LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

ವಿಮಾನ ಅಪಘಾತ : ಎರಡು ವಾರಗಳ ನಂತರ ಜೀವಂತವಾಗಿ ಪತ್ತೆಯಾದ ನಾಲ್ಕು ಮಕ್ಕಳು

ಬೊಗೊಟ್ : ಕೊಲಂಬಿಯಾದ ಅಮೆಜಾನ್‌ನಲ್ಲಿ ಎರಡು ವಾರಗಳ ಹಿಂದೆ ಸಂಭವಿಸಿದ ವಿಮಾನ ಅಪಘಾತದ ನಂತರ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ. ಟ್ವಿಟರ್‌ನಲ್ಲಿ ಈ ಸುದ್ದಿ ಹಂಚಿಕೊಂಡಿರುವ ಪೆಟ್ರೋ, ಇದು ದೇಶಕ್ಕೆ ಸಂತೋಷವನ್ನುಂಟು ಮಾಡಿದೆ. ಸೈನಿಕರು ಕಠಿಣವಾಗಿ ಹುಡುಕಾಟ ಪ್ರಯತ್ನ ನಡೆಸಿದ ನಂತರ ಮಕ್ಕಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಮೇ 1 ರಂದು ಅಪಘಾತಕ್ಕೀಡಾದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಪ್ರಾಪ್ತ ಮಕ್ಕಳನ್ನು ಹುಡುಕಲು 100 ಕ್ಕೂ ಹೆಚ್ಚು ಸೈನಿಕರು ಮತ್ತು ಸ್ನಿಫರ್ ಡಾಗ್‌ಗಳನ್ನು ಅಧಿಕಾರಿಗಳು ನಿಯೋಜಿಸಿದ್ದರು. ವಿಮಾನ ಅಪಘಾತದಲ್ಲಿ ಮೂವರು ಹದಿಹರೆಯದವರು ಸಾವನ್ನಪ್ಪಿದ್ದರು. ಅಪಘಾತದ ನಂತರ 11 ತಿಂಗಳ ಮಗುವಿನ ಜೊತೆಗೆ 13, 9 ಮತ್ತು 4 ವರ್ಷದ ಮಕ್ಕಳು ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನಲ್ಲಿದ್ದರು. ನಂತರ ಶಸಸ್ತ್ರ ಪಡೆಗಳು ಶೋಧ ಕಾರ್ಯ ನಡೆಸಿದಾಗ ಅಪ್ರಾಪ್ತ ವಯಸ್ಸಿನ ಮಕ್ಕಳು ಬದುಕುಳಿದಿರುವುದು ದೃಢಪಟ್ಟಿದೆ . ಸೋಮವಾರ ಮತ್ತು ಮಂಗಳವಾರ ಪೈಲಟ್ ಹಾಗೂ ಇಬ್ಬರು ವಯಸ್ಕರ ಮೃತದೇಹವನ್ನು ಸೈನಿಕರು ಪತ್ತೆ ಮಾಡಿದ್ದರು.
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಮಮಂದಿರಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಅಯೋಧ್ಯೆಯಲ್ಲಿ ಸ್ಮಾರಕ : ಯೋಗಿ ಆದಿತ್ಯನಾಥ್ ಘೋಷಣೆಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ; ಓರ್ವ ಸಜೀವ ದಹನಕೊರೊನಾ ಉಪತಳಿ ಪತ್ತೆ: ಇಂದಿನಿಂದ ನಿತ್ಯ 5 ಸಾವಿರ ಟೆಸ್ಟ್ - ದಿನೇಶ್ ಗುಂಡುರಾವ್ಕಾಶ್ಮೀರದ ಸ್ಥಿತಿಯು ಗಾಜಾ, ಪ್ಯಾಲೆಸ್ತೀನ್ ಸ್ಥಿತಿಯಂತಾಗುತ್ತದೆ- ಫಾರೂಕ್ ಅಬ್ದುಲ್ಲಾ ಎಚ್ಚರಿಕೆದೇವಾಲಯಗಳ ಬಳಿ ಬಹುಮಹಡಿ ಕಟ್ಟಡ ನಿರ್ಮಿಸದಂತೆ ಸೂಚನೆ- ಯೋಗಿ'ಯುವನಿಧಿ ಯೋಜನೆʼ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದ ಸಿಎಂಟ್ರಾಫಿಕ್ ಜಾಮ್‌ ನಿಂದ ತಲೆಕೆಡಿಸಿಕೊಂಡು ನದಿಯಲ್ಲಿ ಥಾರ್ ಓಡಿಸಿದ ಚಾಲಕನಿಗೆ ದಂಡಲಡಾಖ್ ನಲ್ಲಿ 4.5 ತೀವ್ರತೆಯ ಭೂಕಂಪ'ವಿಶ್ವವಿಖ್ಯಾತ ಹಂಪಿ ಉತ್ಸವ-ಫೆ.2 ರಿಂದ ಮೂರು ದಿನಗಳ ಕಾಲ ನಡೆಯಲಿದೆ' - ಜಮೀರ್‌ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟ್ರಿಕ್ ಬಸ್ ಗಳು ನಗರ ಸಾರಿಗೆಗೆ ಸೇರ್ಪಡೆ