E-PAPER
17 Nov 2026, 12:22:38 AM|
Gold₹13462/gGold24K ₹13,462/g - 22K ₹12,329/gTap for full details
Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEditorialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ವೀರ ರಾಣಿ ಕಿತ್ತೂರು ಚನ್ನಮ್ಮನ 200ನೇ‌ವಿಜಯೋತ್ಸವ ಕಾರ್ಯಕ್ರಮವನ್ನು ಒಂದು ದಿನದ ಮಟ್ಟಿಗೆ ಬೈಲಹೊಂಗಲ ಚನ್ನಮ್ಮಾಜಿ ಸಮಾಧಿ ಮುಂದೆ ಜರಗಿಸುವಂತೆ ಆಗ್ರಹಿಸಿ ವೀರ ರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ಹಾಗೂ ಚನ್ನಮಾಜಿ ಅಭಿಮಾನ ಬಳಗದಿಂದ ಮನವಿ

ಬೈಲಹೊಂಗಲ-೧೭: ವೀರ ರಾಣಿ ಕಿತ್ತೂರು ಚನ್ನಮ್ಮನ 200ನೇ‌ವಿಜಯೋತ್ಸವ ಕಾರ್ಯಕ್ರಮವನ್ನು ಒಂದು ದಿನದ ಮಟ್ಟಿಗೆ ಬೈಲಹೊಂಗಲ ಚನ್ನಮ್ಮಾಜಿ ಸಮಾಧಿ ಮುಂದೆ ಜರಗಿಸುವಂತೆ ಆಗ್ರಹಿಸಿ ವೀರ ರಾಣಿ ಕಿತ್ತೂರು ಚನ್ನಮ್ಮನ ಸ್ಮರಣೋತ್ಸವ ಸಮಿತಿ ಹಾಗೂ ಚನ್ನಮಾಜಿ ಅಭಿಮಾನ ಬಳಗದಿಂದ
ಉಪವಿಭಾಗಧಿಕಾರಿಗಳು ಸೇರಿದಂತೆ ಅವರ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗಳಿಗೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜಿಲ್ಲಾಧಿಕಾರಿಗಳು ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಸಹೇಬ ಪಾಟೀಲ ಅವರಿಗೆ ಮನವಿ ಅರ್ಪಿಸಿದರು.

ಮನವಿ ಅರ್ಪಿಸಿ ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹಾಗೂ ಮುರಗೇಶ ಗೂಂಡ್ಲೂರ ಮಾತನಾಡಿ, ನಮ್ಮ ನಾಡಿನ ಹಾಗೂ ದೇಶದ ಪ್ರಥಮ ಸ್ವಾತಂತ್ರ್ಯ ಹೊರಾಟಗಾರತಿ ಕ್ರಾಂತಿವೀರ ಸುಪುತ್ರಿ ವೀರರಾಣಿ ಕಿತ್ತೂರು ಚೆನ್ನಮ್ಮನ 200ವರ್ಷದ ವಿಜಯೋತ್ಸವ ಕಿತ್ತೂರು ನಾಡಿನಲ್ಲಿ ಅಕ್ಟೋಬರ್ 23,24 ಮತ್ತು 25 ರಂದು ಆಚರಿಸುತ್ತಿರುವದು ಶ್ಲಾಘನೀಯ.
ಆದರೆ, ಚನ್ನಮ್ಮಾಜಿಯ ವೀರಸಮಾಧಿ ಸ್ಥಳ ಬೈಲಹೊಂಗಲದಲ್ಲಿ ‌ಸರ್ಕಾರ ಯಾವುದೆ ಕಾರ್ಯಕ್ರಮ ಹಮ್ಮಿಕೊಳ್ಳದೆ ನಿರ್ಲಕ್ಷವಹಿಸಿರುವದು ಬಹಳ ಕೇದಕರ.
ಆದ್ದರಿಂದ ಅಕ್ಟೋಬರ್ 22ರಂದು ಬೈಲಹೊಂಗಲದಲ್ಲಿ 200 ನೇ ಕಿತ್ತೂರು ವಿಜಯೋತ್ಸವ ನಿಮಿತ್ಯ ವಿಶೇಷ ಕಾರ್ಯಕ್ರಮವನ್ನು ಬೈಲಹೊಂಗಲ ನಗರದಲ್ಲಿರುವ ಚನ್ನಮ್ಮಾಜಿಯವರ ಸಮಾಧಿ ಸ್ಥಳದಲ್ಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳುವಂತೆ ಸರ್ಕಾರವನ್ನು ಆಗ್ರಹಿಸುತ್ತೆವೆ ಎಂದರು.
ಮಾಜಿ ಜಿಪಂ ಸದಸ್ಯ ಶಂಕರ ಮಾಡಲಗಿ, ಮಾಜಿ ಪುರಸಭೆ ಉಪಾಧ್ಯಕ್ಷ ಮಹೇಶ ಹರಕುಣಿ ಮಾತನಾಡಿ, ದೇಶವೆ ವಿಜೃಂಭಿಸಬೇಕಾದ ಈ ಉತ್ಸವದಲ್ಲಿ ಬೈಲಹೊಂಗಲ ನಿರ್ಲಕ್ಷಿಸಿರುವದು ಸರ್ಕಾರಕ್ಕೆ ಶೋಭೆಯಲ್ಲ. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು
ಸಮಾಧಿ ಸ್ಥಳದಲ್ಲಿ ಭವ್ಯ ಅಲಂಕಾರಗೊಳಿಸಿಬೇಕು. ಸಮಾಧಿ ಸ್ಥಳದ ಸ್ವಚ್ಚತಾ ಕಾರ್ಯಹಮ್ಮಿಕೊಂಡು ಸುಂದರವಾಗಿಸುವದು, ಅಕ್ಟೋಬರ್ 22 ರಂದು ಬೆಳಿಗ್ಗೆ ಪಟ್ಟಣದಲ್ಲಿ ಶಾಲಾ-ಕಾಲೇಜು, ಎನ್ ಸಿಸಿ, ಸ್ಕೌಟ್ ಗೈಡ್ಸ್ ಮಕ್ಕಳ, ಪಥ ಸಂಚಲನ, ರೂಪಕಗಳು ಹಾಗೂ ಚನ್ನಮ್ಮನ ಚರಿತ್ರ ಬಿಂಬಿತ ಇತಿಹಾಸದ ಗೊಷ್ಠಿಗಳು ಹಾಗೂ ಒಂದು ದಿನದ ರಸಮಂಜರಿ, ಕಿರು ನಾಟಕ, ಚನ್ನಮ್ಮನ ಮೇಲಿನ ಜಾನಪದ ಸಾಹಿತ್ಯದ ಹಾಡು, ಲೇಜರ್ ಶೋ, ಭಜನೆ ಮನರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಸರ್ಕಾರ ಈ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯವಹಿಸಿದ್ದೆ ಆದರೆ ಬೈಲಹೊಂಗಲ ನಾಡಿನ ಜನ ಹಾಗೂ ಚನ್ನಮ್ಮನ ಅಭಿಮಾನಿಗಳು ಬಿದಿಗಿಳಿದು ಹೋರಾಟ ಮಾಡಬೇಕಾಗುತ್ತದೆ.
ಆದ್ದರಿಂದ ಚನ್ನಮ್ಮಾಜಿಯ ಸಮಾಧಿ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವದರೊಂದಿಗೆ ಚನ್ನಮ್ಮಳ ಸಮಾಧಿ ಸ್ಥಳದ ಮಹತ್ವ ನಾಡಿನ ಯುವ ಪಿಳಿಗೆಗೆ ತಿಳಿಸಬೇಕೆಂದರು.
ಪ್ರತಿಭಟಣೆಯಲ್ಲಿ ಸುನಿಲ ಪಾಟೀಲ, ಮಹಾಂತೇಶ ಮತ್ತಿ ಕೊಪ್ಪ, ಪರ್ವತಗೌಡ ಪಾಟೀಲ,
ಈರಣ್ಣ ಬೆಟಗೇರಿ, ಶ್ರೀಶೈಲ ಶರಣಪ್ಪನವರ, ಸುಭಾಷ ತುರಮರಿ, ಮಹೇಶ ಕೊಟಗಿ, ಬಿ.ಬಿ.ಸಂಗನಗೌಡರ, ಶ್ರೀಕಾಂತ ಶಿರಹಟ್ಟಿ, ಸುನಿಲ ಮರಕುಂಬಿ, ಸಿದ್ದರೋಢ ಹೊಂಡಪ್ಪನವರ, ಮಹಾಂತೇಶ ಅಕ್ಕಿ, ರವೀಂದ್ರ ರೆಣಕೆ, ಸಿ.ಜಿ.ಉಂಡಿ, ಎಮ್.ಆರ್.ಉಪ್ಪಿನ, ವಿ.ಪಿ.ಈಟಿ, ಗೌಡಪ್ಪ ಹೊಸಮನಿ, ರವಿ ತುರಮರಿ, ಸಂತೋಷ ಕೊಳವಿ, ಬಸವರಾಜ ದೊಡಮನಿ, ಸ್ವಾಭಿಮಾನ ಕ್ರಿಯಾಶೀಲ ಗೆಳೆಯರ ಬಳಗದ ಸದಸ್ಯರು ಮಾಜಿ ಯೋಧರು ಉಪಸ್ಥಿತರಿದ್ದರು.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆನಕನಹಳ್ಳಿಯಲ್ಲಿ ಪುನಶ್ಚೇತನಗೊಂಡ 988ನೇ ಕೆರೆಗೆ ಲಕ್ಷ್ಮೀ ಹೆಬ್ಬಾಳಕರ್ ಬಾಗಿನ ಅರ್ಪಣೆ ಕೆರೆಗಳ ಪುನಶ್ಚೇತನದಿಂದ ಅಂತರ್ಜಲ ವೃದ್ಧಿ, ರೈತರಿಗೆ ಅನುಕೂಲ: ಲಕ್ಷ್ಮೀ ಹೆಬ್ಬಾಳಕರ್ಹಿರೇಹಟ್ಟಿಹೊಳಿ ಗ್ರಾಮದಲ್ಲಿ ಪುನರ್ವಸತಿ ವಸತಿ ಯೋಜನೆಗೆ ಚಾಲನೆಮಹಾದೇವ ಭಾಂದುರ್ಗೆ ನಿಧನಸಮಾಜಕ್ಕೆ ಉತ್ತಮ ಸಂದೇಶ ನೀಡುವ ಗುಣಮಟ್ಟದ ಚಿತ್ರಗಳು ನಿರ್ಮಾಣವಾಗಲಿ : ಮಾಜಿ ಶಾಸಕ ವಿ.ಐ. ಪಾಟೀಲ್ನಿನ್ನೆ ನಡೆದ  ಗೋಕಾಕ್ ಬಳಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ! ಸ್ಥಳದಲ್ಲೇ ಮೂವರ ಸಾವು, ನಾಲ್ವರ ಸ್ಥಿತಿ ಗಂಭೀರಬೆಳಗಾವಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಗಳ ಚಾಲಕರ ಪ್ರತಿಭಟನೆಕೋಡಿಹಳ್ಳಿ ಚಂದ್ರಶೇಖರ್ ಸುದ್ದಿ ಗೋಷ್ಠಿಬೆಳಗಾವಿಯಲ್ಲಿ ಅಲ್ಪಾವಯೊಲೆಟ್‌ನ 10ನೇ ಎಕ್ಸ್‌ಪೀರಿಯನ್ಸ್ ಸೆಂಟರ್ ಆರಂಭಕೆಎಸ್ಐಐಡಿಸಿ ರಾಜ್ಯ ನಿರ್ದೇಶಕರಾಗಿ ಮಲ್ಲೇಶ್ ಚೌಗುಲೆ ನೇಮಕಕಷ್ಟ-ಸುಖಗಳಲ್ಲೂ ಸಮಭಾವ ಕಂಡುಕೊಳ್ಳಬೇಕು. ಯುವಜನತೆ ಬದುಕಿನ ಸಾರ್ಥಕತೆ ಅರಿತು ಶ್ರೇಷ್ಠ ಸಾಧಕರಾಗಲಿ: ಬಸವರಾಜ ಬೊಮ್ಮಾಯಿ.