಣವೀರ್ ಆಕ್ಷೇಪಾರ್ಹ ಹೇಳಿಕೆ: ತನಿಖೆಗೆ ಮಹಾರಾಷ್ಟ್ರ ಆದೇಶಮಹಿಳೆಯರಿಗೆ ಸಿಹಿ ಸುದ್ದಿ, ಶೀಘ್ರದಲ್ಲೇ ಗೃಹ ಲಕ್ಷ್ಮೀ ಹಣ: ಲಕ್ಷ್ಮೀ ಹೆಬ್ಬಾಳ್ಕರ್‌