ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸಂಸದರಾದ ಯದುವೀರ್ ಒಡೆಯರ್ ಅವರು ಪ್ರಶಸ್ತಿ ನೀಡಿದರು.
ಮೈಸೂರು : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಸಹಯೋಗದೊಂದಿಗೆ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮ ಅವದೂತ ದತ್ತಪೀಠ ಮೈಸೂರು ನಾದಮಂಟಪದಲ್ಲಿ ನಡೆದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ರಾಜ್ಯ ವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರದಂದು ಏರ್ಪಡಿಸಲಾಗಿತ್ತು .
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಮೈಸೂರು ಮಹಾ ರಾಜರು ಮತ್ತು ಸಂಸದರಾದ ಯದುವೀರ್ ಒಡೆಯರ್ ಅವರು ಸಾಧಕರಾದ ಹಾಗೂ ಅಂತಾರಾಷ್ಟ್ರೀಯ ಯೋಗಪಟುಗಳಾದ, ಯೋಗಾಸನದಲ್ಲಿ ಸುಮಾರು 30 ವರ್ಷಗಳಿಂದ ಸಾಧನೆ ಮಾಡಿದ, ಡಾಕ್ಟರೇಟ್ ಪುರಸ್ಕೃತರಾದ ಕೆ. ಜೈಮುನಿಯವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ರಾಜ್ಯಾದ್ಯಕ್ಷರಾದ, ಡಾ.ಹುಸೇನ್ ಸಾಬ್ ಎಫ್ ಕರೂರು, ಎಲ್ಲಮ್ಮ ದೇವಿ ಆರಾಧಕರಾದ ,ಅನು ಆರ್ ಅಮ್ಮನವರು, ಗುರುದೇವ್ ಜೈನ್ ಸಮಾಜದ ಆಚಾರ್ಯ ವಿಮಲ ಸಾಗರ್ ಗೂರುಜಿ, ಅಯೋದ್ಯ ಶ್ರೀ ರಾಮ ಕೆತ್ತನೆ ಶಿಲ್ಪಿ ಯೋಗಿರಾಜ್, ಉತ್ತರ ಪೀಠಾಧಿಪತಿ ಅವಧೂತ ದತ್ತಪೀಠ ಮೈಸೂರು, ಪರಮಹಂಸ ಆಚಾರ್ಯ ಶ್ರೀಶ್ರೀಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಮುಂತಾದವರು ಗಣ್ಯರು ಭಾಗವಹಿಸಿದ್ದರು.
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.