LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿದೇಶಿ ಮಹಿಳಾ ಪ್ರವಾಸಿಗರೊಬ್ಬರ ಮೈಮುಟ್ಟಿ ಕಿರುಕುಳ ನೀಡಿದ ಸ್ಥಳೀಯ ವ್ಯಕ್ತಿ…!!

ಜೈಪುರ  : ವಿದೇಶಿ ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜೈಪುರದಲ್ಲಿ ನಡೆದಿದ್ದು, ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಜಸ್ಥಾನದ ಜೈಪುರ ನಗರದ ಸಿಂಧಿ ಕ್ಯಾಂಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಯಾವಾಗ ಎಂಬುದು ಇನ್ನೂ ದೃಢಪಟ್ಟಿಲ್ಲ. ವಿಡಿಯೋದಲ್ಲಿ ಮಹಿಳಾ ಪ್ರವಾಸಿ ಹಾಗೂ ಅವರ ಸಂಗಾತಿ ಮತ್ತು ಸ್ಥಳೀಯ ವ್ಯಕ್ತಿಯೊಬ್ಬ ಪ್ರವಾಸಿ ಮಹಿಳೆ ಜತೆ ಪದೇ ಪದೇ ಅಸಭ್ಯವಾಗಿ ಸ್ಪರ್ಶ ಮಾಡಲು ಪ್ರಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಮಹಿಳಾ ಪ್ರವಾಸಿ ಈ ವ್ಯಕ್ತಿಯಿಂದ ತಪ್ಪಿಸಿಕೊಳ್ಳಲು “ಸುಂದರ” ಮತ್ತು “ಧನ್ಯವಾದ” ಪದಗಳನ್ನು ಬಳಸುತ್ತಿದ್ದರೂ ಆತ ಮಾತ್ರ ಅದನ್ನು ಲೆಕ್ಕಿಸದೇ ಮಹಿಳೆಯನ್ನು ಸ್ಪರ್ಶಿಸುತ್ತಲೇ ನಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.



ನೋಡಲು 40ರ ಆಸುಪಾಸಿನಲ್ಲಿರುವಂತೆ ಕಾಣುತ್ತಿರುವ ವ್ಯಕ್ತಿ ಮಹಿಳೆಯ ಭುಜ-ಎದೆ ಮೇಲೆ ಕೈ ಹಾಕುವ ಮೊದಲು ” ಇಟ್ಸ್​ ಮೈ ಪ್ಲಸರ್​​’’ ಎಂದು ಹೇಳುತ್ತಿದ್ದಾನೆ. ಹಾಗೆ ಸಂತೋಷ ಎನ್ನುತ್ತಲೇ ಮತ್ತೊಂದು ಕಡೆಯಿಂದ ಮಹಿಳಾ ಪ್ರವಾಸಿಯ ಇನ್ನೊಂದು ತೋಳನ್ನು ಹಿಡಿಯುತ್ತಾನೆ. ಒಂದು ಕ್ಷಣದಲ್ಲಿ ಅವರ ದೇಹದ ಇತರ ಭಾಗಗಳನ್ನು ಸ್ಪರ್ಶಿಸುವ ಯತ್ನ ಮಾಡುತ್ತಾನೆ. ಈ ವಿಡಿಯೋಗೆ ಟ್ವೀಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಈ ಬಗ್ಗೆ ಯಾರಿಂದಲೂ ಔಪಚಾರಿಕ ದೂರು ದಾಖಲಾಗದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​ ಆಗಿರುವುದನ್ನು ಸಂಬಂಧಪಟ್ಟ ಪೊಲೀಸ್ ಠಾಣೆ ಗಮನಕ್ಕೆ ತಂದಿದೆ. “ವಿಡಿಯೋದಲ್ಲಿ ಕಂಡುಬರುವ ವ್ಯಕ್ತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪಾಕಿಸ್ತಾನದ 'ಭಯೋತ್ಪಾದನೆ' ಆಟಕ್ಕೆ ಭಾರತ ಅವಕಾಶ ನೀಡುವುದಿಲ್ಲ’- ಎಸ್.ಜೈಶಂಕರ್ರಾಮಮಂದಿರ ಉದ್ಘಾಟನೆಗೆ ಕೇಂದ್ರ ಸರ್ಕಾರ ರಜೆ ಘೋಷಿಸಲಿ - ಸಿಎಂ ಸಿದ್ದರಾಮಯ್ಯಹಸಮಣೆ ಏರಲು ಸಜ್ಜಾದ 'ಗಿಲ್ಲಿ’ ನಟಿ ರಾಕುಲ್​ ಪ್ರೀತ್​ ಸಿಂಗ್ದೇಶದಲ್ಲಿ 573 ಹೊಸ ಕೋವಿಡ್- 19 ಪ್ರಕರಣ ಪತ್ತೆ; ರಾಜ್ಯದಲ್ಲಿ ಒಂದು ಸಾವು'ಸಿಎಂ ಸಿದ್ದರಾಮಯ್ಯರು ರಾಮನ ಆದರ್ಶ, ಜನಾನುರಾಗ ಪಡೆಯಲಿ' - ಸುಬುಧೇಂದ್ರ ತೀರ್ಥರುರಾಮ ಜನ್ಮಭೂಮಿ ಹೋರಾಟಗಾರನ ಬಂಧನವನ್ನ ಸಮರ್ಥಿಸಿಕೊಂಡ ಸಿಎಂ ಸಿದ್ಧರಾಮಯ್ಯಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಅಬಕಾರಿ ಇಲಾಖೆ - ಮದ್ಯದ ದರದಲ್ಲಿ ಏರಿಕೆ‌ಕರಸೇವಕರ ಬಂಧನ ಖಂಡಿಸಿ ನಾಳೆ ರಾಜ್ಯವ್ಯಾಪಿ ಪ್ರತಿಭಟನೆಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು..!ಷರತ್ತು ಉಲ್ಲಂಘನೆ - ಭಾರತದ 71 ಲಕ್ಷಕ್ಕೂ ಅಧಿಕ ವಾಟ್ಸ್​ಆ್ಯಪ್ ಅಕೌಂಟ್ ಬ್ಯಾನ್