Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಶಿವಮೊಗ್ಗದ ಸಕ್ರೆಬೈಲಿನಲ್ಲಿ ಸೆಪ್ಟಿಕ್ ಶಾಕ್‌ನಿಂದಲೇ ಆನೆ ಸಾವು ಶಂಕೆ: ಡಿಸಿಎಫ್ ಪ್ರಸನ್ನ ಕುಮಾರ್ ಪಟಗಾರ್ ಮಾಹಿತಿ

ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ಸುಮಾರು 32 ವರ್ಷ ಪ್ರಾಯದ ಆನೆಯೊಂದು ಅನಾರೋಗ್ಯ ಹಾಗೂ ಗಂಭೀರ ಸೋಂಕಿನಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮುಂಜಾನೆ ಮೃತಪಟ್ಟಿದೆ. ಗಾಯದ ಸೋಂಕು ಹಾಗೂ ಸೆಪ್ಟಿಕ್ ಶಾಕ್ ಆನೆಯ ಸಾವಿಗೆ ಕಾರಣವಾಗಿರಬಹುದು ಎಂದು ಅರಣ್ಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಸನ್ನ ಕುಮಾರ್ ಪಟಗಾರ್ ತಿಳಿಸಿದ್ದಾರೆ.

ಕ್ರಾಲ್‌ನಲ್ಲಿ ಗಾಯ ಮಾಡಿಕೊಂಡಿದ್ದ ಆನೆ:

ಬಿಡಾರದ ಕ್ರಾಲ್‌ನಲ್ಲಿದ್ದ ವೇಳೆ ಈ ಆನೆ ಅತ್ಯಂತ ಆಕ್ರಮಣಕಾರಿ ವರ್ತನೆ ತೋರುತ್ತಿತ್ತು. ಕ್ರಾಲ್‌ನಿಂದ ಹೊರಬರಲು ನಿರಂತರವಾಗಿ ಯತ್ನಿಸುತ್ತಿದ್ದ ವೇಳೆ ಮರದ ದಿಮ್ಮಿಗಳಿಗೆ ಡಿಕ್ಕಿ ಹೊಡೆದುಕೊಂಡು ಮೈಮೇಲೆ ಗಾಯಗಳನ್ನು ಮಾಡಿಕೊಳ್ಳುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಅದರ ಮೇಲೆ ನಿಗಾ ಇರಿಸಿ, ಪಶುವೈದ್ಯರಿಂದ ನಿರಂತರವಾಗಿ ಪ್ರಥಮ ಚಿಕಿತ್ಸೆ ಕೊಡಿಸುತ್ತಿದ್ದರು. ನಂತರ ಕ್ರಾಲ್‌ನಿಂದ ಹೊರತಂದು ತರಬೇತಿ ನೀಡುವ ಸಂದರ್ಭದಲ್ಲೂ ಕಾಲಿನ ಭಾಗಕ್ಕೆ ಸಣ್ಣಪುಟ್ಟ ಪೆಟ್ಟುಗಳು ಬಿದ್ದಿದ್ದವು. ತಕ್ಷಣವೇ ಚಿಕಿತ್ಸೆ ನೀಡಿದ್ದರಿಂದ ಆನೆ ಚೇತರಿಸಿಕೊಳ್ಳುವ ಲಕ್ಷಣಗಳೂ ಕಂಡುಬಂದಿದ್ದವು.

ಆಳವಾದ ಒಳಗಾಯ, ತಜ್ಞ ವೈದ್ಯರ ತಂಡದಿಂದ ಚಿಕಿತ್ಸೆ:

ಆದರೆ, ಇತ್ತೀಚೆಗೆ ಆನೆಯ ಎಡ ಹಿಂಗಾಲಿನ ತೊಡೆಯ ಮೇಲ್ಭಾಗದಲ್ಲಿ ಆಳವಾದ ಒಳಗಾಯ ಇರುವುದು ಪತ್ತೆಯಾಗಿತ್ತು. ಪಶುವೈದ್ಯರು ಗಾಯವನ್ನು ಪರೀಕ್ಷಿಸಿದಾಗ ಒಳಭಾಗದಲ್ಲಿ ಜೀವಕೋಶಗಳು ಕೊಳೆತುಹೋಗಿರುವುದು (ನೆಕ್ರೋಸಿಸ್ ಹಾಗೂ ಡೆಡ್ ಟಿಶ್ಯೂ) ಗಮನಕ್ಕೆ ಬಂದಿತ್ತು. ಕೂಡಲೇ ಹಾನಿಗೊಳಗಾಗಿದ್ದ ಅಂಗಾಂಶಗಳನ್ನು ತೆರವುಗೊಳಿಸಿ, ಹೊಸ ಜೀವಕೋಶಗಳು ಬೆಳೆಯಲು ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿತ್ತು. ಇಬ್ಬರು ನುರಿತ ತಜ್ಞ ಪಶುವೈದ್ಯರ ತಂಡವು ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸಾ ವಿಧಾನವನ್ನು ಪರಿಶೀಲಿಸಿ, ಅದೇ ಶುಶ್ರೂಷೆಯನ್ನು ಮುಂದುವರಿಸಲು ಸೂಚಿಸಿತ್ತು.

ಚಿಕಿತ್ಸೆ ಫಲಿಸದೆ ಮುಂಜಾನೆ ಸಾವು:

ಬುಧವಾರ ರಾತ್ರಿ 11 ಗಂಟೆಯ ಸುಮಾರಿಗೆ ಆನೆ ಏಕಾಏಕಿ ಕುಸಿದುಬಿದ್ದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರ ತಂಡ, ಗ್ಲೂಕೋಸ್ ಮತ್ತು ಅಗತ್ಯ ಜೀವ ರಕ್ಷಕ ದ್ರವಗಳನ್ನು ನೀಡಿ ಆನೆಯನ್ನು ಎಬ್ಬಿಸಲು ಹರಸಾಹಸ ಪಟ್ಟಿತು. ಆದರೆ ಆನೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಬೆಳಗ್ಗೆ ಸುಮಾರು 8 ಗಂಟೆಗೆ ಕೊನೆಯುಸಿರೆಳೆದಿದೆ.

ಗಾಯದಲ್ಲಿ ಬ್ಯಾಕ್ಟೀರಿಯಾಗಳು ವೃದ್ಧಿಯಾಗಿ ವಿಷಕಾರಿ ಅಂಶಗಳು ರಕ್ತಕ್ಕೆ ಸೇರಿ (ಟಾಕ್ಸೇಮಿಯಾ), ಸೆಪ್ಟಿಕ್ ಶಾಕ್ ಉಂಟಾಗಿರಬಹುದು. ಅಲ್ಲದೆ, ಸೋಂಕು ಮೂಳೆಗಳಿಗೂ ಹರಡಿ ಸಾವು ಸಂಭವಿಸಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ.

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೈಸೂರು-ರಾಮೇಶ್ವರಂ ನಡುವೆ ವಿಶೇಷ ರೈಲುಗಳ ಸಂಚಾರ15 ದಿನದೊಳಗೆ ಗ್ರಾಮ ಪಂಚಾಯಿತಿ, ವಾರ್ಡ್ ಮಟ್ಟದಲ್ಲಿ 'ಗ್ಯಾರಂಟಿ ಸಮಿತಿ ರಚನೆ'ಗೆ ಸರ್ಕಾರ ಖಡಕ್ ಆದೇಶತಿರುಮಲದ ಕರ್ನಾಟಕ ಪ್ರವಾಸಿ ಸೌಧ ನಿರ್ವಹಣೆ KSTDCಗೆ: ಸಚಿವ ಕೆ.ಜೆ. ಜಾರ್ಜ್ವಿಶೇಷಚೇತನರ ಮಾಸಾಶನವನ್ನು 5,000 ರೂ.ಗೆ ಏರಿಕೆ ಮಾಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ‘ಆಕ್ಟಿವ್ ಕರ್ನಾಟಕ’ ಮೂಲಕ ಕ್ರೀಡೆ–ಪ್ರವಾಸೋದ್ಯಮ ಸಂಪರ್ಕ: ಸಚಿವ ಕೆ.ಜೆ. ಜಾರ್ಜ್ಪರಿಶಿಷ್ಟ ಪಂಗಡದ ಕಟ್ಟ ಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವುದೇ ನನ್ನ ಗುರಿ: ಸಚಿವ ಟಿ.ರಘುಮೂರ್ತಿBIG BREAKING: ತಾವು ಕರ್ತವ್ಯ ನಿರ್ವಹಿಸುವ 'ಕೇಂದ್ರ ಸ್ಥಾನ'ಗಳಲ್ಲೇ 'ಅಧಿಕಾರಿ, ಸಿಬ್ಬಂದಿ ವಾಸ' ಕಡ್ಡಾಯ: ರಾಜ್ಯ ಸರ್ಕಾರ ಆದೇಶಚುನಾವಣಾ ವ್ಯವಸ್ಥೆ ಸುಧಾರಣೆಯಾಗದಿದ್ದರೆ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಿಲ್ಲ: ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮತBREAKING: ರಾಜ್ಯ ಸಚಿವ ಸಂಪುಟ ಸಭೆ ದಿಢೀರ್ ರದ್ದು, ಚುನಾವಣಾ ಆಯೋಗ ಮುಂದೆ ಸಿಎಂ ಸೇರಿ ಸಚವರು ಧರಣಿBREAKING: ಫಾರ್ಮ್-7 ಸಲ್ಲಿಕೆ ಅಕ್ರಮ: ಚು.ಆಯೋಗದ ಕಚೇರಿ ಎದುರು ಸಿಎಂ ಡಿ.ಕೆ. ಶಿವಕುಮಾರ್, ಸಚಿವರು ಧರಣಿ ಪ್ರತಿಭಟನೆ