LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿದೇಶದಲ್ಲಿ ಭಾರತೀಯ ರಾಜತಾಂತ್ರಿಕ ಕಚೇರಿಗಳ ಮೇಲೆ ದಾಳಿ: 43 ಶಂಕಿತರ ಗುರುತಿಸಿದ ಎನ್ಐಎ

ನವದೆಹಲಿ:ಕಳೆದ ವರ್ಷದ ಆರಂಭದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿ ಅಮೆರಿಕ, ಯುಕೆ ಮತ್ತು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳ ಮೇಲೆ ನಡೆದ ದಾಳಿಯಲ್ಲಿ ಒಟ್ಟು 43 ಶಂಕಿತರು ಭಾಗಿಯಾಗಿದ್ದಾರೆ ಎಂದು ರಾಷ್ಟ್ರೀ ಯ ತನಿಖಾ ಸಂಸ್ಥೆ (ಎನ್ಐಎ) ಹೇಳಿದೆ. ವರದಿಗಳ ಪ್ರಕಾರ, ಕ್ರೌಡ್ ಸೋರ್ಸಿಂಗ್ ವಿಧಾನವನ್ನು ಬಳಸಿಕೊಂಡು ಎನ್ಐಎ ಈ ಎಲ್ಲಾ ಶಂಕಿತರನ್ನು ಗುರುತಿಸಿದೆ.

ಗೃಹ ಸಚಿವಾಲಯದ ಆದೇಶದ ನಂತರ ಈ ವರ್ಷದ ಜೂನ್ ನಲ್ಲಿ ಯುಎಸ್, ಯುಕೆ ಮತ್ತು ಕೆನಡಾದಲ್ಲಿ ಭಾರತೀಯರಾಜತಾಂತ್ರಿ ಕ ನಿಯೋಗಗಳ ಮೇಲಿನ ದಾಳಿಯ ಪ್ರ ಕರಣವನ್ನು ಎನ್ಐಎ ವಹಿಸಿಕೊಂಡಿದೆ. ವಿದೇಶದಲ್ಲಿ ಮಾತ್ರವಲ್ಲದೇ ಭಾರತದಲ್ಲಿ ಇದುವರೆಗೆ 50 ದಾಳಿಗಳನ್ನು ನಡೆಸಲಾಗಿದ್ದು, ದಾಳಿಗಳಿಗೆ ಸಂಬಂಧಿಸಿದಂತೆ ಸುಮಾರು 80 ವ್ಯಕ್ತಿಗಳನ್ನುವಿಚಾರಣೆಗೆ ಒಳಪಡಿಸಲಾಗಿದೆ ಎಂದು ವರದಿಗಳು ಸೂಚಿಸಿವೆ.

ಕಳೆದ ವರ್ಷ ಮಾರ್ಚ್ ಮತ್ತು ಜುಲೈನಲ್ಲಿ, ಭಾರತೀಯ ರಾಜತಾಂತ್ರಿ ಕ ನಿಯೋಗಗಳನ್ನು ಗುರಿಯಾಗಿಸಿಕೊಂಡು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಲಂಡನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲೆ ಖಾಲಿಸ್ತಾನಿ ಘಟಕಗಳು ಪ್ರತಿಭಟನೆಯ ಸಮಯದಲ್ಲಿ ಎರಡು ಪ್ರತ್ಯೇಕ ದಾಳಿ ನಡೆಸಿತ್ತು. ಕೆನಡಾದಲ್ಲಿರುವ ಭಾರತದ ಹೈಕಮಿಷನ್ ಮುಂದೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಗ್ರೆನೇಡ್ ಎಸೆಯಲಾಗಿತ್ತು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ಶೀಘ್ರದಲ್ಲೇ ಮತ್ತೊಂದು ಸಿಡಿ ಫ್ಯಾಕ್ಟರಿ ಓಪನ್ ಆಗಲಿದೆ'- ಯತ್ನಾಳ್ಮನೆ ಕೆಲಸದಾತನ ಮನೆಯಲ್ಲಿ 30 ಕೋಟಿ ರು. ನಗದು ಪತ್ತೆಮೇ 9ಕ್ಕೆ SSLC ಫಲಿತಾಂಶ ಪ್ರಕಟಮತದಾನ ಮಾಡಿದ ಮಾಜಿ ಸಿಎಂ ಬಿಎಸ್ ವೈ, ಸಂಸದ ಬಿವೈ ರಾಘವೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಅಹಮದಾಬಾದ್ ನಲ್ಲಿ ಮತದಾನ ಮಾಡಿದ ಪ್ರಧಾನಿ ನರೇಂದ್ರ ಮೋದಿಪ್ರಜ್ವಲ್‌ ರೇವಣ್ಣ ಪ್ರಕರಣದ ಬಗ್ಗೆ ಮೊದಲ ಬಾರಿ ಮಾತನಾಡಿದ ಮೋದಿ : ಈ ಬಗ್ಗೆ ಏನಂದ್ರು..!?ರಾಜ್ಯದ 14 ಕ್ಷೇತ್ರಗಳು ಸೇರಿ 94 ಕ್ಷೇತ್ರಗಳಲ್ಲಿ ಮತದಾನ ಆರಂಭರುಚಿಕರವಾದ ಪುದೀನಾ ಸೂಪ್ ಮಾಡುವ ವಿಧಾನನೀವು ಪ್ರೀತಿ ಪ್ರೇಮಿಸಿದ ವ್ಯಕ್ತಿಗಳು ನಿಮ್ಮಂತೆ ಆಗಲು ಎರಡು ಲವಂಗಗಳಿಂದ ಈ ಶಕ್ತಿಶಾಲಿ ತಂತ್ರ ಮಾಡಿ ಸಾಕು!ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆ ತಿಂದರೆ ಆರೋಗ್ಯಕ್ಕೆ ಸಿಗುವ ಲಾಭಗಳು