E-PAPER
17 Nov 2026, 12:23:49 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವಿರೋಧಿಗಳ 5 ಸಾವಿರ ಕೋಟಿ ರೂ. ಆರೋಪ ಬರಿ ಸ್ಟಂಟ್; ಚರ್ಚೆಗೆ ನಾನು ಸಿದ್ಧ , ಆದರೆ ಮಳೆ ಕರ್ಣಿ ಮುಂದೆ ಬರಬೇಕು; ಸಂಜಯ್ ಪಾಟೀಲ್ ನೇರವಾಗಿ ಚರ್ಚೆಗೆ ಬರಲಿ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸವಾಲು

ಬೆಳಗಾವಿ-24:"ನನ್ನ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಬಿಜೆಪಿ ನಾಯಕರಿಗೆ ಕೇವಲ ಸುಳ್ಳು ಆರೋಪ ಮಾಡುವ ಕಲೆ ಮಾತ್ರ ಕರಗತವಾಗಿದೆ. ನನ್ನ ವಿರುದ್ಧ ಆರೋಪ ಮಾಡಲು ಬೇರೆ ಯಾವುದೇ ವಿಷಯವಿಲ್ಲದ ಕಾರಣ ಇಂತಹ ಸ್ಟಂಟ್ ಮಾಡುತ್ತಿದ್ದಾರೆ. ಸಂಜಯ್ ಪಾಟೀಲ್ ಅವರಿಗೆ ಧೈರ್ಯವಿದ್ದರೆ ೫ ಸಾವಿರ ಕೋಟಿ ರೂಪಾಯಿ ವಿಷಯದ ಕುರಿತು ಮುಖಾಮುಖಿ ಚರ್ಚೆಗೆ ಮಳೆಕರ್ಣಿಗೆ ಬರಲಿ," ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೇರ ಸವಾಲು ಹಾಕಿದ್ದಾರೆ.

ತಾಲೂಕಿನ ಮಣ್ಣೂರು ಗ್ರಾಮದಲ್ಲಿ 'ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್' (BDCC) ವತಿಯಿಂದ ಮಂಜೂರಾದ 50 ಲಕ್ಷ ರೂಪಾಯಿ ಬಡ್ಡಿರಹಿತ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
*ಬೆಳಗಾವಿ ಗ್ರಾಮೀಣ ಕ್ಷೇತ್ರವನ್ನು ಬಾರಾಮತಿ' ಮಾದರಿಯಲ್ಲಿ ಅಭಿವೃದ್ಧಿಪಡಿಸುವೆ.*

ಕಾರ್ಯಕ್ರಮದಲ್ಲಿ ಮಾತನಾಡಿದ ಹೆಬ್ಬಾಳ್ಕರ್, "ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ಇಡೀ ರಾಜ್ಯದಲ್ಲೇ ಮನೆಮಾತಾಗುವಂತೆ ಅಭಿವೃದ್ಧಿ ಪಡಿಸುವುದು ನನ್ನ ಗುರಿ. ಎಲ್ಲರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ ಈ ಕ್ಷೇತ್ರವನ್ನು ಮಹಾರಾಷ್ಟ್ರದ 'ಬಾರಾಮತಿ' ಮಾದರಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಬೆಳೆಸಲಾಗುವುದು," ಎಂದರು.
ಮಣ್ಣೂರ್, ಅಂಬೇವಾಡಿ ಮತ್ತು ಗೋಜಗಾ ಗ್ರಾಮಗಳ ರೈತರಿಗಾಗಿ 50 ಲಕ್ಷ ರೂ. ಬಡ್ಡಿರಹಿತ ಸಾಲ ಮಂಜೂರಾಗಿದೆ. ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಹಾಗೂ ಎನ್. ಎಸ್. ಚೌಗುಲೆ ಅವರ ಶ್ರಮವನ್ನು ಅಭಿನಂದಿಸಿದ ಅವರು, "ಮೂರು ಗ್ರಾಮಗಳಿಗೆ ಈ ಹಣ ಸಾಲುವುದಿಲ್ಲ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ 2 ಕೋಟಿ ರೂಪಾಯಿ ನಿಧಿಯ ಅಗತ್ಯವಿದ್ದು, ಅದನ್ನು ಶೀಘ್ರದಲ್ಲೇ ಮಂಜೂರು ಮಾಡಿಸಲಾಗುವುದು. ಈ ಮೂರೂ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಹೊಸ ರಸ್ತೆ ಕಾಮಗಾರಿಯನ್ನು ಮುಂದಿನ ಮಳೆಗಾಲಕ್ಕೂ ಮುನ್ನ ಪೂರ್ಣಗೊಳಿಸಲಾಗುವುದು," ಎಂದು ಭರವಸೆ ನೀಡಿದರು.

*5 ಸಾವಿರ ಕೋಟಿ ರೂ. ಆರೋಪಕ್ಕೆ ಖಡಾಖಂಡಿತ ತಿರುಗೇಟು*

ಸಂಜಯ್ ಪಾಟೀಲ್ ಅವರ ಆರೋಪಗಳನ್ನು ತೀವ್ರವಾಗಿ ಖಂಡಿಸಿದ ಅವರು:
"800 ಕೋಟಿ ರೂಪಾಯಿ ಅಕ್ರಮ ಎಸಗಿದ ಕಾರಣಕ್ಕೆ ವಿಜಯ್ ಮಲ್ಯ ದೇಶ ತೊರೆದು ಲಂಡನ್‌ಗೆ ಓಡಿಹೋದರು. ಹಾಗಿರುವಾಗ ನನ್ನ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಅವ್ಯವಹಾರ ಮಾಡಲು ಹೇಗೆ ಸಾಧ್ಯ? 2017ರಲ್ಲಿ ನಾನು 10 ಕೋಟಿ ವೆಚ್ಚದಲ್ಲಿ ಕಾರ್ಖಾನೆ ಸ್ಥಾಪಿಸುತ್ತಿದ್ದಾಗ, ಸಂಜಯ್ ಪಾಟೀಲ್ ಅವರೇ ನನ್ನ ವಿರುದ್ಧ ದೂರು ನೀಡಿ ಇನ್‌ಕಮ್ ಟ್ಯಾಕ್ಸ್ (IT) ದಾಳಿ ಮಾಡಿಸಿದ್ದರು. ಎರಡು ಬಾರಿ ಶಾಸಕರಾಗಿದ್ದರೂ ಅವರು ಜನರಿಗಾಗಿ ಏನನ್ನೂ ಮಾಡಲಿಲ್ಲ. ನಾನು ಶಾಸಕಿಯಾಗಿ ಮಾತ್ರವಲ್ಲ, ಈ ಭಾಗದ ಮಗಳಾಗಿ ಕೆಲಸ ಮಾಡುತ್ತಿದ್ದೇನೆ; ಇದನ್ನು ಸಹಿಸಿಕೊಳ್ಳಲಾಗದೆ ಐಟಿ ಅಥವಾ ಇಡಿ (ED) ದಾಳಿಯ ಬೆದರಿಕೆ ಹಾಗೂ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು."

*ಗೆಣಸು ಸಂಸ್ಕರಣಾ ಕಾರ್ಖಾನೆಗೆ ಜಾಗ ನೀಡಲು ಮನವಿ*

ಬೆಳಗಾವಿ ಗ್ರಾಮೀಣ ಭಾಗದಲ್ಲಿ ಗೆಣಸಿನ (ರತಾಳೆ) ಬೆಳೆ ಹೆಚ್ಚಾಗಿ ಬೆಳೆಯುವುದರಿಂದ, ರೈತರ ಹಿತದೃಷ್ಟಿಯಿಂದ ಗೆಣಸು ಸಂಸ್ಕರಣಾ ಕಾರ್ಖಾನೆ ಸ್ಥಾಪಿಸುವುದಾಗಿ ಪ್ರಕಟಿಸಿದರು.
"ಈ ಕಾರ್ಖಾನೆಗೆ ಸುಮಾರು ೫ ಎಕರೆ ಜಾಗದ ಅಗತ್ಯವಿದೆ.
ಬೆಳಗಾವಿ ಅಥವಾ ಅಂಬೇವಾಡಿ ಬಳಿ ಬಾಡಿಗೆಗೆ ಅಥವಾ ಖರೀದಿಗೆ ಸೂಕ್ತ ಜಾಗ ಸಿಕ್ಕರೆ, ನಾನೇ ಸ್ವಂತ ಹಣ ಹೂಡಿಕೆ ಮಾಡಲು ಸಿದ್ಧಳಿದ್ದೇನೆ.
ಈ ಕಾರ್ಖಾನೆಯಿಂದ ಗೆಣಸಿನ ಉಪಉತ್ಪನ್ನಗಳನ್ನು ತಯಾರಿಸಿ ರೈತರಿಗೆ ಉತ್ತಮ ಆರ್ಥಿಕ ನೆರವು ನೀಡಲು ಸಾಧ್ಯವಾಗುತ್ತದೆ ಎಂದರು."

*'ಗೃಹಲಕ್ಷ್ಮಿ' ಮತ್ತು ಮಹಾರಾಷ್ಟ್ರದ 'ಲಾಡ್ಕಿ ಬಹಿನ್' ಯೋಜನೆ ಪ್ರಸ್ತಾಪ*

ಗೃಹಲಕ್ಷ್ಮಿ ಯೋಜನೆ ಹಣದ ಕುರಿತು ವಿರೋಧ ಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, "ಎರಡು ತಿಂಗಳು ಹಣ ಬಂದಿಲ್ಲ ಎಂದು ವಿರೋಧಿಗಳು ಪ್ರಶ್ನಿಸುತ್ತಿದ್ದಾರೆ. ಕರ್ನಾಟಕದಲ್ಲಿ ಸುಮಾರು 1 ಕೋಟಿ 25 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ಹಣ ತಲುಪಿಸಲಾಗುತ್ತಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆಯಾಗುವುದು ಸ್ವಲ್ಪ ತಡವಾಗಬಹುದು. ಇದುವರೆಗೆ ಪ್ರತಿಯೊಬ್ಬ ಮಹಿಳೆಗೆ ಸುಮಾರು 70 ಸಾವಿರ ರೂಪಾಯಿವರೆಗೆ ಅನುಕೂಲವಾಗಿದೆ."
ಮಹಾರಾಷ್ಟ್ರದ ಉದಾಹರಣೆ ನೀಡಿದ ಅವರು, "ಕರ್ನಾಟಕ ಸರ್ಕಾರದ ವಿರುದ್ಧ ಬೆಟ್ಟು ಮಾಡುವ ಮುನ್ನ ವಿರೋಧ ಪಕ್ಷದವರು ಮಹಾರಾಷ್ಟ್ರದ 'ಲಾಡ್ಕಿ ಬಹಿನ್' ಯೋಜನೆಯ ಕಥೆ ಏನಾಗಿದೆ ಮತ್ತು ಅಲ್ಲಿ ಎಷ್ಟು ಕಂತುಗಳನ್ನು ನೀಡಿದ್ದಾರೆ ಎಂಬುದನ್ನು ಯೋಚಿಸಲಿ. ನಾವು ಕೆಲಸ ಮಾಡುವವಳು, ಆದರೆ ಇವರು ಮನೆಯಲ್ಲೇ ಕುಳಿತು ವಾಟ್ಸಾಪ್‌ನಲ್ಲಿ ಆರೋಪ ಮಾಡುವವರು," ಎಂದು ತಿರುಗೇಟು ನೀಡಿದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.