ಬೆಂಗಳೂರು: ವಿಧಾನ ಪರಿಷತ್ ನೂತನ ಸದಸ್ಯರಾಗಿ ಕಾಂಗ್ರೆಸ್ ನ ಮೂವರು ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರು ಪ್ರಮಾಣವಚನ ಸ್ವೀಕರಿಸಿದರು.
https://bcsuddi.com/%e0%b2%aa%e0%b2%a4%e0%b3%8d%e0%b2%a8%e0%b2%bf%e0%b2%af-%e0%b2%b6%e0%b2%b5%e0%b2%b5%e0%b2%a8%e0%b3%8d%e0%b2%a8%e0%b3%81-%e0%b2%ab%e0%b3%8d%e0%b2%b0%e0%b3%80%e0%b2%9c%e0%b2%b0%e0%b3%8d%e0%b2%a8/
ಜಗದೀಶ್ ಶೆಟ್ಟರ್ ಭಗವಂತನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ತಿಪ್ಪಣ್ಣಪ್ಪ ಕಮಾನೂರು ಕುಲದೇವತೆ ಮಾಣಿಕೇಶ್ವರಿ ಹೆಸರಲ್ಲಿ, ಬೋಸರಾಜು ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಸಿಎಂ ಸಿದ್ದರಾಮಯ್ಯ, ಬಸವರಾಜ್ ಹೊರಟ್ಟಿ, ಸಚಿವರಾದ ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.