LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಪಕ್ಷ ನಾಯಕ ನೇಮಿಸದ ಬಿಜೆಪಿ: ನಡ್ಡಾ, ಕಟೀಲ್, ಮುಖ್ಯ ಕಾರ್ಯದರ್ಶಿಗೆ ಲೀಗಲ್‌ ನೋಟಿಸ್‌ ಜಾರಿ

ಬೆಂಗಳೂರು: ಚುನಾಯಿತ ಸರ್ಕಾರ ಸಕ್ರಿಯವಾಗಿ ಕೆಲಸ ಮಾಡದಿದ್ದಾಗ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಜನರ ಧ್ವನಿಯಾಗಿ ಕೆಲಸ ಮಾಡಬೇಕಾಗುತ್ತದೆ. ಆದರೆ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನವಾದರೂ ವಿರೋಧ ಪಕ್ಷದ ಸ್ಥಾನ ಗಳಿಸಿರುವ ಬಿಜೆಪಿಯು ಪ್ರತಿಪಕ್ಷದ ನಾಯಕನ ಹುದ್ದೆ ಯಾರನ್ನು ಆಯ್ಕೆ ಮಾಡದೇ ಇರುವ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್ ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಶನಿವಾರ ಲೀಗಲ್‌ ನೋಟಿಸ್‌ ಜಾರಿಯಾಗಿದೆ.

ಈ ಸಂಬಂಧ ವಕೀಲ ಎನ್‌ ಪಿ ಅಮೃತೇಶ್‌ ಅವರು ಬಿಜೆಪಿ ನಾಯಕರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಲೀಗಲ್‌ ನೋಟಿಸ್‌ ನೀಡಿದ್ದಾರೆ.

ಬಿಜೆಪಿಯು ವಿಪಕ್ಷ ನಾಯಕನನ್ನು ಆಯ್ಕೆ ಮಾಡದೇ ಸಾಂವಿಧಾನಿಕ ಶೂನ್ಯ ವಾತಾವರಣ ನಿರ್ಮಿಸಿದೆ. ಹೀಗಾಗಿ ನೊಟೀಸ್ ದೊರೆತ 10 ದಿನಗಳ ಒಳಗೆ ವಿರೋಧಪಕ್ಷ ನಾಯಕನ ಆಯ್ಕೆ ಮಾಡಲು ಶಾಸಕಾಂಗ ಸಭೆ ಕರೆಯುವಂತೆ ಬಿಜೆಪಿಯ ರಾಜ್ಯಾಧ್ಯಕ್ಷರಿಗೆ ನಿರ್ದೇಶಿಸಬೇಕು. ವಿಪಕ್ಷ ನಾಯಕನ ಆಯ್ಕೆಯನ್ನು ವಿಳಂಬ ಮಾಡಿರುವುದಕ್ಕೆ ಕರ್ನಾಟಕದ ಜನತೆಯ ಕ್ಷಮೆ ಕೋರಬೇಕು ಎಂದು ನೋಟಿಸ್‌ನಲ್ಲಿ ಆಗ್ರಹಿಸಲಾಗಿದೆ.

ಇದರೊಂದಿಗೆ ರಾಷ್ಟ್ರಪತಿ, ರಾಜ್ಯಪಾಲರು ಮತ್ತು ವಿಧಾನಸಭೆಯ ಸ್ಪೀಕರ್‌ ಅವರಿಗೂ ವಿಪಕ್ಷ ನಾಯಕನನ್ನು ನೇಮಿಸಲು ಬಿಜೆಪಿಗೆ ನಿರ್ದೇಶಿಸಬೇಕು ಎಂದು ಕೋರಿ ಅಮೃತೇಶ್‌ ಅವರು ಮನವಿ ಸಲ್ಲಿಸಿದ್ದಾರೆ.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
'ರಾಮ ಮಂದಿರ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ'- ಪ್ರಹ್ಲಾದ್ ಜೋಶಿಅಯೋಧ್ಯೆ ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆದಕ್ಷಿಣ ಕನ್ನಡದ ನ್ಯಾಶನಲ್ ಹೈವೇ ಅಭಿವೃದ್ದಿ , 957.39 ಕೋ.ರೂ.ವೆಚ್ಚದ 2 ಯೋಜನೆಗಳಿಗೆ ಅನುಮೋದನೆ..!ಬೆಂಗಳೂರು-ಅಯೋಧ್ಯೆಗೆ ಏರ್ ಇಂಡಿಯಾ ವಿಮಾನ ಸೇವೆ ಜ. 17ರಿಂದ ಆರಂಭಕೋವಿಡ್ ನ ಜೆಎನ್1 ರೂಪಾಂತರಿ ಸೋಂಕು :ರಾಜ್ಯದಲ್ಲಿ ಜ.2 ರಿಂದ ಲಸಿಕಾ ಅಭಿಯಾನವಿಜಯನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕರ ಹುದ್ದೆಗಳ ಭರ್ತಿ..!ಇಂದೇ ಅರ್ಜಿಯನ್ನು ಸಲ್ಲಿಸಿಚಹಾದಂಗಡಿಗೆ ನುಗ್ಗಿದ ಟ್ರಕ್: 5 ಮಂದಿ ದುರ್ಮರಣ, ಹಲವರಿಗೆ ಗಾಯಮನೆಯಲ್ಲೇ ತಯಾರಿಸಿ ಇನ್ ಸ್ಟಂಟ್ ‘ಜಿಲೇಬಿ’ರಾಯರ ಮಠದಲ್ಲಿ ನಡೀತು ಪವಾಡ, ವೀಲ್ ಚೇರಲ್ಲಿ ಬಂದವಳು, ನಡೆದು ಹೋದಳು.!ಉಕ್ರೇನ್ ಮೇಲೆ 158 ಡ್ರೋನ್‌ ದಾಳಿ ನಡೆಸಿದ ರಷ್ಯಾ ಸೇನೆ