LIVE TV LocalCrimeStateNationalInternationalPoliticsAstrologyLifestyleJobsBusinessSportsHealthFeatureTravelingCinemaRecipes

'ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ'- ಸಿಎಂ ಸ್ಪಷ್ಟನೆ

ಬೆಂಗಳೂರು : ಶಕ್ತಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸರ್ಕಾರದ ಮುಂದೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಡಿಸಿಎಂ ಹೇಳಿಕೆ ವಿಚಾರವಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಕ್ತಿ ಯೋಜನೆ ಪರಿಷ್ಕರಣೆ ಇಲ್ಲ. ನಿನ್ನೆಯ ಕಾರ್ಯಕ್ರದಲ್ಲಿ ನಾನು ಇರಲಿಲ್ಲ. ನಾನು ಮಂತ್ರಿಗಳ ಜೊತೆ ಮಾತಾಡುತ್ತೇನೆ. ಪರಿಷ್ಕರಣೆಯ ಯಾವುದೇ ಉದ್ದೇಶವಿಲ್ಲ. ಆ ರೀತಿ ಪ್ರಸ್ತಾಪವೂ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದರು.

ಮುಂದುವರೆದು ಬಿಜೆಪಿಯವರು ರಾಜಕೀಯಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ ಕಾಲದಲ್ಲೂ ನೋಟೀಸ್ ಕೊಟ್ಟಿದ್ದರೂ ಅದಕ್ಕೇನು ಹೇಳುತ್ತಾರೆ? 200ಕ್ಕೂ ಹೆಚ್ಚು ನೋಟಿಸ್ ಕೊಟ್ಟಿದ್ದರು. ಇಂತಹ ರಾಜಕೀಯ ಬಿಜೆಪಿ ಮಾಡಬಾರದು. ಅವರ ಕಾಲದಲ್ಲಿಯೇ ನೋಟಿಸ್ ಕೊಡುವುದಕ್ಕೆ ಆರಂಭ ಆಗಿದ್ದು, ನಾನು ಈಗಾಗಲೇ ಎಲ್ಲಾ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದೇನೆ. ಯಾರನ್ನು ಒಕ್ಕಲೆಬ್ಬಿಸುವುದಿಲ್ಲ. ಇದರಲ್ಲಿ ಇನ್ನೇನು ವಿವಾದವಿಲ್ಲ. ಯಾವುದೇ ಜಿಲ್ಲೆಯಲ್ಲಿ ನೋಟಿಸ್ ಕೊಟ್ಟಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿದರು.

ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಬಿಜೆಪಿ ಅವರು ನೋಟಿಸ್ ಕೊಟ್ಟಿದ್ದರು. ಯಾಕೆ ಕೊಟ್ಟಿದ್ದರು? ಈ ಇಬ್ಬಂದಿ ರಾಜಕೀಯ ಯಾಕೆ ಮಾಡುತ್ತಾರೆ? ನ.4 ರಂದು ಪ್ರತಿಭಟನೆ ಮಾಡುತ್ತಿದ್ದಾರೆ. 3 ಉಪಚುನಾವಣೆ ಮತ್ತು ಮಹಾರಾಷ್ಟ್ರ ಚುನಾವಣೆ ಇದೆಯಲ್ಲ ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ. ಇದೆಲ್ಲಾ ರಾಜಕೀಯ ಮಾಡುವ ಕಾರಣಕ್ಕಾಗಿ ಮಾಡುತ್ತಾರೆ. ಅವರು ಯಾವತ್ತು ಸತ್ಯ ಹೇಳುವುದಿಲ್ಲ. ಬರೀ ಸುಳ್ಳನ್ನೇ ಹೇಳುತ್ತಾರೆ. ವಿಷಯ ಇಲ್ಲದೇ ಇದ್ದರೂ ವಿವಾದ ಮಾಡುತ್ತಾರೆ. ಮುಡಾದಲ್ಲಿ ವಿವಾದ ಇರಲಿಲ್ಲ. ಆದರೂ ಬಿಜೆಪಿಯವರು ಅದನ್ನು ವಿವಾದವನ್ನಾಗಿ ಮಾಡಿದರು. ಅದೇ ಅವರ ಗುಣ ಎಂದು ಆಕ್ರೋಶ ಹೊರಹಾಕಿದರು.

 
Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸರ್ಪಸಂಸ್ಕಾರ ಒಂದೇ ಸಾಕು ಮದುವೆ ಸಂತಾನ ಆರೋಗ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಸರ್ಪ ಸಂಸ್ಕಾರದ ಮಹತ್ವ ತಿಳಿದು ಪರಿಹಾರ ಮಾಡಿಕೊಳ್ಳಿ....!ದಿನದ ಮಂಡಕ್ಕಿ ಒಗ್ಗರಣೆ –ಮಿರ್ಚಿ.! 19-08-2025..!-ಜೇಡರ ದಾಸಿಮಯ್ಯ ಅವರ  ವಚನ.!ಧರ್ಮಸ್ಥಳ ಪ್ರಕರಣಕ್ಕೆ ಹೊಸ ತಿರುವು: “ಸುಳ್ಳು ಹೇಳುವಂತೆ ನನ್ನನ್ನು ಬಲವಂತಪಡಿಸಿದ್ದರು” – ಎಸ್ಐಟಿ ಮುಂದೆ ಮುಸುಕುಧಾರಿ ಸ್ಫೋಟಕ ಮಾಹಿತಿದೂರುದಾರ, ದೂರುದಾರನ ಹಿಂದಿರುವ ವ್ಯಕ್ತಿಗಳ ಕುರಿತು ಸಮಗ್ರ ತನಿಖೆಗೆ ವಿಜಯೇಂದ್ರ ಆಗ್ರಹಸದನದಲ್ಲೂ ‌ಸುದ್ದಿಯಾದ ಧರ್ಮಸ್ಥಳ ಪ್ರಕರಣ: ಗೃಹ ಸಚಿವರು ಹೇಳಿದ್ದೇನು ಗೊತ್ತಾ?'ಧರ್ಮಸ್ಥಳದಲ್ಲಿ ಶವ ಶೋಧ ತಾತ್ಕಾಲಿಕ ಸ್ಥಗಿತ'- ಪರಮೇಶ್ವರ್'ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ'- ಮುನಿಯಪ್ಪಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ನೇಮಕಾತಿ ಅರ್ಜಿ ಆಹ್ವಾನಸಣ್ಣ ತಪ್ಪುಗಳಿಗೆ ಜೈಲು ಶಿಕ್ಷೆ ವಿಧಿಸುವಂತಿಲ್ಲ, ತಿದ್ದುಪಡಿಗೆ ಮುಂದಾದ ಕೇಂದ್ರ ಸರ್ಕಾರ!!